ETV Bharat / sitara

ಕೆಲವೇ ನಟರನ್ನು ಮಾತ್ರ ಪ್ರೋತ್ಸಾಹಿಸಿ ಅವರಿಗೆ ಹತ್ತಿರವಾಗಲು ಹೊರಟಿದ್ದಾರಾ ಜಗ್ಗೇಶ್​​​​...? - Jaggesh opposition about pan India film

ಜಗ್ಗೇಶ್ ಕೆಲವೇ ನಟರ ಪರವಾಗಿದ್ದು ಅವರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಉಳಿದ ನಟರ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ನಿರ್ಲಕ್ಷ್ಯದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಸ್ಟಾರ್ ನಟರ ಅಭಿಮಾನಿಗಳು ಜಗ್ಗೇಶ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Jaggesh
ಜಗ್ಗೇಶ್
author img

By

Published : Nov 27, 2020, 12:43 PM IST

Updated : Nov 27, 2020, 1:07 PM IST

ಮೊನ್ನೆಯಷ್ಟೇ ನಟ ಜಗ್ಗೇಶ್ ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿದ ಖುಷಿಯನ್ನು ಹಂಚಿಕೊಂಡಿದ್ದರು. ಈ ಖುಷಿಯಲ್ಲಿ ಜಗ್ಗೇಶ್ ಅವರಿಗೆ ಅಭಿನಂದಿಸಿದ್ದ ಕನ್ನಡಿಗರು ಇದೀಗ ಜಗ್ಗೇಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳು ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದೆ ಎಂದು ಜಗ್ಗೇಶ್ ಹೇಳಿರುವುದೇ ಇದಕ್ಕೆ ಕಾರಣ. ಜಗ್ಗೇಶ್ ಅವರ ಈ ಮಾತಿಗೆ ಸಿನಿಪ್ರಿಯರು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಜಗ್ಗೇಶ್ ಹೇಳಿದಂತೆ ಪ್ಯಾನ್ ಇಂಡಿಯಾ ಸಂಸ್ಕೃತಿ ಇಲ್ಲದಿದ್ದರೆ, ಕನ್ನಡ ಚಿತ್ರಗಳನ್ನು ಮತ್ತು ಕನ್ನಡ ನಟರನ್ನು ಬೇರೆ ರಾಜ್ಯದವರು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಸ್ಟಾರ್ ನಟರ ಅಭಿಮಾನಿಗಳ ಅಭಿಪ್ರಾಯವಾಗಿದೆ. ಇನ್ನು ಕೆಲವರು ಜಗ್ಗೇಶ್, ಕನ್ನಡದ ಕೆಲವೇ ಕೆಲವು ನಟರನ್ನು ಮಾತ್ರ ಪ್ರೋತ್ಸಾಹಿಸುತ್ತಿದ್ದು, ಉಳಿದವರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಸೋಷಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಸಂದರ್ಭದಲ್ಲಿ ಕೆಲವು ಸ್ಟಾರ್​​ ನಟರ ಹೆಸರನ್ನು ಪ್ರಸ್ತಾಪಿಸಿ ಇವರು ಎಂದಿಗೂ ಕನ್ನಡಪರ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಸ್ಟಾರ್ ನಟರಲ್ಲಿ ಕೆಲವರ ಸಿನಿಮಾಗಳು ಕೂಡಾ ಇತರ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಿತ್ತು. ಆದರೂ ಈ ನಟರ ಸಿನಿಮಾಗಳನ್ನು ಬಿಟ್ಟು ಜಗ್ಗೇಶ್ ಬೇರೆ ನಟರ ಮೇಲೆ ಗೂಬೆ ಕೂರಿಸುವ ಮೂಲಕ ಕೆಲವೇನಟರಿಗೆ ಹತ್ತಿರವಾಗಲು ಹೊರಟಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ.

ಪ್ಯಾನ್ ಇಂಡಿಯಾದಿಂದ ಹೇಗೆ ಕನ್ನಡ ಚಿತ್ರಗಳು ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗುತ್ತದೋ, ಅದೇ ರೀತಿ ಬೇರೆ ಭಾಷೆಯವರ ಚಿತ್ರಗಳು ಡಬ್ ಆಗಿ ಕನ್ನಡದಲ್ಲೂ ಬಿಡುಗಡೆಯಾಗುತ್ತಿವೆ. ಬೇರೆಯವರು ಇಲ್ಲಿ ಬರಬಹುದು, ನಮ್ಮವರು ಮಾತ್ರ ಬೇರೆ ಭಾಷೆಗಳಲ್ಲಿ ಮಿಂಚಬಾರದು ಎಂದರೆ ಹೇಗೆ ಎಂಬುದು ಹಲವರ ಪ್ರಶ್ನೆ. ಈ ಪ್ರಶ್ನೆಗೆ ಜಗ್ಗೇಶ್ ಏನು ಹೇಳುತ್ತಾರೋ ಕಾದು ನೋಡಬೇಕು.

Last Updated : Nov 27, 2020, 1:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.