ETV Bharat / sitara

ನಟ ಜಗ್ಗೇಶ್ ವಿರುದ್ಧ ಪ್ರತಿದೂರು ಸಲ್ಲಿಸಿದ DSS ಅಧ್ಯಕ್ಷ ಸಿ ಎಸ್ ರಘು

ಜಗ್ಗೇಶ್ ಮಾಡಿರುವ​ ಟ್ವೀಟ್​ನಲ್ಲಿ, ತಮ್ಮ ಬಗ್ಗೆ ಅಧಮ ಮತ್ತು ನಾಯಿ ಎಂದೆಲ್ಲ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸಿ ಎಸ್ ರಘು ಅವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಡಾ. ರವೀಂದ್ರನಾಥ್​​ಗೆ ದೂರು ಸಲ್ಲಿಸಿದ್ದಾರೆ..

author img

By

Published : Aug 25, 2021, 10:21 PM IST

dss-president-raghu-give-complaint-against-jaggesh
ನಟ ಜಗ್ಗೇಶ್ ವಿರುದ್ಧ ದೂರು ಸಲ್ಲಿಸಿದ DSS ಅಧ್ಯಕ್ಷ ಸಿ.ಎಸ್ ರಘು

ನಟ ಜಗ್ಗೇಶ್​ ಸಹೋದರ ಕೋಮಲ್​, ವಿದ್ಯಾರ್ಥಿಗಳಿಗೆ ಸ್ವೆಟರ್ ಹಂಚಿಕೆಯಲ್ಲಿ ಬಿಬಿಎಂಪಿಯಿಂದ ಟೆಂಡರ್​ ಪಡೆದು ಅಕ್ರಮ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದ ಜಗ್ಗೇಶ್, ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಸಿ ಎಸ್ ರಘು ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಜಗ್ಗೇಶ್​ ವಿರುದ್ಧ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಸಿ ಎಸ್ ರಘು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.

ನವರಸ ನಾಯಕ ಜಗ್ಗೇಶ್ ಸಹೋದರ ಕೋಮಲ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಸ್ವೆಟರ್ ಖರೀದಿ ಟೆಂಡರ್​​ನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಸಿ ಎಸ್ ರಘು ನೇತೃತ್ವದಲ್ಲಿ ಹಲವಾರು ಕಾರ್ಯಕರ್ತರು, ನಿನ್ನೆ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.

  • ಮಾನ್ಯ #Raghu #DSS ರವರಿಗೆ..
    ಮಾನ್ಯರೆ ತಾವು ಹಾಗು ತಮ್ಮ ವಿಳಾಸ ನನಗೆ ತಿಳಿಯದ ಕಾರಣ
    ಸಾಮಾಜಿಕ ಜಾಲತಾಣ(twitter)
    ನಲ್ಲಿ ತಮಗೆ ತಿಳಿಸುತ್ತಿರುವೆ!
    ಸತ್ಯಸತ್ಯೆತೆ ನನ್ನ ಬಗ್ಗೆ ಅರಿಯದೆ ನನ್ನ ತೇಜೋವದೆ ಮಾಧ್ಯಮದ ಮುಂದೆ ಮಾಡಿದ್ದೀರಿ!
    ನಾನು ತಪ್ಪು ಮಾಡಿಲ್ಲಾ ಮಾಡುವುದು ಇಲ್ಲಾ!ಹಾಗಾಗಿ ನಿಮ್ಮ ಮೇಲೆ ಕಾನೂನು ಪ್ರಕ್ರಿಯೇ!ಉತ್ತರಿಸಿ!ಯಾರೋ pic.twitter.com/eM5t90qgzp

    — ನವರಸನಾಯಕ ಜಗ್ಗೇಶ್ (@Jaggesh2) August 25, 2021 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿದ್ದ ಜಗ್ಗೇಶ್​, ಸತ್ಯಾಸತ್ಯತೆ ಅರಿಯದೆ, ಮಾಧ್ಯಮದ ಮುಂದೆ ನನ್ನ ತೇಜೋವಧೆ ಮಾಡಿದ್ದೀರಿ. ನಾನು ತಪ್ಪು ಮಾಡಿಲ್ಲ. ಮಾಡುವುದೂ ಇಲ್ಲ ಅಂತಾ ಸರಣಿ ಟ್ಟೀಟ್ ಮಾಡಿದ್ದರು. ಅಲ್ಲದೆ, ರಘು ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿರುವ ಪ್ರತಿಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು.

ಅಸದಅಸದ
ಅಸದಅಸ

ಜಗ್ಗೇಶ್ ಮಾಡಿರುವ​ ಟ್ವೀಟ್​ನಲ್ಲಿ, ತಮ್ಮ ಬಗ್ಗೆ ಅಧಮ ಮತ್ತು ನಾಯಿ ಎಂದೆಲ್ಲ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸಿ ಎಸ್ ರಘು ಅವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಡಾ. ರವೀಂದ್ರನಾಥ್​​ಗೆ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ: DSS ಅಧ್ಯಕ್ಷ ರಘು ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟ ಜಗ್ಗೇಶ್..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.