‘ಪ್ರೇಮಂ ಪೂಜ್ಯಂ’ ಮುದ್ದಾದ ಶೀರ್ಷಿಕೆ ಹಾಗೂ ಟ್ರೈಲರ್ನಿಂದಲೇ ಕನ್ನಡ ಚಿತ್ರರಂಗ ಅಲ್ಲದೆ ಪರಭಾಷೆಯವರು ತಿರುಗಿ ನೋಡುವಂತೆ ಮಾಡುತ್ತಿರುವ ಚಿತ್ರ. ನೆನೆಪಿರಲಿ ಪ್ರೇಮ್ ನಟನೆಯ 25ನೇ ಚಿತ್ರ ಇದಾಗಿದ್ದು, ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ಟ್ರೈಲರ್ಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ.
ಶುಕ್ರವಾರ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿರುವ ನಿರ್ದೇಶಕ ರಾಘವೇಂದ್ರ ಬಿ.ಎಸ್, ಈ ಚಿತ್ರದ ಕಥೆಯನ್ನ ಮೊದಲು ಕೇಳಿದ್ದು ರೆಬೆಲ್ ಸ್ಟಾರ್ ಅಂಬರೀಶ್ ಅವರು. ಅಂತಹ ಮೇರು ನಟ 4 ಗಂಟೆಗಳ ಕಾಲ ಕಥೆ ಕೇಳಿ, ನಾನೇ ನಿಂತು ಸಿನಿಮಾ ಮಾಡಿ ಕೊಡುತ್ತೇನೆ ಎಂದಿದ್ದರು. ಅವರಿಗೆ ಈ ಸಿನಿಮಾ ಅರ್ಪಿಸುತ್ತೇನೆ ಎಂದಿದ್ದಾರೆ.
ನನ್ನ ಕಥೆ ಕೇಳಿ ಅಂಬರೀಶಣ್ಣನ ಕಣ್ಣಲ್ಲಿ ನೀರು ಬಂದಿತ್ತು. ಆವಾಗ್ಲೇ ನನಗೆ ಸಿಕ್ಕ ದೊಡ್ಡ ಅವಾರ್ಡ್ ಇದು ಎಂದುಕೊಂಡೆ. ನಮ್ಮ ಸಿನಿಮಾ ಟೈಟಲ್ ಕಾರ್ಡ್ನಲ್ಲಿ ಡಾ. ರಾಜ್ ಕುಮಾರ್ ಜೊತೆಗೆ ಡಾ. ಅಂಬರೀಶ್ ಅಣ್ಣ ಅವರ ಹೆಸರನ್ನೂ ಹಾಕುತ್ತೀನಿ. ಅಂಬರೀಶಣ್ಣ ಪ್ರೇಮಂ ಪೂಜ್ಯಂ ಸಿನಿಮಾದ ಟೈಟಲ್ ಹಾಡು ಕೇಳಿ ಈ ಸಿನಿಮಾಗೆ ಪ್ರಶಸ್ತಿ ಬರುತ್ತೆ ಎಂದಿದ್ದಾರೆ. ಅಂಬರೀಶಣ್ಣ ಹೇಳಿದ ಹಾಗೆ ಪ್ರಶಸ್ತಿ ಬರಲಿದೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.
ಓದಿ: 'ನೀ ಸಿಗೋವರೆಗೂ' ಚಿತ್ರದ ಹ್ಯಾಟ್ರಿಕ್ ಹೀರೋ ಫಸ್ಟ್ ಲುಕ್ ಅನಾವರಣ