ETV Bharat / sitara

Puneeth Rajkumar's Biopic? ತೆರೆ ಮೇಲೆ ಬರಲಿದಿಯ್ಯಾ ಪವರ್ ಸ್ಟಾರ್ ಬಯೋಪಿಕ್? ನಿರ್ದೇಶಕ ಸಂತೋಷ್ ಆನಂದ್​​ರಾಮ್ ಹೇಳಿದ್ದೇನು?

author img

By

Published : Nov 22, 2021, 2:31 PM IST

ಬಾಲ್ಯದಿಂದಲೇ ಬೆಳ್ಳಿ ತೆರೆ ಮೇಲೆ ಪುನೀತ್ ರಾಜ್​​ಕುಮಾರ್ ರಾರಾಜಿಸಿದವರು. ಚಿಕ್ಕವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿಯನ್ನ ಪಡೆದ 'ಬೆಟ್ಟದ ಹೂವು' ಅಪ್ಪು. ಜೊತೆಗೆ ಅವರ ಸಾಮಾಜಿಕ ಕೆಲಸಗಳು, ಸರಳತೆಯನ್ನ ಬೆಳ್ಳಿತೆರೆ ಮೇಲೆ ನೋಡಲು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ. ಇದಕ್ಕೆ ನಿರ್ದೇಶಕ ಸಂತೋಷ್ ಆನಂದ್​​​ರಾಮ್​ರ ಪ್ರತಿಕ್ರಿಯೆ ಹೀಗಿತ್ತು..

Director Santhosh Ananddram
Director Santhosh Ananddram

ಕನ್ನಡ ಚಿತ್ರರಂಗದ ನಗು ಮುಖದ ರಾಜಕುಮಾರ ಅಂತಾ ಮನೆ ಮಾತಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ (Power Star Puneeth Rajkumar) ನಿಧನ ಹೊಂದಿ 25 ದಿನ ಕಳೆಯುತ್ತಿವೆ. ಆದರೆ, ಪುನೀತ್ ನೆನಪು ಮಾತ್ರ ಸಿನಿಮಾ ಮಂದಿ ಅಲ್ಲದೇ ಅಭಿಮಾನಿಗಳನ್ನ ಕಾಡುತ್ತಲೇ ಇದೆ.

ಇವತ್ತಿಗೂ ಕಂಠೀರವ ಸ್ಟುಡಿಯೋದಲ್ಲಿರೋ ಅಪ್ಪು ಸಮಾಧಿಗೆ ಸಾವಿರಾರು ಜನರು ಭೇಟಿ ನೀಡಿ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು ನಾಲ್ಕು ದಿನಗಳು ಕಳೆದರೆ ಪುನೀತ್​ರ ಒಂದು ತಿಂಗಳ ಪುಣ್ಯಸ್ಮರಣೆ ಕಾರ್ಯಕ್ರಮ ಮಾಡಲು ಕುಟುಂಬದವರು ಸಿದ್ಧತೆ ನಡೆಸಿದ್ದಾರೆ.

ನಿರ್ದೇಶಕ ಸಂತೋಷ್ ಆನಂದ್​​​ರಾಮ್
ನಿರ್ದೇಶಕ ಸಂತೋಷ್ ಆನಂದ್​​​ರಾಮ್ ಟ್ವೀಟ್​

ಹೀಗಿರಬೇಕಾದ್ರೆ, ಪವರ್ ಸ್ಟಾರ್ ಬಗ್ಗೆ ಒಂದು ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಅಪ್ಪು ಬಯೋಪಿಕ್ ಮಾಡಲು ಅಭಿಮಾನಿಗಳಿಂದ ಬೇಡಿಕೆ ಬರುತ್ತಿದೆ. ಪುನೀತ್​ರ ಮತ್ತೊಬ್ಬ ಸಹೋದರನ ಹಾಗೆ ಬಳಹ ಆಪ್ತವಾಗಿದ್ದ ನಿರ್ದೇಶಕ ಸಂತೋಷ್ ಆನಂದ್​​​ರಾಮ್ (Director Santhosh Ananddram) ಅವರಿಗೆ, ಅಪ್ಪು ಅಭಿಮಾನಿಗಳು ಟ್ಟಿಟರ್​​​ನಲ್ಲಿ ಪವರ್ ​ಸ್ಟಾರ್ ಜೀವನ ಚರಿತ್ರೆಯನ್ನ ಸಿನಿಮಾ (Fans request for Puneeth Rajkumar's Biopic) ಮಾಡಿ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ಸಂತೋಷ್ ಆನಂದ್​​ರಾಮ್
ಸಂತೋಷ್ ಆನಂದ್​​ರಾಮ್-ಪುನೀತ್ ರಾಜ್​​ಕುಮಾರ್

ಇದನ್ನೂ ಓದಿ: ನಿರಂತರ ಮಳೆಯಲ್ಲೂ 'ಅಪ್ಪು' ಪುಣ್ಯಸ್ಮರಣೆ: ಪುಷ್ಮಾಪುರದಲ್ಲಿ ಗ್ರಾಮಸ್ಥರಿಗೆಲ್ಲ ಬಾಡೂಟ

ಅಪ್ಪು ಅಭಿಯಾನಿಯೊಬ್ಬರ ಬೇಡಿಕೆಗೆ ಪ್ರತಿಕ್ರಿಯೆ ನೀಡಿರುವ ಸಂತೋಷ್​ ಕೂಡ ಉತ್ಸಾಹ ತೋರಿದ್ದು, "ಈ ಐಡಿಯಾವನ್ನ ತೆರೆ ಮೇಲೆ ತರಲು ನನ್ನ ಕೈಲಾದಷ್ಟು ಪ್ರಯತ್ನ ಮಾಡುವೆ" ಎಂದು ಟ್ವೀಟ್ (Santhosh Ananddram Tweet)​ ಮಾಡಿದ್ದಾರೆ.

ಇದರ ಜೊತೆಗೆ ಪುನೀತ್‌ ರಾಜ್‌ಕುಮಾರ್ ಬಗ್ಗೆ ಹಾಡುಗಳನ್ನ ಬರೆಯುತ್ತೀರಾ ಅಂತಾ ಕೂಡ ಅಭಿಮಾನಿಗಳು ಕೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿರುವ ಡೈರೆಕ್ಟರ್​ ಸಂತೋಷ್​ 100% ಪಕ್ಕಾ ಎಂದಿದ್ದಾರೆ.

ಪುನೀತ್​-ಸಂತೋಷ್ ಕಾಂಬಿನೇಷನ್​ನಲ್ಲಿ ಮೂಡಿ ಬಂದಿದ್ದ 'ರಾಜಕುಮಾರ' ಹಾಗೂ 'ಯುವರತ್ನ' ಚಿತ್ರಗಳು (Rajaakumaraa and Yuvarathnaa) ಸೂಪರ್ ಹಿಟ್ ಆಗಿದ್ದವು.

ಈ ಎರಡು ಸಿನಿಮಾಗಳ ಹಿಟ್ ಬಳಿಕ, ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಮೂರನೇ ಸಿನಿಮಾ ಮಾತುಕಥೆ ಆಗಿತ್ತು. ಆದರೆ, ವಿಧಿಯಾಟಕ್ಕೆ ಅಪ್ಪು ಬಾರದ ಲೋಕಕ್ಕೆ ತೆರಳಿದ್ದಾರೆ. ಅಪ್ಪುವಿನ ಅಕಾಲಿಕ ಮರಣದ ಸುದ್ದಿ ಅರಗಿಸಿಕೊಳ್ಳೋದಕ್ಕೆ ಆಗುತ್ತಿಲ್ಲ.

ನಿರ್ದೇಶಕ ಸಂತೋಷ್ ಆನಂದ್​​​ರಾಮ್
ನಿರ್ದೇಶಕ ಸಂತೋಷ್ ಆನಂದ್​​​ರಾಮ್ ಟ್ವೀಟ್​

ಇದನ್ನೂ ಓದಿ: 'ಪರಮಾತ್ಮ'ನಿಗೆ 'ದೀಪ ನಮನ'ದ ಜತೆಗೆ 'ಗೀತ ನಮನ': 'ಪುನೀತ್​ ನಮನ' ಕಾರ್ಯಕ್ರಮದ ಕ್ಷಣ

ಬಾಲ್ಯದಿಂದಲೇ ಬೆಳ್ಳಿ ತೆರೆ ಮೇಲೆ ಪುನೀತ್ ರಾಜ್​​ಕುಮಾರ್ ರಾರಾಜಿಸಿದವರು. ಚಿಕ್ಕವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ 'ಬೆಟ್ಟದ ಹೂವು' ಅಪ್ಪು. ಜೊತೆಗೆ ಅವರ ಸಾಮಾಜಿಕ ಕೆಲಸಗಳು, ಸರಳತೆಯನ್ನ ಬೆಳ್ಳಿತೆರೆ ಮೇಲೆ ಅಭಿಮಾನಿಗಳಿಗೆ ನೋಡುವ ಆಸೆ.

ಅಪ್ಪು ಬಯೋಪಿಕ್​ ಮಾಡಲು ರಾಜ್ ಕುಟುಂಬ ಹಾಗೂ ಪತ್ನಿ ಅಶ್ವಿನಿ ಅವರಿಂದ ಅನುಮತಿ ಸಿಕ್ಕರೆ, ಪವರ್ ಸ್ಟಾರ್ ಜೀವನ ಚರಿತ್ರೆ ಬೆಳ್ಳಿ ತೆರೆ ಮೇಲೆ ನೋಡುವ ಸೌಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.