ಭಾರತೀಯ ಚಿತ್ರರಂಗದಲ್ಲಿ ಯಾರೂ ಮಾಡದ ಚಾಲೆಂಜಿಂಗ್ ಕೆಲಸಕ್ಕೆ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ ಕೈ ಹಾಕಿ, ಮೊದಲ ಹೆಜ್ಜೆಯಲ್ಲೇ ಸಕ್ಸಸ್ ಕಂಡಿದೆ.
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಡೈರೆಕ್ಟರ್ ಫಿಲ್ಮ್ ಬಜಾರ್ ಕಾನ್ಸೆಪ್ಟ್‌ನಲ್ಲಿ ಕನ್ನಡ ಚಿತ್ರಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ನಿರ್ಮಾಣ ಮಾಡುವ ಕೆಲಸಕ್ಕೆ ಕೈ ಹಾಕಿ ಇತ್ತೀಚಿಗೆ ನಡೆದ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅಕಾಡೆಮಿ ಜೊತೆ ಸೇರಿ 6 ದಿನಗಳ ಫಿಲಂ ಬಜಾರ್‌ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಿದೆ.
ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ನೇತೃತ್ವದಲ್ಲಿ ಡೈರೆಕ್ಟರ್ ಫಿಲ್ಮ ಬಜಾರ್ ಸಿನಿಮಾ ಮೇಳದಲ್ಲಿ ಸುಮಾರು 250 ಚಿತ್ರಗಳು ನೋಂದಣಿ ಮಾಡಿಕೊಂಡು ಭಾಗವಹಿಸಿದ್ದವು. ಅಲ್ಲದೆ ಈ ಫಿಲ್ಮ ಬಜಾರ್‌ಗೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ.
ಅಲ್ಲದೆ ಸುಮಾರು 50 ಚಿತ್ರಗಳು ಮಲೆಯಾಳಂಗೆ ಡಬ್ಬಿಂಗ್ ರೈಟ್ಸ್ ಮಾತುಕತೆ ಆಗಿದೆ. ಒಟ್ಟಾರೆ ನಮ್ಮ ಮೊದಲ ಪ್ರಯತ್ನ ಸಫಲವಾಗಿದ್ದು,ಮುಂದಿನ ದಿನಗಳಲ್ಲಿ ಪ್ರತಿ ನಾಲ್ಕು ತಿಂಗಳಿಗೆ ಡೈರೆಕ್ಟರ್ ಫಿಲ್ಮ ಬಜಾರ್ ನಡೆಸಲು ನಿರ್ದೇಶಕರ ಸಂಘ ನಿರ್ಧರಿಸಲಾಗಿದೆ ಎಂದು ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳ ನಿರ್ಮಾಣ ಸಂಖ್ಯೆ ಹೆಚ್ಚಿದೆ. ಆದರೆ, ಸಕ್ಸಸ್ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೇ ಸಾಕಷ್ಟು ನಿರ್ಮಾಪಕರು ನಷ್ಟ ಅನುಭವಿಸುತ್ತಿದ್ದಾರೆ. ಆದರೆ, ಈ ನಿರ್ದೇಶಕರ ಸಂಘ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನಿರ್ಮಾಪಕರ ನೆರವಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಈ ಡೈರೆಕ್ಟರ್ ಫಿಲ್ಮ ಬಜಾರ್ ಉದ್ಯಮಕ್ಕೆ ವರವಾಗಲಿದೆಯೇ ಎಂಬುದನ್ನ ಕಾದು ನೋಡಬೇಕಿದೆ.