ಕನ್ನಡ ಚಿತ್ರರಂಗದಲ್ಲಿ ಅದ್ಧೂರಿ ನಿರ್ದೇಶಕ ಅಂತಾನೆ ಖ್ಯಾತಿ ಗಳಿಸಿರುವ ಎ.ಪಿ. ಅರ್ಜುನ್ ತಂದೆಯಾಗುತ್ತಿರುವ ಸಂತಸದಲ್ಲಿದ್ದಾರೆ. ಅರ್ಜುನ್ ಮತ್ತು ಪತ್ನಿ ಅನ್ನಪೂರ್ಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಇತ್ತೀಚಿಗಷ್ಟೇ ಅನ್ನಪೂರ್ಣ ಅವರ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಸರವಾಗಿ ಸೀಮಂತ ಸಮಾರಂಭ ಮಾಡಿದ್ದು, ಅರ್ಜುನ್ ಕುಟುಂಬದವರು ಹಾಗು ಪತ್ನಿ ಅನ್ನಪೂರ್ಣ ಕುಟುಂಬದವರು ಮಾತ್ರ ಭಾಗಿಯಾಗಿದ್ದರು.
ಎ.ಪಿ.ಅರ್ಜುನ್ ಕಳೆದ ವರ್ಷ ಲಾಕ್ಡೌನ್ನಲ್ಲಿ ಹಸೆಮಣೆ ಏರಿದ್ದರು. ಮೇ 10ರಂದು ನಡೆದ ಸರಳ ಮದುವೆ ಸಮಾರಂಭದಲ್ಲಿ ಅನ್ನಪೂರ್ಣ ಅವರಿಗೆ ಮಾಂಗಲ್ಯಧಾರಣೆ ಮಾಡಿದ್ದರು. ಇದೀಗ ಮಗುವಿನ ನಿರೀಕ್ಷೆಯಲ್ಲಿರುವ ಎ.ಪಿ. ಅರ್ಜುನ್, ಸೀಮಂತ ಕಾರ್ಯಕ್ರಮ ಸಂತಸದ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜೊತೆಗೆ ಮುದ್ದು ಮಡದಿಯ ಸೀಮಂತ.. ಎಲ್ಲರ ಪ್ರೀತಿ, ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ.