ದೀಪಿಕಾ ಪಡುಕೋಣೆ ಆಗಾಗ ತಮ್ಮ ಅಭಿಮಾನಿಗಳಿ ಸರ್ಪ್ರೈಸ್ ಕೊಡ್ತಾನೆ ಇರ್ತಾರೆ. ಆಗಾಗ ತಮ್ಮ ಬಾಲ್ಯದ ಹಳೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಇನ್ನಷ್ಟು ಆಪ್ತರಾಗುತ್ತಾರೆ. ಇದೀಗ ಅಂತಹದ್ದೇ ಒಂದು ತಮ್ಮ ಹಳೆಯ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
2000ನೇ ಇಸವಿಯಲ್ಲಿ ಬಾಲಿವುಡ್ ನಟ ಅಮಿರ್ ಖಾನ್ರನ್ನು ದೀಪಿಕಾ ಭೇಟಿಯಾಗಿದ್ದರು. ಈ ವೇಳೆ ತಮ್ಮ ತಂದೆ ತಾಯಿಗಳಾದ ಪ್ರಕಾಶ್ ಪಡುಕೋಣೆ ಮತ್ತು ಉಜ್ಜಲ ಪ್ರಡುಕೋಣೆ ಹಾಗೂ ಇಬ್ಬರು ಸಂಬಂಧಿಕರು ಇದ್ದಾರೆ. ಈ ಫೋಟೋವನ್ನು ದೀಪಿಕಾ ಪಡುಕೋಣೆ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೊ 2000ರಲ್ಲಿ ಅಮಿರ್ ಖಾನ್ರನ್ನು ಭೇಟಿಯಾಗಿದ್ದ ವೇಳೆಯದ್ದು. ಅಂದು ಅಮಿರ್ ಖಾನ್ ಮೊಸರನ್ನ ಊಟ ಮಾಡುತ್ತಿದ್ದರು. ಅಂದು ನನಗೆ ಊಟ ಮಾಡಬೇಕೆನಿಸಿತ್ತು. ಆದರೆ, ನಾನು ಕೇಳಲೂ ಇಲ್ಲ, ಅವರು ಕರೆಯಲೂ ಇಲ್ಲ ಎಂದು ದೀಪಿಕಾ ಬರೆದುಕೊಂಡಿದ್ದಾರೆ.