ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ 'ಸಲಗ'. ಇದು ವಿಜಯ್ ನಿರ್ದೇಶನದ ಮೊದಲ ಚಿತ್ರ ಎಂಬ ವಿಶೇಷ ಒಂದೆಡೆಯಾದರೆ, ಸಿನಿಮಾ ಮೇಕಿಂಗ್ನಿಂದ ಕೂಡಾ ಸದ್ದು ಮಾಡುತ್ತಿದೆ. ಲಾಕ್ಡೌನ್ ತೆರವುಗೊಳಿದ ನಂತರ 'ಸಲಗ' ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿತ್ತಾದರೂ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.
ಇದನ್ನೂ ಓದಿ: 'ರಾಬರ್ಟ್' ಮೊದಲ ಮೇಕಿಂಗ್ ವಿಡಿಯೋ ರಿವೀಲ್...ತೆರೆ ಹಿಂದಿನ ರಹಸ್ಯ ಬಿಚ್ಚಿಟ್ಟ ಚಿತ್ರತಂಡ
'ಸಲಗ' ಚಿತ್ರದ ಕ್ರೇಜ್ ಹೇಗಿದೆ ಎಂದರೆ, ವಿಜಯ್ ಅಭಿಮಾನಿಗಳು ಚಿತ್ರದ ಹೆಸರಿನಲ್ಲಿ ನಿನ್ನೆಯಷ್ಟೇ ಕೋಲಾರದ ಮಾಲೂರಿನಲ್ಲಿ ಕ್ರಿಕೆಟ್ ಟೂರ್ನಿಯೊಂದನ್ನು ಏರ್ಪಡಿಸಿತ್ತು. ವಿಜಯ್ ಅಭಿಮಾನಿ ಸೇವಾ ಸಮಿತಿ ಈ ಕ್ರಿಕೆಟ್ ಟೂರ್ನಿಮೆಂಟ್ ಏರ್ಪಡಿಸಿತ್ತು. ಮಾಲೂರಿನ ಹೋಂಡಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಈ ಪಂದ್ಯವನ್ನು ನೋಡಲು ಕೋಲಾರ ಜಿಲ್ಲೆಯ ವಿವಿಧೆಡೆಯಿಂದ ಸಾವಿರಕ್ಕೂ ಹೆಚ್ಚು ದುನಿಯಾ ವಿಜಯ್ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಜಮಾಯಿಸಿದ್ದರು. ಈ ಕ್ರಿಕೆಟ್ ಪಂದ್ಯದಲ್ಲಿ 'ಸಲಗ' ತಂಡ ವಿಜಯ ಸಾಧಿಸಿದೆ. ದುನಿಯಾ ವಿಜಯ್, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಸೇರಿದಂತೆ 'ಸಲಗ' ಚಿತ್ರತಂಡ ಗೆಲುವಿನ ಖುಷಿಯನ್ನು ಡಾ. ರಾಜ್ಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಪುತ್ಥಳಿಗೆ ಮಾಲೆ ಅರ್ಪಿಸಿ ಗೌರವ ಸಲ್ಲಿಸುವ ಮೂಲಕ ಸಂಭ್ರಮಿಸಿದರು. ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ದುನಿಯಾ ವಿಜಯ್ ನೋಡಲು ನೂಕು ನುಗ್ಗಲು ಉಂಟಾಗಿತ್ತು. ಮೆಚ್ಚಿನ ನಟನಿಗೆ ಹಣ್ಣಿನ ಹಾರ ಹಾಕುವ ಮೂಲಕ ಅಭಿಮಾನಿಗಳು ಅಭಿಮಾನ ಮೆರೆದಿದ್ದಾರೆ. 'ಸಲಗ' ಸಿನಿಮಾ ಏಪ್ರಿಲ್ನಲ್ಲಿ ತೆರೆ ಕಾಣಲಿದೆ.