ಬೆಂಗಳೂರು: ನಟ ಪುನೀತರಾಜಕುಮಾರ ಅಭಿನಯದ ಯುವರತ್ನ ಚಿತ್ರ ಏಪ್ರಿಲ್ 21ಕ್ಕೆ ಬಿಡುಗಡೆಗೊಳ್ಳಲಿದೆ ಎಂದು ನಿರ್ದೇಶಕ ಸಂತೋಷ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದು, ಪುನೀತ್ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಸಂತಸ ಮೂಡಿಸಿತ್ತು.

ಆದರೆ, ಕಿಡಿಗೇಡಿಗಳು ನಿರ್ದೇಶಕರ ಹೆಸರಲ್ಲಿ ಟ್ವೀಟ್ ಮಾಡಿದ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ನಿರ್ದೇಶಕ ಸಂತೋಷ ಆನಂದ್ ರಾಮ್ ತಮ್ಮ ಆಫೀಸಿಯಲ್ ಟ್ವೀಟರ್ನಲ್ಲಿ ಈ ವಂದತಿಗೆ ಕಿವಿಗೊಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಕೊರೊನಾ ಸೋಂಕಿನ ಹಿನ್ನೆಲೆ ಯುವರತ್ನ ಸಿನಿಮಾ ಬಿಡುಗಡೆ ಮುಂದೂಡಿದೆ. ಇನ್ನೂ 2 ಹಾಡುಗಳ ಚಿತ್ರೀಕರಣವಿದೆ. ಅಲ್ಲದೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಪಕ್ಕಾ ಮುಗಿದ ಮೇಲೆ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಫಿಲಂಸ್ ತಿಳಿಸುತ್ತದೆ.
ಪ್ರಚಾರ, ಆಡಿಯೋ - ಟ್ರೈಲರ್ ರಿಲೀಸ್ ಎಲ್ಲದಕ್ಕೂ ಯೋಜನೆ ರೂಪಿಸಲಾಗುತ್ತಿದೆ. ಹೀಗಾಗಿ ದಿನಾಂಕ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪವರ್ ಸ್ಟಾರ್ಗೆ ಜೋಡಿಯಾಗಿ ಸಯೇಶಾ ಸೈಗಲ್, ಧನಂಜಯ್ ಹೀಗೆ ದೊಡ್ಡ ತಾರಗಣವೇ ಇದರಲ್ಲಿ ತೊಡಗಿಕೊಂಡಿದೆ.