ETV Bharat / sitara

ಶರ್ಮಿಳಾ ಮಾಂಡ್ರೆಗೆ ಕೊರೊನಾ ಪಾಸಿಟಿವ್​​....ಅಸಲಿ ವಿಚಾರ ಏನು..? - Clean chit to Sharmila mandre

ಕಾರು ಅಪಘಾತ ಪ್ರಕರಣದಲ್ಲಿ ಕ್ಲೀನ್​ ಚಿಟ್ ಪಡೆದಿದ್ದ ನಟಿ ಶರ್ಮಿಳಾ ಮಾಂಡ್ರೆ ಇದೀಗ ತನಗೆ ಕೊರೊನಾ ಪಾಸಿಟಿವ್ ಇದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಬೇಕಾಗುವ ಭಯಕ್ಕೆ ನಟಿ ಸುಳ್ಳು ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ.

Sharmila mandre corona positive
ಶರ್ಮಿಳಾ ಮಾಂಡ್ರೆ
author img

By

Published : Sep 3, 2020, 11:06 AM IST

ಬೆಂಗಳೂರು: ಕೊರೊನಾ ಲಾಕ್​​ ಡೌನ್ ಸಮಯದಲ್ಲಿ ಕೋವಿಡ್​​-19 ನಿಯಮಗಳನ್ನು ಉಲ್ಲಂಘಿಸಿ ಮನೆಯಿಂದ ಹೊರಬಂದು ಕಾರು ಆ್ಯಕ್ಸಿಡೆಂಟ್ ಮಾಡಿಕೊಂಡಿದ್ದ ಶರ್ಮಿಳಾ ಮಾಂಡ್ರೆಗೆ ಹೌಗ್ರೌಂಡ್ ಸಂಚಾರಿ ಪೊಲೀಸರು ಇತ್ತೀಚೆಗೆ ಕ್ಲೀನ್​ಚಿಟ್ ನೀಡಿದ್ರು. ಇದೀಗ ನಟಿ ನನಗೆ ಕೊರೊನಾ ಪಾಸಿಟಿವ್ ದೃಢವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

Sharmila mandre corona positive
ಶರ್ಮಿಳಾ ಮಾಂಡ್ರೆ ಫೇಸ್​​​ಬುಕ್ ಪೋಸ್ಟ್

'ನನಗೂ ಸೇರಿದಂತೆ ನನ್ನ ಮನೆಯ ಕೆಲವು ಸದಸ್ಯರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ವೈದ್ಯರ ಸೂಚನೆ ಪ್ರಕಾರ ನಾವು ಮನೆಯಲ್ಲೇ ಕ್ವಾರಂಟೈನ್​​ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದೇವೆ' ಎಂದು ಶರ್ಮಿಳಾ ಹೇಳಿಕೊಂಡಿದ್ದಾರೆ. ಆದರೆ ವಿಚಾರಣೆಯ ಭಯಕ್ಕೆ ಆಕೆ ಇಲ್ಲದ ನೆಪ ಹೇಳುತ್ತಿದ್ದಾರೆ ಎಂಬ ಅನುಮಾನ ಕಾಡತೊಡಗಿದೆ. ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಟಿಯ ಕಾರು ಅಪಘಾತದ ಬಗ್ಗೆ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶರ್ಮಿಳಾ ಮಾಂಡ್ರೆ, ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

Sharmila mandre corona positive
ಶರ್ಮಿಳಾ ಮಾಂಡ್ರೆ

'ನಮ್ಮದು ಗೌರವಯುತವಾದ ಕುಟುಂಬ. ನಮಗೂ ಈ ಡ್ರಗ್ಸ್​​​​​​​​​​​​​ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ತಂದೆ, ತಾತನಿಗೆ ಒಳ್ಳೆಯ ಹೆಸರಿದೆ. ನಾನು ಅವರ ಗೌರವಕ್ಕೆ ಧಕ್ಕೆ ತರುವಂತೆ ಕೆಲಸ ಮಾಡುವುದಿಲ್ಲ' ಎಂದು ಶರ್ಮಿಳಾ ಹೇಳಿದ್ದರು. ಆದರೆ ನಿನ್ನೆ ಸ್ಯಾಂಡಲ್​ವುಡ್ ಸ್ಟಾರ್ ನಟಿಯೊಬ್ಬರಿಗೆ ಸಿಸಿಬಿ ಅಧಿಕಾರಿಗಳು ನೋಟೀಸ್ ನೀಡಿದ ಬೆನ್ನಲ್ಲೇ ಶರ್ಮಿಳಾ ಮಾಂಡ್ರೆಗೂ ಭಯ ಕಾಡತೊಡಗಿದೆ. ಹಾಗಾಗಿ ಕೊರೊನಾ ಪಾಸಿಟಿವ್ ಬಂದಿದೆ ಎಂಬ ನಾಟಕ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.