ETV Bharat / sitara

ಸಿಸಿಬಿ ಕಸ್ಟಡಿಯಿಂದ ನಟಿಮಣಿಯರಿಗೆ ರಿಲೀಫ್ ಸಿಗಲಿದ್ಯಾ...? - x Ragini dwivedi in CCB custody

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳ ವಿಚಾರಣೆ ಎದುರಿಸುತ್ತಿರುವ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗ್ರಲಾನಿ ಇಂದು ಸಿಸಿಬಿ ಕಸ್ಟಡಿಯಿಂದ ಹೊರ ಬಂದು ಜಾಮೀನು ಪಡೆಯಲಿದ್ದಾರಾ ಅಥವಾ ಜೈಲು ಸೇರಲಿದ್ದಾರಾ ಎಂಬುದು ಮಧ್ಯಾಹ್ನದ ವೇಳೆಗೆ ತಿಳಿಯಲಿದೆ.

Sandalwood drug case
ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣ
author img

By

Published : Sep 14, 2020, 10:19 AM IST

ಬೆಂಗಳೂರು: ವಿಚಾರಣೆಗೆ ಸಹಕಾರ ನೀಡದೆ ದಿನಕ್ಕೊಂದು ನಾಟಕ ಆಡುತ್ತಾ ತನಿಖೆಯ ಹಾದಿ ತಪ್ಪಿಸುತ್ತಿರುವ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇಂದು ಸಿಸಿಬಿ ಕಸ್ಟಡಿಯಿಂದ ಹೊರ ಬರಲಿದ್ದಾರಾ ಅಥವಾ ಜೈಲು ಪಾಲಾಗುತ್ತಾರಾ ಎಂಬುದು ಮಧ್ಯಾಹ್ನದ ವೇಳೆಗೆ ತಿಳಿಯಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರಿಗೂ ಈಗಾಗಲೇ ಭಯ ಆರಂಭವಾಗಿದೆ.

ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ನಟಿಮಣಿಯರು ತಡರಾತ್ರಿ ಲೇಟಾಗಿ ನಿದ್ರೆಗೆ ಜಾರಿದ್ದರು. ಬೆಳಗ್ಗೆ ಬೇಗ ಎದ್ದು ತಿಂಡಿ ತಿಂದು ಒಂದೆಡೆ ಕುಳಿತಿದ್ದಾರೆ. ಒಂದು ವೇಳೆ ಇಂದು ಸಿಸಿಬಿ ಕಸ್ಟಡಿ ಅಂತ್ಯವಾದರೆ ರಾಗಿಣಿ, ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ, ಸಂಜನಾ ಆಪ್ತ ರಾಹುಲ್ ತೊನ್ಸೆ, ವೈಭವ್ ಜೈನ್ ಹಾಗೂ ವಿನಯ್ ಕುಮಾರ್ ಅರ್ಜಿ ವಿಚಾರಣೆ ಸಿಟಿ ಸಿವಿಲ್ ಆವರಣದಲ್ಲಿರುವ ಎನ್.ಡಿ.ಪಿ.ಎಸ್ ನ್ಯಾಯಾಲಯದಲ್ಲಿ ನಡೆಯಲಿದೆ.

ರಾಗಿಣಿ ಹಾಗೂ ರಾಹುಲ್ ಸಾಮಾನ್ಯ ‌ಜಾಮೀನು ಅರ್ಜಿ ಸಲ್ಲಿಸಿದ್ರೆ ಶಿವಪ್ರಕಾಶ್, ವೈಭವ್ ಜೈನ್ ಹಾಗೂ ವಿನಯ್ ಕುಮಾರ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ನಟಿ ಸಂಜನಾ ಪರ ವಕೀಲರು ಇಂದು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಸದ್ಯ ಸಿಸಿಬಿ ಪರವಾಗಿ ಸರ್ಕಾರಿ ವಕೀಲರು ಕೂಡಾ ನೇಮಕವಾಗಿದ್ದು ಜಾಮೀನು ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಸಿಸಿಬಿ ರೆಡಿಯಾಗಿದೆ. ಒಂದು ವೇಳೆ ಆಕ್ಷೇಪಣೆ ಸಲ್ಲಿಸಿದರೆ ಆರೋಪಿಗಳಿಗೆ ಜಾಮೀನು ದೊರೆಯದೆ ಜೈಲು ಪಾಲಾಗುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.