ಬಾಲಿವುಡ್ ಹಾಟ್ ಬೆಡಗಿ ಇಶಾ ಗುಪ್ತಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆದ್ರೆ ಈ ಬಾರಿ ತಮ್ಮ ಬೋಲ್ಡ್ನೆಸ್ನಿಂದ ಸುದ್ದಿಯಾಗಿಲ್ಲ. ಬದಲಾಗಿ ತನ್ನ ಪ್ರಿಯಕರನನ್ನು ಅಧಿಕೃತವಾಗಿ ಪರಿಚಯ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ, ನಾನು ನಿನ್ನ ಪ್ರೀತಿಸುತ್ತಿದ್ದೇನೆ. ಮೈ ಲವ್ ಎಂದು ಬರೆದುಕೊಂಡಿದ್ದಾರೆ. ಇನ್ನು ತಾವು ಪ್ರೀತಿಸುತ್ತಿರುವ ಹುಡುಗನ ಹೆಸರು ಮ್ಯಾನ್ಯುಯಲ್ ಕಂಪೋಸ್. ಈತ ಸ್ಪ್ಯಾನಿಶ್ ಮೂಲದವರು.
- " class="align-text-top noRightClick twitterSection" data="
">
ನಟಿಯು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಆ ಫೋಟೋಕ್ಕೆ ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 155 ಸಾವಿರ ಲೈಕ್ಗಳು ಹಾಗೂ ಹಲವು ಬ್ಯೂಟಿಫೂಲ್ ಕಮೆಂಟ್ಗಳು ಬಂದಿವೆ.
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ್ದ ಇಶಾ, ನಾನು ನನ್ನ ಗೆಳೆಯನ ಜೊತೆ ಸಂಪರ್ಕದಲ್ಲಿದ್ದೇನೆ. ಸ್ಪೈನ್ನಲ್ಲಿ ಕೂಡ ಕೊರೊನಾ ಭೀತಿ ಇರುವುದರಿಂದ ಪ್ರತಿ ದಿನ ಆತನ ಆರೋಗ್ಯ ವಿಚಾರಿಸುತ್ತೇನೆ ಎಂದಿದ್ದಾರೆ.