ETV Bharat / sitara

'ಕ್ಷಮಿಸಿ ನಿಮ್ಮ‌ ಖಾತೆಯಲ್ಲಿ ಹಣವಿಲ್ಲ' ಅಂತಿದ್ದಾರೆ ದಿಗಂತ್​​​ - ದಿಗಂತ್​​ ಸಿನಿಮಾ

ದಿಗಂತ್​​​​ ಪಂಚೆಯುಟ್ಟು, ತಲೆಗೆ ಮಲೆನಾಡಿನ ಟೋಪಿ ತೊಟ್ಟು ಕ್ಯಾಮೆರಾಗೆ ಫೋಸ್​ ಕೊಟ್ಟಿದ್ದಾರೆ. ಚಿತ್ರದಲ್ಲಿ ದಿಗಂತ್​​ ಅಡಿಕೆ ವ್ಯಾಪಾರಿಯಾಗಿ ಕಾಣಿಲಿದ್ದಾರಂತೆ. ಇನ್ನು, ಸಿನಿಮಾಕ್ಕೆ ವಿನಾಯಕ ಕೋಡ್ಸರ ಆ್ಯಕ್ಷನ್​​ ಕಟ್​ ಹೇಳುತ್ತಿದ್ದು, ಸ್ಕಿಲ್ ಮಂಜು ಬಂಡವಾಳ ಹಾಕುತ್ತಿದ್ದಾರೆ..

diganth playing role in khamisi nimma khateyalli hanavilla
'ಕ್ಷಮಿಸಿ ನಿಮ್ಮ‌ ಖಾತೆಯಲ್ಲಿ ಹಣವಿಲ್ಲ' ಅಂತಿದ್ದಾರೆ ದಿಗಂತ್​​​
author img

By

Published : Oct 27, 2020, 1:55 PM IST

ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ದೂದ್​​ ಪೇಡಾ ದಿಗಂತ್​​, ಇದೀಗ ಕ್ಷಮಿಸಿ ನಿಮ್ಮ‌ ಖಾತೆಯಲ್ಲಿ ಹಣವಿಲ್ಲ ಅಂತಿದ್ದಾರೆ.

ಅರೇ.. ಇವರಿಗೇನಾಗಿದೆ. ದೊಡ್ಡ ಸ್ಟಾರ್​​ ಆಗಿರುವ ಇವರಲ್ಲಿ ಹಣವಿಲ್ಲವೇ ಅಂತಾ ಗೊಂದಲಕ್ಕೀಡಾಗಬೇಡಿ. ಯಾಕಂದ್ರೆ, ದಿಗಂತ್​ ನಟಿಸುತ್ತಿರುವ ಸಿನಿಮಾದ ಹೆಸರು 'ಕ್ಷಮಿಸಿ ನಿಮ್ಮ‌ ಖಾತೆಯಲ್ಲಿ ಹಣವಿಲ್ಲ' ಎಂದು.

diganth playing role in khamisi nimma khateyalli hanavilla
ನಟ ದಿಗಂತ್​​​

ಕ್ಯೂಟ್​​ ಹುಡ್ಗ ದಿಗ್ಗಿ ಈಗಾಗಲೇ, ಗಾಳಿಪಟ 2, ಎವರು(ರಿಮೇಕ್) ಮಾರಿ ಗೋಲ್ಡ್, ಹುಟ್ಟು ಹಬ್ಬದ ಶುಭಾಶಯಗಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಕ್ಷಮಿಸಿ ನಿಮ್ಮ‌ ಖಾತೆಯಲ್ಲಿ ಹಣವಿಲ್ಲ ಸಿನಿಮಾಕ್ಕೆ ಫೋಟೋ ಶೂಟ್​​ ಮಾಡಿಸಿದ್ದಾರೆ.

ಇನ್ನು ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಿನಿಮಾದ ಪೋಸ್ಟರ್​​ ಬಿಡುಗಡೆ ಮಾಡಿರುವ ಚಿತ್ರತಂಡ ಟೈಟಲ್​ ಮೂಲಕವೇ ಸಿನಿ ಪ್ರಿಯರಿಗೆ ಒಂಚೂರು ಕುತೂಹಲ ಹುಟ್ಟಿಸಿದೆ.

ದಿಗಂತ್​​​​ ಪಂಚೆಯುಟ್ಟು, ತಲೆಗೆ ಮಲೆನಾಡಿನ ಟೋಪಿ ತೊಟ್ಟು ಕ್ಯಾಮೆರಾಗೆ ಫೋಸ್​ ಕೊಟ್ಟಿದ್ದಾರೆ. ಚಿತ್ರದಲ್ಲಿ ದಿಗಂತ್​​ ಅಡಿಕೆ ವ್ಯಾಪಾರಿಯಾಗಿ ಕಾಣಿಲಿದ್ದಾರಂತೆ. ಇನ್ನು, ಸಿನಿಮಾಕ್ಕೆ ವಿನಾಯಕ ಕೋಡ್ಸರ ಆ್ಯಕ್ಷನ್​​ ಕಟ್​ ಹೇಳುತ್ತಿದ್ದು, ಸ್ಕಿಲ್ ಮಂಜು ಬಂಡವಾಳ ಹಾಕುತ್ತಿದ್ದಾರೆ.

ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ದಿಗಂತ್​​, ನಾನು ಈ ಕಥೆಯನ್ನು ಮೊದಲೇ ಮಾಡಬೇಕಿತ್ತು. ಸಿನಿಮಾದಲ್ಲಿ ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ನಡೆಯುವ ಕೆಲ ಪ್ರಸಂಗಗಳನ್ನು ಹೇಳಲಾಗಿದೆ. ಅಲ್ಲದೆ ಸಿನಿಮಾವನ್ನು ಮಲನಾಡಿನ ಸುತ್ತಮುತ್ತಲೇ ಚಿತ್ರೀಕರಣ ಮಾಡಲು ನಿರ್ದೇಶಕರು ಪ್ಲಾನ್​ ಮಾಡಿದ್ದಾರಂತೆ.

diganth playing role in khamisi nimma khateyalli hanavilla
'ಕ್ಷಮಿಸಿ ನಿಮ್ಮ‌ ಖಾತೆಯಲ್ಲಿ ಹಣವಿಲ್ಲ' ಅಂತಿದ್ದಾರೆ ದಿಗಂತ್​​​

ಈ ಸಿನಿಮಾದಲ ಮತ್ತೊಂದು ವಿಶೇಷ ಏನಂದ್ರೆ ನಿಜ ಜೀವನದಲ್ಲಿಯೂ ದಂಪತಿಯಾಗಿರುವ, ಐಂದ್ರಿತಾ ರೈ ಮತ್ತು ದಿಗಂತ್​ ಚಿತ್ರದಲ್ಲಿಯೂ ಜೋಡಿಯಾಗಲಿದ್ದಾರೆ. ದಿಗಂತ್​​ಗೆ ನಾಯಕಿಯಾಗಿ ಐಂದ್ರಿತಾ ಬಣ್ಣ ಹಚ್ಚುತ್ತಿದ್ದಾರೆ. ಸಿನಿಮಾವು ಇದೇ ನವೆಂಬರ್​​ನಿಂದ ಸೆಟ್ಟೇರುವ ಸಾಧ್ಯತೆಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.