ಬಿಗ್ ಬಾಸ್ ಎಂದರೆ ಅದು ವಿವಾದಗಳ ಶೋ ಅಂತಲೇ ಕರೆಯಲ್ಪಟ್ಟಿದೆ. ಜಗಳ, ಪ್ರೀತಿ, ವಿವಾದ ತಳಕು ಹಾಕಿಕೊಳ್ಳುವುದು ಈ ಮನೆಯಲ್ಲಿ ಕಾಮನ್. ಕಳೆದ ಸೀಸನ್ನಲ್ಲಿಯೂ ಅಷ್ಟೇ!. ಬಿಗ್ ಬಾಸ್ ಹಲವು ವಿಷಯಗಳಿಗೆ ಸುದ್ದಿಯಾಗಿತ್ತು.
ಅದರಲ್ಲೂ ಸೀಸನ್ 7ರ ಸ್ಪರ್ಧಿಗಳಾದ ದೀಪಿಕಾ ದಾಸ್ ಹಾಗು ಶೈನ್ ಶೆಟ್ಟಿ ಅವರ ಒಡನಾಟ ದೊಡ್ಮನೆಯಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಇವರಿಬ್ಬರ ಒಡನಾಟ ಕಿರುತೆರೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಅದೆಷ್ಟು ಎಂದರೆ ಇವರಿಬ್ಬರೂ ಪ್ರೀತಿಯಲ್ಲಿದ್ದಾರಾ? ಎಂದು ವೀಕ್ಷಕರು ಕೇಳುತ್ತಿದ್ದರು.
ಓದಿ: ಗೋವಾ ಕಡಲ ತೀರದಲ್ಲಿ ಎಂಜಾಯ್ ಮಾಡುತ್ತಿರುವ ಮುದ್ದುಲಕ್ಷ್ಮಿ
ಈ ಬಗ್ಗೆ ಮಾತನಾಡಿರುವ ದೀಪಿಕಾ, ನಮ್ಮಿಬ್ಬರ ನಡುವೆ ಉತ್ತಮ ಗೆಳೆತನವಿದೆ ಎಂದು ಹೇಳಿದ್ದಾರೆ. ಕಲರ್ಸ್ ಕನ್ನಡದಲ್ಲಿ ಚಂದು ಗೌಡ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಚಾಟ್ ಕಾರ್ನರ್ ಶೋ ನಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.
'ನಾವಿಬ್ಬರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದಿಲ್ಲ. ಯಾಕೆಂದರೆ ಅಲ್ಲಿ ಎಲ್ಲಾ ವಿಚಾರಗಳು ಬಲುಬೇಗ ವೈರಲ್ ಆಗುವ ಕಾರಣದಿಂದ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ. ಇದರ ಹೊರತಾಗಿ ವೈಯಕ್ತಿಕ ಜೀವನದಲ್ಲಿ ಯಾವುದಾದರೂ ಪ್ರಪೋಸಲ್ ಬಂದಿದೆಯಾ? ಎಂಬ ಚಂದು ಅವರ ಪ್ರಶ್ನೆಗೆ ಉತ್ತರಿಸಿರುವ ದೀಪಿಕಾ, 'ಇಲ್ಲ' ಎಂದು ಹೇಳಿದ್ದಾರೆ.