ಲಾಕ್ಡೌನ್ ಸಮಯ ಎಲ್ಲರೂ ಮನೆಯಲ್ಲಿ ಕಾಲ ಕಳೆಯುವಂತಾಗಿದೆ. ಟಿವಿಯಲ್ಲಿ ಮಿಂಚುತ್ತಿದ್ದ ತಾರೆಯರು ಕೂಡಾ ಈಗ ಮನೆಯಲ್ಲಿ ಕುಳಿತು ಕಾಲ ಕಳೆಯುತ್ತಿದ್ದು ಈ ಲಾಕ್ ಡೌನ್ ಸಮಯದಲ್ಲಿ ತಾವು ಮಾಡುತ್ತಿರುವ ಕೆಲಸಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಕೂಡಾ ಆರಾಮವಾಗಿ ಮನೆಯವರೊಡನೆ ಕಾಲ ಕಳೆಯುತ್ತಿದ್ದು, ತಮ್ಮ ಪೆಟ್ ಚಿನ್ನುಗೆ ಸ್ನಾನ ಮಾಡಿಸುತ್ತಿರುವ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅನುಶ್ರೀ ತಮ್ಮ ತಮ್ಮನೊಡನೆ ಸೇರಿ ಪ್ರೀತಿಯ ನಾಯಿ ಚಿನ್ನುವಿಗೆ ಸ್ನಾನ ಮಾಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಹಂಚಿಕೊಂಡಿರುವ ಅನುಶ್ರೀ "ಸೋಪ್ ಹಾಕೊಳ್ಳೋ ,ಮೈ ಉಜ್ಕೊಳ್ಳೋ ಸ್ನಾನ ಟೈಮ್ ಫಾರ್ ಚಿನ್ನು" ಎಂದು ಬರೆದುಕೊಂಡಿದ್ದಾರೆ.
ಖಾಸಗಿ ವಾಹಿನಿಯ ನಿರೂಪಕಿಯಾಗಿ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟ ಕುಡ್ಲದ ಕುವರಿ ಅನುಶ್ರೀ, ಇಂದು ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ. ಬೆಂಕಿಪಟ್ಟಣ, ರಿಂಗ್ ಮಾಸ್ಟರ್, ಉಪ್ಪು ಹುಳಿ ಖಾರ ಸಿನಿಮಾಗಳಲ್ಲಿ ಅಭಿನಯಿಸಿರುವ ಅನುಶ್ರೀ ಕೋರಿರೊಟ್ಟಿ ಎನ್ನುವ ತುಳು ಸಿನಿಮಾದಲ್ಲಿಯೂ ನಟಿಸಿದ್ದಾರೆ.