ETV Bharat / sitara

ನಿರ್ದೇಶಕ ಸತ್ಯಪ್ರಕಾಶ್ ಹೊಸ ಸಾಹಸಕ್ಕೆ ಡಾಲಿ ಧನಂಜಯ ಸಪೋರ್ಟ್.. - ಸತ್ಯ ಸಿನಿ ಡಿಸ್ಟ್ರಿಬ್ಯೂಷನ್ ಸಂಸ್ಥೆ ಆರಂಭ

ನನ್ನ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಬಿಡುಗಡೆಯಾದಾಗ ಮೊದಲ‌ ಅಲೆ ಬಂತು.‌ ಯುವರತ್ನ ಬಂದಾಗ ಎರಡನೇ ಅಲೆ‌. ಈಗ ಬಡವ ರಾಸ್ಕಲ್ ಬಂದಿದೆ, ಈಗ ಮೂರನೇ ಅಲೆ ಶುರುವಾಗಿದೆ ಎಂದ ಡಾಲಿ, ಸತ್ಯಪ್ರಕಾಶ್ ಹಾಗೂ ತಂಡಕ್ಕೆ ಶುಭ ಕೋರಿದರು..

ಸತ್ಯ ಸಿನಿ ಡಿಸ್ಟ್ರಿಬ್ಯೂಷನ್ ಸಂಸ್ಥೆ ಆರಂಭ
ಸತ್ಯ ಸಿನಿ ಡಿಸ್ಟ್ರಿಬ್ಯೂಷನ್ ಸಂಸ್ಥೆ ಆರಂಭ
author img

By

Published : Jan 7, 2022, 3:30 PM IST

ಕನ್ನಡ ಚಿತ್ರರಂಗದಲ್ಲಿ ರಾಮಾ ರಾಮಾ ರೇ ಚಿತ್ರದ ಮೂಲಕ ಮನೆಮಾತಾಗಿರುವ ನಿರ್ದೇಶಕ ಸತ್ಯಪ್ರಕಾಶ್ ಕೆಲವು ತಿಂಗಳ ಹಿಂದೆ ಸ್ನೇಹಿತರ ಬಳಗದೊಂದಿಗೆ ಸೇರಿ ಸತ್ಯ ಪಿಕ್ಚರ್ಸ್ ಎಂಬ ಸಂಸ್ಥೆ ಆರಂಭಿಸಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಸತ್ಯ ಸಿನಿ ಡಿಸ್ಟ್ರಿಬ್ಯೂಷನ್ ಎಂಬ ಸಂಸ್ಥೆ ಆರಂಭಿಸಿದ್ದಾರೆ.

ನಿರ್ದೇಶಕ ಸತ್ಯಪ್ರಕಾಶ್ ಹೊಸ ಸಾಹಸಕ್ಕೆ ಡಾಲಿ ಧನಂಜಯ ಸಪೋರ್ಟ್

ನಿರ್ದೇಶಕ ಸತ್ಯಪ್ರಕಾಶ್ ಹೊಸ ಸಾಹಸಕ್ಕೆ ನಟ ಡಾಲಿ ಧನಂಜಯ್ ಸಾಥ್ ನೀಡಿದ್ದು, ನಾನು ಇಲ್ಲಿಗೆ ಜಯನಗರ 4th ಬ್ಲಾಕ್, ಕಿರುಚಿತ್ರದಲ್ಲಿ ಅಭಿನಯಿಸಿದ್ದ ಧನಂಜಯನಾಗಿಯೇ ಬಂದಿದ್ದೇನೆ. ಯಾವುದೇ ಸೂಪರ್ ಸ್ಟಾರ್ ಆಗಿ ಬಂದಿಲ್ಲ.

ಸತ್ಯಪ್ರಕಾಶ್ ಹೇಳುತ್ತಿದ್ದರು, ರಾಮಾ ರಾಮಾ ರೇ ಮಾಡಿದಾಗ ಡಿಮಾನಿಟೈಸೇಶನ್ ಆಯ್ತು ಅಂತಾ. ನಾವು ಹಾಗೆ ತಿಳಿದುಕೊಳ್ಳಬಾರದು. ನಾವು ಬಂದಾಗಲೆಲ್ಲ ಹೊಸ ಅಲೆ ಏಳುತ್ತದೆ ಅಂದುಕೊಳ್ಳಬೇಕು.‌

ಸತ್ಯ ಸಿನಿ ಡಿಸ್ಟ್ರಿಬ್ಯೂಷನ್ ಸಂಸ್ಥೆ ಆರಂಭಿಸಿದ ನಿರ್ದೇಶಕ ಸತ್ಯಪ್ರಕಾಶ್

ನನ್ನ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಬಿಡುಗಡೆಯಾದಾಗ ಮೊದಲ‌ ಅಲೆ ಬಂತು.‌ ಯುವರತ್ನ ಬಂದಾಗ ಎರಡನೇ ಅಲೆ‌. ಈಗ ಬಡವ ರಾಸ್ಕಲ್ ಬಂದಿದೆ, ಈಗ ಮೂರನೇ ಅಲೆ ಶುರುವಾಗಿದೆ ಎಂದ ಡಾಲಿ, ಸತ್ಯಪ್ರಕಾಶ್ ಹಾಗೂ ತಂಡಕ್ಕೆ ಶುಭ ಕೋರಿದರು.

ಡಾಲಿ ನಂತರ ಮಾತನಾಡಿದ ನಿರ್ದೇಶಕ ಸತ್ಯ ಪ್ರಕಾಶ್, ನನ್ನ ಬಳಿ ಹೆಚ್ಚು ದುಡ್ಡಿಲ್ಲ. ನಾನು ಮೂಲತಃ ಬರಹಗಾರ, ನಿರ್ದೇಶಕ ಅಷ್ಟೇ.. ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಪ್ರಕಾಶ್ ಪಾಂಡೇಶ್ವರ್ ಅವರನ್ನು ಭೇಟಿಯಾದಾಗ ವಿತರಣೆಯ ಬಗ್ಗೆ ಹೇಳಿದರು. ವಿತರಣಾ ಸಂಸ್ಥೆ ಆರಂಭಿಸಬೇಕೆಂಬ ಆಸೆಯಿತ್ತು. ಅದಕ್ಕೆ ಮೂಲ ಕಾರಣ ನನ್ನ ಹಿಂದಿನ ಸಿನಿಮಾಗಳಲ್ಲಿ ಇದರ ಬಗ್ಗೆ ತಿಳಿಯದೆ, ಒದ್ದಾಡಿದ್ದು.

ನಂತರ ನಮ್ಮೊಂದಿಗೆ ದೀಪಕ್ ಗಂಗಾಧರ್ ಹಾಗೂ ಮಂಜುನಾಥ್ ಡಿ ಸೇರಿದರು. ಎಲ್ಲರೂ ಸೇರಿ ಈ ಸಂಸ್ಥೆ ಆರಂಭಿಸಿದ್ದೇವೆ. ಇದು ಎಲ್ಲರಿಗೂ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಗೊಂದರಂತೆ ನೂರು ಅಥವಾ ನೂರೈವತ್ತು ಆಸನವುಳ್ಳ ಚಿತ್ರಮಂದಿರ ಆರಂಭಿಸುವ ಯೋಚನೆಯಿದೆ. ಲಾಕ್‌ಡೌನ್ ಮುಂಚಿನ ಸಿನಿಮಾ ರಂಗವೇ ಬೇರೆ, ಈಗಲೇ ಬೇರೆ.

ಲಾಕ್‌ಡೌನ್ ನಂತರ ಸಿನಿಮಾ ಎನ್ನುವುದು ನಿಮ್ಮ ಮೊಬೈಲ್ ನಲ್ಲಿ ಲಭ್ಯವಿದೆ. ಈಗ ಪೈಪೋಟಿ ಜಾಸ್ತಿಯಾಗಿದೆ. ಜನ ಮೆಚ್ಚುವ ಚಿತ್ರಗಳನ್ನು ನೀಡುವ ಜವಾಬ್ದಾರಿ ಹೆಚ್ಚಿದೆ ಎಂದರು. ನಿರ್ದೇಶಕ ಸತ್ಯ ಪ್ರಕಾಶ್ ಜೊತೆ ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್, ದೀಪಕ್ ಗಂಗಾಧರ್, ಮಂಜುನಾಥ್ ಕೈ ಜೋಡಿಸಿದ್ದಾರೆ. ಜೊತೆಗೆ ಡಿ ಹಾಗೂ ಸತ್ಯ ಪಿಕ್ಚರ್ಸ್ ತಂಡದವರು ಕೂಡ, ಸತ್ಯ ಸಿನಿ ಡಿಸ್ಟ್ರಿಬ್ಯೂಷನ್ ಸಂಸ್ಥೆ ಜೊತೆ ಸೇರಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.