ETV Bharat / sitara

ಚರ್ಚೆಗೆ ಎಡೆ ಮಾಡಿಕೊಟ್ಟ ನಿರ್ದೇಶಕ ಪ್ರೇಮ್ ಟ್ವೀಟ್​​​​...ಅಸಲಿ ವಿಚಾರ ಏನು...? - Director Prem Tweet

ಸುದೀಪ್ ಜೊತೆ ಭಾರತದಲ್ಲಿ ಯಾರೂ ಮಾಡದ ಸಿನಿಮಾ ಮಾಡುತ್ತೇನೆ ಎಂದು ಪ್ರೇಮ್ ಮಾಡಿದ್ದಾರೆ ಎನ್ನಲಾದ ಟ್ವೀಟ್ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಆದರೆ ಈ ಟ್ವೀಟ್ ಪ್ರೇಮ್ ಅಸಲಿ ಟ್ವಿಟ್ಟರ್ ಖಾತೆಯಿಂದ ಮಾಡಿದ್ದಲ್ಲ ಎಂಬ ನಿಜಾಂಶ ತಡವಾಗಿ ಬೆಳಕಿಗೆ ಬಂದಿದೆ.

Director Prem
ನಿರ್ದೇಶಕ ಪ್ರೇಮ್
author img

By

Published : Feb 13, 2021, 9:44 AM IST

'ದಿ ವಿಲನ್' ಸಿನಿಮಾ ಬಿಡುಗಡೆಯಾದ ನಂತರ ನಿರ್ದೇಶಕ ಪ್ರೇಮ್, ಭಾರತೀಯಚಿತ್ರರಂಗದ ಎಲ್ಲಾ ಖ್ಯಾತ ನಟರೊಂದಿಗೆ ಮತ್ತೆ ಸಿನಿಮಾ ಮಾಡುತ್ತೇನೆ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದರು. ಅದಾದ ನಂತರ ಅವರು ರಕ್ಷಿತಾ ಸಹೋದರ ರಾಣಾ ಅಭಿನಯದ 'ಏಕ್ ಲವ್ ಯಾ' ಚಿತ್ರದಲ್ಲಿ ಬ್ಯುಸಿ ಆದರು. ತಮ್ಮ ಹೊಸ ಚಿತ್ರದ ಬಗ್ಗೆ ಪ್ರೇಮ್ ಮತ್ತೆ ಮಾತನಾಡಿರಲಿಲ್ಲ. ಆದರೆ ಈಗ ಪ್ರೇಮ್ ಮಾಡಿದ್ದಾರೆ ಎನ್ನಲಾದ ಟ್ವೀಟ್​​​​​ ಒಂದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Tweet
ನಕಲಿ ಖಾತೆಯಿಂದ ಮಾಡಲಾದ ಟ್ವೀಟ್

ಇದನ್ನೂ ಓದಿ: ಆ ಸಂಗೀತ ನಿರ್ದೇಶಕನನ್ನು ಮದುವೆಯಾಗಲಿದ್ದಾರಾ ಕೀರ್ತಿ ಸುರೇಶ್​​...?

ಪ್ರೇಮ್. ಎಸ್ ಹೆಸರಿನ ಟ್ವಿಟ್ಟರ್ ಖಾತೆಯಿಂದ "ನನ್ನ ಮತ್ತು ಸುದೀಪ್ ಕಾಂಬಿನೇಶನ್​ನಲ್ಲಿ ಬರುತ್ತಿರುವ #NewAvatarSoon ಚಿತ್ರದ ಬಗ್ಗೆ ಮುಖ್ಯವಾದ ಸುದ್ದಿಯೊಂದನ್ನು ಕೆಲವೇ ದಿನಗಳಲ್ಲಿ ತಿಳಿಸುತ್ತೇನೆ. ಇಂಡಿಯಾದಲ್ಲೇ ಮಾಡದ ಸಿನಿಮಾವೊಂದನ್ನು ಮಾಡಲು ಹೊರಟಿದ್ದೇನೆ. ದಯವಿಟ್ಟು ನಿಮ್ಮ ಪ್ರೀತಿ ನಮ್ಮ ಮೇಲೆ ಸದಾ ಇರಲಿ" ಎಂದು ಪೋಸ್ಟ್​​​​ ಮಾಡಲಾಗಿದೆ. ಇದನ್ನು ನೋಡುತ್ತಿದ್ದಂತೆ ನೆಟಿಜನ್ಸ್ ಆಶ್ಚರ್ಯಗೊಂಡಿದ್ದಾರೆ. ಕೆಲವರು ಪ್ರೇಮ್ ಮತ್ತೆ ದೊಡ್ಡ ಸಿನಿಮಾವೊಂದನ್ನು ಮಾಡಲು ಹೊರಟಿದ್ದಾರೆ ಎಂದು ಖುಷಿಯಾದರೆ ಮತ್ತೆ ಕೆಲವರು ಈ ಟ್ವೀಟ್ ನೋಡಿ ಪ್ರೇಮ್ ಕಾಲೆಳೆದಿದ್ದಾರೆ. ಆದರೆ ಈ ಟ್ವೀಟ್ ಮಾಡಿರುವುದು ಪ್ರೇಮ್ ಅಲ್ಲ, ಅವರ ಹೆಸರಿನಲ್ಲಿ ಯಾರೋ ಬೇಕಂತಲೇ ಅಕೌಂಟ್ ಕ್ರಿಯೇಟ್ ಮಾಡಿ ಈ ರೀತಿ ಟ್ವೀಟ್ ಮಾಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಡಿಲೀಟ್ ಮಾಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರೇಮ್ ಆಗಲೀ, ಸುದೀಪ್ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏಕ್ ಲವ್ ಯಾ ಮುಗಿದ ನಂತರ ಪ್ರೇಮ್ ಮುಂದಿನ ಸಿನಿಮಾ ಯಾವುದಿರಬಹುದು ಎಂಬುದರ ಬಗ್ಗೆ ಮಾತ್ರ ಅಭಿಮಾನಿಗಳಿಗೆ ಬಹಳ ಕುತೂಹಲವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.