ರಾಜಮೌಳಿ, ರಾಮ್ಚರಣ್, ಜೂ.ಎನ್ಟಿಆರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಆರ್ಆರ್ಆರ್ ದಿನದಿಂದ ದಿನಕ್ಕೆ ಕುತೂಹಲಗಳ ಆಗರವೇ ಆಗ್ತಿದೆ. ಇದಕ್ಕೆ ಕಾರಣ ಈ ಸಿನಿಮಾದಲ್ಲಿ ನಟಿಸಿರುವ ಅಲಿಸನ್ ಡೂಡಿ ಅಕಸ್ಮಾತಾಗಿ ಸಿನಿಮಾ ರಿಲೀಸ್ ದಿನಾಂಕವನ್ನು ಬಹಿರಂಗ ಮಾಡಿದ್ದಾರೆ.
![ ನಟಿ ಅಲಿಸನ್ ಡೂಡಿ](https://etvbharatimages.akamaized.net/etvbharat/prod-images/10341232_thumb8765.png)
ಹೌದು, ಆರ್ಆರ್ಆರ್ ಸಿನಿಮಾದಲ್ಲಿ ನಟಿಸುತ್ತಿರುವ ಐರಿಶ್ ನಟಿ ಅಲಿಸನ್ ಡೂಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಿಡುಗಡೆ ದಿನಾಂಕವನ್ನು ಪ್ರಕಟಿಸಿ ನಂತ್ರ ಕೆಲವೇ ನಿಮಿಷಗಲ್ಲಿ ಡಿಲೀಟ್ ಮಾಡಿದ್ದಾರೆ.
![ಅಚಾನಕ್ಕಾಗಿ RRR ರಿಲೀಸ್ ದಿನಾಂಕ ಹೇಳಿದ್ರು ಈ ನಟಿ!](https://etvbharatimages.akamaized.net/etvbharat/prod-images/10341232_thumb8.jpg)
ಅಲಿಸನ್ ಹೇಳಿರುವ ಪ್ರಕಾರ, RRR ಸಿನಿಮಾ ಅಕ್ಟೋಬರ್ 8ರಂದು ರಿಲೀಸ್ ಮಾಡಲು ನಿರ್ಧರಿಸಲಾಗಿದೆ ಎಂದು ಪೋಸ್ಟ್ ಮಾಡಿದ್ದರು. ಹೀಗೆ ಹೇಳಿದ ತಕ್ಷಣ ಈ ಸುದ್ದಿ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿದೆ. ಆದ್ರೆ ಆರ್ಆರ್ಆರ್ ಚಿತ್ರತಂಡ ಈ ಸುದ್ದಿಯನ್ನು ದೊಡ್ಡ ಪ್ರಮಾಣದ ಸುದ್ದಿಯಾಗುವಂತೆ ಘೋಷಣೆ ಮಾಡಲು ನಿರ್ಧರಿಸಿತು.
![RRR ಅಚಾನಕ್ಕಾಗಿ RRR ರಿಲೀಸ್ ದಿನಾಂಕ ಹೇಳಿದ್ರು ಈ ನಟಿ!](https://etvbharatimages.akamaized.net/etvbharat/prod-images/10341232_thumb.jpg)
ಸದ್ಯ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿದ್ದು, ನಟಿ ಅಲಿಸನ್ ಕೂಡ ಭಾಗಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅಲಿಸನ್ ಲೇಡಿ ಸ್ಕಾಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
![ಅಚಾನಕ್ಕಾಗಿ RRR ರಿಲೀಸ್ ದಿನಾಂಕ ಹೇಳಿದ್ರು ಈ ನಟಿ!](https://etvbharatimages.akamaized.net/etvbharat/prod-images/10341232_thumb6.jpg)
![ಅಚಾನಕ್ಕಾಗಿ RRR ರಿಲೀಸ್ ದಿನಾಂಕ ಹೇಳಿದ್ರು ಈ ನಟಿ!](https://etvbharatimages.akamaized.net/etvbharat/prod-images/10341232_thumb3.jpg)