ಬೆಂಗಳೂರು: ಚಿರಂಜೀವಿ ಸರ್ಜಾ ಕುಟುಂಬದಲ್ಲಿ ಚಿರು ಇಲ್ಲ ಎಂಬ ನೋವನ್ನು ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ದೂರ ಮಾಡಿದ್ದಾರೆ.
ಧ್ರುವ ಸರ್ಜಾ ಅಣ್ಣನ ಮಗನನ್ನು ಎತ್ತಿಕೊಂಡು ಮುದ್ದಾಡಿದ್ದಾರೆ. ಅಷ್ಟೇ ಅಲ್ಲ, ಗಂಡು ಮಗು ಆಗಿರೋದು ತುಂಬಾ ಖುಷಿಯಾಗ್ತಿದೆ ಎಂದು ಸಂತಸ ಹಂಚಿಕೊಂಡರು.
"ತಾಯಿ, ಮಗ ಇಬ್ಬರೂ ಆರೋಗ್ಯವಾಗಿದ್ದಾರೆ. ಸಡನ್ ಆಗಿ ನಾನು ಮಗು ಎತ್ತಿಕೊಂಡೆ. ಆ ಖುಷಿಯನ್ನು ಹೇಳೋಕೆ ಆಗಲ್ಲ. ಇಡೀ ರಾಜ್ಯದ ಜನತೆ ತಾಯಿ, ಮಗುವಿಗೆ ಆಶೀರ್ವಾದ ಮಾಡಿ. ನಮ್ಮ ಅಣ್ಣನ ಜೊತೆಯಲ್ಲೇ ಇದ್ದಂತೆ ಖುಷಿಯಾಯ್ತು. ನನಗೆ ಮಗನೇ ಆಗೋದು, ಅವನ ಕಂಪ್ಲೆಂಟ್ಸ್ ಜಾಸ್ತಿ ಆಗಿರುತ್ತೆ ಅಂತ ಅಣ್ಣ ಹೇಳ್ತಿದ್ದ. ಆತ ಹೇಳಿದ ಹಾಗೆಯೇ ಗಂಡು ಮಗು ಆಗಿದೆ" ಎಂದು ಧ್ರುವ ಸರ್ಜಾ ಅಣ್ಣನ ಸ್ಮರಿಸಿಕೊಂಡರು.