ETV Bharat / sitara

ಪವರ್‌ಸ್ಟಾರ್ ಪುನೀತ್​ ಬಗ್ಗೆ ದಾನೀಶ್ ಸೇಠ್ ಏನಂದ್ರು ಗೊತ್ತಾ?: ವಿಶೇಷ ಸಂದರ್ಶನ - ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್ ಸಿನಿಮಾ

ಹಂಬಲ್ ಪೊಲಿಟಿಷಿಯನ್ ನೊಗ್‌ ರಾಜ್ ವೆಬ್ ಸೀರಿಸ್ ಮೂಲಕ ಸುದ್ದಿಯಲ್ಲಿರುವ ದಾನೀಶ್ ಸೇಠ್, ಪುನೀತ್ ರಾಜ್ ಕುಮಾರ್ ಹಾಗು ತಮ್ಮ ಕಾಮಿಡಿ ಸೀಕ್ರೆಟ್​ ಬಗ್ಗೆ ಸಾಕಷ್ಟು ವಿಚಾರಗಳನ್ನು ಈಟಿವಿ ಭಾರತ್ ಜೊತೆ ಹಂಚಿಕೊಂಡರು.

ಪವರ್ ಸ್ಟಾರ್ ಪುನೀತ್​ ಬಗ್ಗೆ  ದಾನೀಶ್ ಸೇಠ್ ಏನಂದ್ರು ಗೊತ್ತಾ?

author img

By

Published : Jan 6, 2022, 8:57 PM IST

Updated : Jan 6, 2022, 9:04 PM IST

'ಹಂಬಲ್ ಪೊಲಿಟಿಷಿಯನ್ ನೊಗ್‌ ರಾಜ್' ಸಿನಿಮಾದಲ್ಲಿ ವಿಭಿನ್ನ ಹಾಸ್ಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದವರು ದಾನೀಶ್ ಸೇಠ್. ತಮ್ಮ ವಿಭಿನ್ನ ಶೈಲಿಯ ಹಾಸ್ಯ ಹಾಗು ರಾಯಲ್ಸ್ ಚಾಲೆಂಜರ್ಸ್‌ ಬೆಂಗಳೂರು ಕ್ರಿಕೆಟ್‌ ತಂಡದ ಇನ್​​ಸೈಡರ್ ಆಗಿ ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ದಾನೀಶ್ ಸೇಠ್, ಈಗ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ.

ಹಂಬಲ್‌ ಪೊಲಿಟಿಷಿಯನ್ ನೊಗ್‌ ರಾಜ್‌ ವೆಬ್​ ಸೀರಿಸ್ ಬಗ್ಗೆ ಮಾತು

'ನಾನು ದೊಡ್ಡ ಸ್ಟಾರ್ ಅಲ್ಲ. ಯಾಕಂದ್ರೆ ದೊಡ್ಡ ಸ್ಟಾರ್ ನಟನಾದ್ರೆ ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದ್ರೆ ಪ್ರೇಕ್ಷಕರು ಬರ್ತಾರೆ. ಹೀಗಾಗಿ ನಾನು ನಿಮ್ಮ ಮನೆಗೆಯೇ ಬಂದು ನಗಿಸ್ತೀನಿ' ಎಂದರು.

'ಸಿನಿಮಾ ರಂಗದಲ್ಲಿ ಒಂದು ಸಿನಿಮಾ ಹಿಟ್ - ಪ್ಲಾಫ್ ಅಂತಾ ನನಗೆ ಗೊತ್ತಿಲ್ಲ. ಯಾಕಂದ್ರೆ ಸಿನಿಮಾ ಅನ್ನೋದು ವ್ಯಾಪಾರ. ನಮ್ಮ ಕನ್ನಡದ ಶೋಗಳನ್ನು ಸ್ಪೇನ್‌ನಲ್ಲಿ ನೋಡ್ತಾರೆ ಅಂದ್ರೆ ನಮಗೆ ತಾನೇ ಹೆಮ್ಮೆ?. ನನಗೆ ನನ್ನ ಕೆಲಸದ ಮೇಲೆ ತುಂಬಾ ನಂಬಿಕೆ ಇದೆ. ನಾನು ಪ್ರತಿದಿನ ಎದ್ದಾಗ ಕಾಮಿಡಿ ಬಗ್ಗೆ ಒಂದು ಸ್ಕ್ರಿಪ್ಟ್ ಬರೆದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕ್ತೀನಿ' ಎಂದು ದಾನೀಶ್‌ ಹೇಳಿದರು.

'ಮೊದಲು ಸಿನಿಮಾ ಶೂಟಿಂಗ್ ಹೇಗೆ ಆಗುತ್ತೆ, ಸಿನಿಮಾಗಳಲ್ಲಿ ಲೈಟಿಂಗ್ ಮಾಡಲು ಎಷ್ಟು ಸಮಯ ಬೇಕು ಅನ್ನೋದು ಗೊತ್ತಿರಲಿಲ್ಲ. ಈಗ ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್ ವೆಬ್ ಸೀರೀಸ್‌ನಲ್ಲಿ ನಾನು ಸಿಎಂ ಆಗೋದಿಕ್ಕೆ ಏನೆಲ್ಲಾ ಮಾಡ್ತೀನಿ ಅನ್ನೋದನ್ನು ಕಾಮಿಡಿ ಮೂಲಕ ಹೇಳಿದ್ದೇವೆ. ಇಲ್ಲಿ ಪಾತ್ರಕ್ಕಾಗಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೀನಿ' ಎಂದು ಪಾತ್ರ ಪರಿಚಯ ಮಾಡಿದರು.

ತಮ್ಮ ವ್ಯಕ್ತಿತ್ವದ ಬಗ್ಗೆ ಏನಂತಾರೆ 'ನೊಗ್​ ರಾಜ್'?​

'ಚಿಕ್ಕವಯಸ್ಸಿನಲ್ಲೇ ನಮ್ಮ ತಾಯಿ ಒಂದು ಟೇಪ್ ರೆಕಾರ್ಡರ್ ಹಾಕಿಸಿ ಮಾತನಾಡಲು ಹೇಳಿದರು. ಆಗ ನಾನು ಬೇರೆ ಬೇರೆ ಶೈಲಿಯಲ್ಲಿ ಮಾತನಾಡುತ್ತಿದ್ದೆ. ಆ ಮೂಲಕ ನನಗೆ ವಿಭಿನ್ನ ಶೈಲಿಯಲ್ಲಿ ಮಾತನಾಡುವುದಕ್ಕೆ ಹಾಗೂ ಹಾಸ್ಯ ಮಾಡುವುದಕ್ಕೆ ಸಾಧ್ಯವಾಯ್ತು' ಎನ್ನುತ್ತಾರೆ ದಾನೀಶ್‌ ಸೇಠ್‌.

ಕ್ರಿಕೆಟ್ ಆಟಗಾರರ ಜೊತೆ ನಿಮ್ಮ ಒಡನಾಟ ಹೇಗಿದೆ?

ಕ್ರಿಕೆಟಿಗರ ಹೆಸರು ಬಳಸಿ ನಾನು ಪ್ರಚಾರ ಮಾಡಿಕೊಳ್ಳಲ್ಲ. ಕ್ರಿಕೆಟಿಗರಲ್ಲಿ ತುಂಬಾ ಜನ ಆತ್ಮೀಯ ಸ್ನೇಹಿತರಾಗಿದ್ದಾರೆ. ಕೆಲವರು ಮನೆಗೆ ಬರ್ತಾರೆ, ಕೆಲವರು ಫೋನ್‌ನಲ್ಲಿ ಆಗಾಗ ಮಾತನಾಡುತ್ತಿರುತ್ತಾರೆ ಎಂದು ಉತ್ತರಿಸಿದರು.

ದಿ.ಪುನೀತ್​ ರಾಜ್​ಕುಮಾರ್​ ಬಗ್ಗೆ ಪ್ರಶಂಸೆ​

'ಪುನೀತ್ ಅಣ್ಣ ನನ್ನ ಫ್ಯಾಮಿಲಿ, ನನ್ನ ಮೆಂಟರ್, ನನ್ನ ಫ್ರೆಂಡ್ ಥರ. ಅವರ ಬಗ್ಗೆ ಏನು ಹೇಳಲಿ? ಪುನೀತ್ ಅಣ್ಣ ನನ್ನ ಮದುವೆಗೆ ಬಂದಿದ್ದರು ಅಂದ್ರೆ ನನ್ನ ಜೊತೆಗಿನ ಬಾಂಧವ್ಯವನ್ನು ನೀವೇ ಅರ್ಥೈಸಿಕೊಳ್ಳಿ' ಎಂದು ಅವರು ಹೇಳಿದರು.

Last Updated : Jan 6, 2022, 9:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.