ಕಿರಿಕ್ ಪಾರ್ಟಿ ಚಿತ್ರದ ಬಿಗ್ ಹಿಟ್ ನಂತ್ರ ಬರೋಬ್ಬರಿ ಮೂರು ವರ್ಷಗಳ ನಂತ್ರ ಕಲಿಯುಗದ ನಾರಾಯಣನ ಅವತಾರದಲ್ಲಿ ರಕ್ಷಿತ್ ಶೆಟ್ಟಿ ಬರ್ತಿದ್ದಾರೆ. ಮೊನ್ನೆಯಷ್ಟೆ "ಅವನೇ ಶ್ರೀಮನ್ನಾರಾಯಣ" ಟ್ರೇಲರ್ ಬಿಡುಗಡೆಯಾಗಿ ಸಖತ್ ಸದ್ದು ಮಾಡ್ತಿದೆ.
- " class="align-text-top noRightClick twitterSection" data="">
ಅದರ ಜೊತೆ "ಅವನೇ ಶ್ರೀಮನ್ನಾರಾಯಣ" ಚಿತ್ರ ನಿಜವಾಗಲೂ ಸ್ಟ್ರೈಟ್ ಸಬ್ಜೆಕ್ಟಾ ಎಂಬ ಅನುಮಾನ ಈಗ ಎಲ್ಲೆಡೆ ಚರ್ಚೆಯಾಗ್ತಿದೆ. ಹೌದು "ಅವನೇ ಶ್ರೀ ಮನ್ನಾರಾಯಣ" ಟ್ರೈಲರ್ನ ದೃಶ್ಯಗಳು ಹಾಲಿವುಡ್ ಚಿತ್ರದಿಂದ ಕದ್ದಿರುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗ್ತಿದೆ.
- " class="align-text-top noRightClick twitterSection" data="">
ಹೌದು "ಅವನೇ ಶ್ರೀಮನ್ನಾರಾಯಣ" ಚಿತ್ರದ ಟ್ರೈಲರ್ ನೋಡಿದ್ರೆ ಇಂಗ್ಲಿಷ್‌ನ 'The Ballad of Buster Scruggs' ಟ್ರೇಲರ್ ಅನ್ನು ನೆನಪಿಸುತ್ತದೆ. ಇನ್ನೂ 'The Ballad of Buster Scruggs' ಸಿನಿಮಾ ಟ್ರೈಲರ್ 2017ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ಅಲ್ಲದೆ, ಆಗಸ್ಟ್ 31ರ 2018ರಲ್ಲಿ ವೆನ್ನೀಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಈ ಸಿನಿಮಾ ಪ್ರದರ್ಶನವಾಗಿತ್ತು ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡ್ತಿದ್ದಾರೆ. ಅದರೆ ಈ ಎಲ್ಲಾ ಪ್ರಶ್ನೆಗಳಿಗೆ ಆ ಶ್ರೀಮನ್ನಾರಾಯಣ ರಕ್ಷಿತ್ ಶೆಟ್ಟಿಯೇ ಉತ್ತರಿಸಬೇಕಿದೆ.