ETV Bharat / sitara

ಪ್ಯಾರಾ ಕಮಾಂಡೋ ಆಗಲಿದ್ದಾರೆ ಆ್ಯಕ್ಷನ್ ಪ್ರಿನ್ಸ್​​​​...ಟ್ವಿಟ್ಟರ್​​​ನಲ್ಲಿ ಖುಷಿ ಹಂಚಿಕೊಂಡ ಧ್ರುವ - Nanda kishor direction Dubari

ರಾಘವೇಂದ್ರ ಹೆಗ್ಡೆ ಅವರ ಹೊಸ ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದು ಈ ವಿಚಾರವನ್ನು ಧ್ರುವ ತಮ್ಮ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ. ದುಬಾರಿ ಚಿತ್ರದ ನಂತರ ರಾಘವೇಂದ್ರ ನಿರ್ದೇಶನದ ಹೊಸ ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸಲಿದ್ದಾರೆ.

Dhruva sarja
ಧ್ರುವ ಸರ್ಜಾ
author img

By

Published : Dec 24, 2020, 1:44 PM IST

ನಂದಕಿಶೋರ್​ ನಿರ್ದೇಶನದ 'ದುಬಾರಿ' ಚಿತ್ರೀಕರಣಕ್ಕೆ ತೆರಳಲು ಧ್ರುವ ಸರ್ಜಾ ಸಜ್ಜಾಗುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಇದೀಗ ಜನವರಿಯಲ್ಲಿ ದುಬಾರಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಧ್ರುವಾ ಸರ್ಜಾ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: 'ರೋಮ್' ಚಿತ್ರೋತ್ಸವದಲ್ಲಿ ಗಿರೀಶ್​​​​ ಕಾಸರವಳ್ಳಿ ಚಿತ್ರಕ್ಕೆ ಸ್ಪೆಷಲ್ ಜ್ಯೂರಿ ಪ್ರಶಸ್ತಿ

ರಾಘವೇಂದ್ರ ಹೆಗ್ಡೆ ನಿರ್ಮಿಸಿ ನಿರ್ದೇಶಿಸುತ್ತಿರುವ ಹೊಸ ಚಿತ್ರವೊಂದರಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ರಾಘವೇಂದ್ರ ಹೆಗ್ಡೆ ಈ ಹಿಂದೆ ದರ್ಶನ್ ಅಭಿನಯದ ಜಗ್ಗುದಾದಾ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದರು. ನಂತರ ಧ್ರುವ ಸರ್ಜಾ ಅಭಿನಯದಲ್ಲಿ ಸಿನಿಮಾವೊಂದನ್ನು ಅವರು ನಿರ್ದೇಶಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಅದೀಗ ನಿಜವಾಗಿದ್ದು ರಾಘವೇಂದ್ರ ನಿರ್ದೇಶನದಲ್ಲಿ ಧ್ರುವ ಸರ್ಜಾ ಆ್ಯಕ್ಟಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗೆ ಧ್ರುವ ಸರ್ಜಾಗೆ ರಾಘವೇಂದ್ರ ಹೆಗ್ಡೆ ಕಥೆ ಹೇಳಿದ್ದಾರೆ. ಚಿತ್ರದ ಮೊದಲಾರ್ಧ ಕಥೆಯನ್ನು ಕೇಳಿರುವ ಧ್ರುವ ಥ್ರಿಲ್​ ಆಗಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಅವರು, 'ರಾಘವೇಂದ್ರ ಹೇಳಿರುವ ಕಥೆಯ ಮೊದಲಾರ್ಧ ಕೇಳಿ ಖುಷಿಯಾಯಿತು' ಎಂದು ಬರೆದುಕೊಂಡಿದ್ದಾರೆ. ಈಗ ಅರ್ಧ ಕಥೆ ಕೇಳಿರುವ ಧ್ರುವ, ಇನ್ನರ್ಧವನ್ನು ಮುಂದಿನ ತಿಂಗಳು ಕೇಳಲಿದ್ದಾರಂತೆ. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಪ್ಯಾರಾ ಕಮಾಂಡೋ ಆಗಿ ಅಭಿನಯಿಸುತ್ತಿದ್ದು, ಈ ಪಾತ್ರ ಮತ್ತು ಚಿತ್ರ ಅವರ ಕೆರಿಯರ್​ನಲ್ಲೇ ವಿಭಿನ್ನವಾಗಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಹೆಸರಿಡದ ಈ ಸಿನಿಮಾ 'ದುಬಾರಿ' ಸಿನಿಮಾ ಮುಗಿದ ನಂತರ ಪ್ರಾರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 'ದುಬಾರಿ' ಚಿತ್ರವು ಮುಂದಿನ ವರ್ಷ ಮೊದಲಾರ್ಧದಲ್ಲಿ ಮುಗಿಯಲಿದ್ದು, ಆ ನಂತರ ಧ್ರುವ, ಪ್ಯಾರಾ ಕಮಾಂಡೋ ಆಗಿ ತೆರೆಯ ಮೇಲೆ ಮಿಂಚಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.