ಬಿಗ್ ಬಾಸ್ ಸೀಸನ್- 7 ಸ್ಪರ್ಧಿಯಾಗಿರುವ ದುನಿಯಾ ರಶ್ಮಿ ಮೂರನೇ ವಾರ ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಬಿಗ್‌ಬಾಸ್ ಮನೆಯ ಸದಸ್ಯರು ರಶ್ಮಿ ಸೇರಿ ಪ್ರಿಯಾಂಕ, ವಾಸುಕಿ ವೈಭವ್, ರಾಜು ತಾಳಿಕೋಟೆ ಹಾಗು ಚಂದನ್ ಆಚಾರ್ ಅವರನ್ನು ನಾಮಿನೇಟ್ ಮಾಡಿದ್ದರು.
![duniya rashmi out from big boss](https://etvbharatimages.akamaized.net/etvbharat/prod-images/4947154_thumb6.jpg)
ದುನಿಯಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಣ್ಣದ ಲೋಕದಲ್ಲಿ ಪಯಣ ಆರಂಭಿಸಿದ ಕರಾವಳಿಯ ಕುವರಿ, ತಾನು ನಟಿಸಿದ ಮೊದಲ ಚಿತ್ರದಲ್ಲಿಯೇ ಸಾಕಷ್ಟು ಹೆಸರು ಗಿಟ್ಟಿಸಿಕೊಂಡವರು. 'ದುನಿಯಾ' ಚಿತ್ರದ ನಟನೆಗಾಗಿ 'ಅತ್ಯುತ್ತಮ ನಟಿ' ಪ್ರಶಸ್ತಿಯನ್ನು ಇವರು ಮುಡಿಗೇರಿಸಿಕೊಂಡಿದ್ದಾರೆ.
![duniya rashmi out from big boss](https://etvbharatimages.akamaized.net/etvbharat/prod-images/4947154_thumb2.jpg)
ಬಾಲ್ಯದಿಂದಲೂ ನಟನೆ ಮತ್ತು ಮಾಡೆಲಿಂಗ್ನಲ್ಲಿ ವಿಶೇಷ ಒಲವು ಹೊಂದಿದ್ದ ರಶ್ಮಿ, ಮಂಗಳೂರು ಬಿಟ್ಟು ಮಹಾನಗರ ಸೇರಿದಾಗ ಅವರಿಗೆ 19 ವರ್ಷ ಪ್ರಾಯವಾಗಿತ್ತು. ಬೆಂಗಳೂರಿನ ದಯಾನಂದ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ ಸಮಯದಲ್ಲಿ ಇವರಿಗೆ ಮಾಡೆಲಿಂಗ್ ವ್ಯಾಮೋಹ ಉಂಟಾಗಿದೆ. ಮುಂದೆ 'ದುನಿಯಾ' ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿರಿಸಿದ ರಶ್ಮಿ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದು ಅವು ಯಾವುದೂ ಕೂಡಾ ಅಷ್ಟೊಂದು ಹೆಸರು ಕೊಡಲಿಲ್ಲ.
![duniya rashmi out from big boss](https://etvbharatimages.akamaized.net/etvbharat/prod-images/4947154_thumb.jpg)
ಇದೀಗ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ರಶ್ಮಿ ಮೂರು ವಾರಗಳ ಕಾಲ ದೊಡ್ಮನೆಯಲ್ಲಿದ್ದು ಇದೀಗ ಎಲಿಮಿನೇಟ್ ಆಗಿದ್ದಾರೆ ಎಂಬ ಮಾಹಿತಿ ದೊರೆತಿದೆ.
![duniya rashmi out from big boss](https://etvbharatimages.akamaized.net/etvbharat/prod-images/4947154_thumb4.jpg)