ETV Bharat / sitara

ಬಿಡುಗಡೆಗೂ ಮುನ್ನವೇ ಭಾರೀ ಮೊತ್ತದ ವ್ಯಾಪಾರ ಮಾಡಿದ ಡಾಲಿ ಧನಂಜಯ್ ಸಿನಿಮಾ..!

author img

By

Published : Feb 12, 2020, 9:43 PM IST

'ಪಾಪ್​​ಕಾರ್ನ್ ಮಂಕಿ ಟೈಗರ್' ಸಿನಿಮಾ ಬಿಡುಗಡೆಗೂ ಮುನ್ನವೇ ಈ ಸಿನಿಮಾದ ವಿತರಣೆ ಹಕ್ಕು ಭಾರೀ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗುತ್ತಿದೆ. ಗಾಂಧಿನಗರದ ಸಿನಿ ಪಂಡಿತರ ಪ್ರಕಾರ ಈ ಚಿತ್ರ ರಿಲೀಸ್​​​​ಗೂ ಮೊದಲೇ ಬರೊಬ್ಬರಿ 10 ಕೋಟಿ ರೂಪಾಯಿ ವ್ಯಾಪಾರ ಮಾಡಿದೆ ಎನ್ನಲಾಗುತ್ತಿದೆ.

Popcorn monkey tiger
'ಪಾಪ್​​ಕಾರ್ನ್ ಮಂಕಿ ಟೈಗರ್'

'ಟಗರು' ಚಿತ್ರದಲ್ಲಿ ಧನಂಜಯ್ ಡಾಲಿ ಪಾತ್ರ ಮಾಡಿದ್ದೇ ಮಾಡಿದ್ದು. ಅವರ ನಸೀಬು ಬದಲಾಗಿಹೋಯ್ತು. ಆ ಸಿನಿಮಾ ನಂತರ ಧನಂಜಯ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಹೆಸರಾದರು. ರಾಮ್​​​ಗೋಪಾಲ್ ವರ್ಮಾ ನಿರ್ದೇಶನದ ತೆಲುಗು-ಕನ್ನಡ ಸಿನಿಮಾ 'ಭೈರವ ಗೀತ' ಚಿತ್ರದಲ್ಲೂ ನಟಿಸಿ ತೆಲುಗು ಜನರಿಗೆ ಪರಿಚಿತರಾದರು.

Popcorn monkey tiger
'ಪಾಪ್​​ಕಾರ್ನ್ ಮಂಕಿ ಟೈಗರ್' ಚಿತ್ರದ ಶೂಟಿಂಗ್

ಸದ್ಯಕ್ಕೆ ಧನಂಜಯ್ ಸೂರಿ ನಿರ್ದೇಶನದ 'ಪಾಪ್​​ಕಾರ್ನ್ ಮಂಕಿ ಟೈಗರ್' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಪೋಸ್ಟರ್​​​​​​​​​​, ಟೀಸರ್​​ನಿಂದಲೇ ಹವಾ ಎಬ್ಬಿಸಿತ್ತು. ಇದೀಗ ಬಿಡುಗಡೆಗೂ ಮುನ್ನವೇ ಈ ಸಿನಿಮಾದ ವಿತರಣೆ ಹಕ್ಕು ಭಾರೀ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗುತ್ತಿದೆ. ಗಾಂಧಿನಗರದ ಸಿನಿ ಪಂಡಿತರ ಪ್ರಕಾರ ಈ ಚಿತ್ರ ರಿಲೀಸ್​​​​ಗೂ ಮೊದಲೇ ಬರೊಬ್ಬರಿ 10 ಕೋಟಿ ರೂಪಾಯಿ ವ್ಯಾಪಾರ ಮಾಡಿದೆ ಎನ್ನಲಾಗುತ್ತಿದೆ. ಧನಂಜಯ್​ - ಸೂರಿ ಕಾಂಬಿನೇಷನ್ ಇರುವ ಈ ಸಿನಿಮಾವನ್ನು 4 ಕೋಟಿ ರೂಪಾಯಿ ಮೊತ್ತಕ್ಕೆ ಪುಷ್ಕರ್ ಫಿಲಂಸ್ ಮತ್ತು ಮೋಹನ್ ಫಿಲಂಸ್ ಖರೀದಿ ಮಾಡಿದೆ. ಈ ಮೂಲಕ ಡಾಲಿ ಧನಂಜಯ ನಾಯಕನಾಗಿ ಅಭಿನಯದ ಸಿನಿಮಾವೊಂದು ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತಕ್ಕೆ ವಿತರಣೆಯ ಹಕ್ಕು ಮಾರಾಟವಾಗಿದೆ.

Popcorn monkey tiger
ಡಾಲಿ ಧನಂಜಯ್

ಈ ಸಿನಿಮಾದ ವಿತರಣೆ ಹಕ್ಕು, ಥಿಯೇಟರ್ ಡಿಮ್ಯಾಂಡ್ ಒಂದು ಕಡೆಯಾದರೆ,ಇನ್ನೊಂದು ಕಡೆ ಧನಂಜಯ್​​​​ ಮತ್ತು ಸೂರಿ ಕಾಂಬಿನೇಷನ್​​ನಿಂದ ಡಿಜಿಟಲ್ ಮಾರ್ಕೆಟ್​​​​ನಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಕನ್ನಡದ ಟಾಪ್ ಎಂಟರ್​ಟೈನ್ಮೆಂಟ್ ಚಾನೆಲ್​​​​​​ಗಳು ದೊಡ್ಡ ಮೊತ್ತಕ್ಕೆ ಟಿವಿ ರೈಟ್ಸ್ ಕೊಡಲು ಮುಂದಾಗಿವೆಯಂತೆ. ಜೊತೆಗೆ ಡಿಜಿಟಲ್ ರೈಟ್ಸ್ ಕೂಡಾ ಕೋಟಿ ರೂಪಾಯಿಗೆ ಮಾತುಕತೆ ಆಗಿದೆಯಂತೆ. ನಿರ್ದೇಶಕ ಸೂರಿ, ರಾ ಶೈಲಿಯ ಮೇಕಿಂಗ್, ಡಾಲಿ ಧನಂಜಯ ವಿಭಿನ್ನ ಶೇಡ್ , ಪಂಚಿಂಗ್ ಡೈಲಾಗ್ ಗಳು ಈ ಚಿತ್ರದ ಪಿಲ್ಲರ್ ಎನ್ನಲಾಗುತ್ತಿದೆ.

Popcorn monkey tiger
ನಿರ್ದೇಶಕ ಸೂರಿ, ಡಾಲಿ ಧನಂಜಯ್

ಪಕ್ಕಾ ಮಾಸ್ ಎಂಟರ್​ಟೈನ್ಮೆಂಟ್ ಎಂದು ಹೇಳಲಾಗುತ್ತಿರುವ 'ಪಾಪ್​​​​​​​​​​​ಕಾರ್ನ್ ಮಂಕಿ ಟೈಗರ್', ಸಿನಿಮಾ ಎಲ್ಲಾ ವಲಯಗಳಿಂದ ರಿಲೀಸ್​​​ಗೂ ಮುನ್ನವೇ ಬರೊಬ್ಬರಿ 10 ಕೋಟಿ ರೂಪಾಯಿ ವ್ಯಾಪಾರ ಮಾಡಿದ್ದು, ಸಿನಿಮಾ ಬಿಡುಗಡೆ ಆಗಿ ಮೊದಲ ವಾರದಲ್ಲೇ 7-8ಕೋಟಿ ರೂಪಾಯಿ ಲಾಭ ಗಳಿಸುವ ಸೂಚನೆ ನೀಡಿದೆ ಎಂದು ಕನ್ನಡ ಸಿನಿಮಾ ವಿತರಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ. ರಾಜ್ಯಾದ್ಯಂತ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ವಿತರಕರು ಈ ವಾರ ಥಿಯೇಟರ್​ ಪಟ್ಟಿ ಅನೌನ್ಸ್ ಮಾಡಲಿದ್ದಾರಂತೆ. ಒಟ್ಟಾರೆ ಈ ಸಿನಿಮಾ ಕ್ರೇಜ್ ಹೇಗಿದೆ ಎನ್ನುವುದಕ್ಕೆ ರಿಲೀಸ್​​​ಗೂ ಮುನ್ನ 10 ಕೋಟಿ ವ್ಯಾಪಾರ ಆಗಿರುವುದು ಸಣ್ಣ ಉದಾಹರಣೆ ಎನ್ನಬಹುದು.

Popcorn monkey tiger
'ಪಾಪ್​​ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಡಾಲಿ ಧನಂಜಯ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.