ETV Bharat / sitara

ಬೆಳಕಿನ ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ ತಾರೆಯರು! - Deepavali Celebration

ಸ್ಯಾಂಡಲ್​ವುಡ್​ ತಾರಾ ಬಳಗದಲ್ಲಿ ಈ ಸಾರಿಯ ಬೆಳಕಿನ ಹಬ್ಬ ದೀಪಾವಳಿ ಸ್ವಲ್ಪ ಜೊರಾಗಿಯೇ ಇತ್ತು. ನಟ-ನಟಿಯರು ತಮ್ಮ ಕುಟುಂಬ ಸದಸ್ಯರ ಜೊತೆ ಕೂಡಿ ದೀಪಾವಳಿಯನ್ನು ಬಲು ಸಂಭ್ರಮದಿಂದಲೇ ಆಚರಿಸಿದರು. ನಟ ಗಣೇಶ್ ಅವರ ಮನೆಯಲ್ಲಿ ಸಡಗರ ಸ್ವಲ್ಪ ಜೋರಾಗಿಯೇ ಇತ್ತು.

Deepavali Celebration In Sandalwood Actor And Actress House
ನಟ ಗಣೇಶ್ ಅವರ ಮನೆಯಲ್ಲಿ ಹಬ್ಬದ ಸಡಗರ
author img

By

Published : Nov 16, 2020, 9:13 PM IST

Updated : Nov 16, 2020, 9:23 PM IST

ಅಂಧಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಅದೇ ರೀತಿ ಚಂದನವನದ ನಟ-ನಟಿಯರ ಮನೆಯಲ್ಲಿ ಈ ಸಾರಿಯ ಬೆಳಕಿನ ಹಬ್ಬದ ಸಡಗರ ಜೋರಾಗಿಯೇ ಇತ್ತು.

Deepavali Celebration In Sandalwood Actor And Actress House
ನಟ ರಮೇಶ್​ ಅರವಿಂದ್​

ಗೋಲ್ಡನ್ ಸ್ಟಾರ್ ಗಣೇಶ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ರಮೇಶ್ ಅರವಿಂದ್, ಹರಿಪ್ರಿಯಾ, ರಘು ಮುಖರ್ಜಿ, ಚಂದನ್ ಶೆಟ್ಟಿ, ಶ್ವೇತಾ ಶ್ರೀವಾತ್ಸವ್ ಸೇರಿದಂತೆ ಸಾಕಷ್ಟು ನಟ-ನಟಿಯರು ತಮ್ಮ ಕುಟುಂಬದ ಸದಸ್ಯರ ಜೊತೆ ಬೆಳಕಿನ‌ ಹಬ್ಬದಲ್ಲಿ ಮಿಂದೆದ್ದಿದ್ದಾರೆ.

ಮಡದಿಯೊಂದಿಗೆ ನಿಖಿಲ್​ ಕುಮಾರಸ್ವಾಮಿ

ಈ ಸಂಭ್ರಮ ಒಂಚೂರು ನಟ ಗಣೇಶ್ ಅವರ ಮನೆಯಲ್ಲಿ ಜಾಸ್ತಿನೇ ಕಳೆ ಕಟ್ಟಿತ್ತು. ಗಣೇಶ್ ಫ್ಯಾಮಿಲಿ ಜೊತೆ ಅಮೂಲ್ಯ ಮತ್ತು ಪತಿ ಜಗದೀಶ್, ನಟ ರವಿಶಂಕರ್ ಗೌಡ ಕುಟುಂಬ ಸೇರಿದಂತೆ ಸ್ನೇಹಿತರ ಬಳಗ ಈ ದೀಪಾವಳಿಯನ್ನ ಸಂಭ್ರಮದಿಂದ ಆಚರಿಸಿದ್ದಾರೆ.

ಅರ್ಜುನ್ ಸರ್ಜಾ ಕೂಡ ತಮ್ಮ ಚೆನ್ನೈ ನಿವಾಸದಲ್ಲಿ ಕುಟುಂಬದ ಜೊತೆ ಈ ಹಬ್ಬವನ್ನು ಆಚರಿಸಿದ್ದಾರೆ. ಇನ್ನು ನಿಖಿಲ್ ಕುಮಾರಸ್ವಾಮಿಗೆ ಮದುವೆ ಆದ ಬಳಿಕ ಇದು ಮೊದಲ ದೀಪಾವಳಿ ಹಬ್ಬ. ಪತ್ನಿ ರೇವತಿ ಜೊತೆ ಯುವರಾಜ ಈ ಬೆಳಕಿನ ಹಬ್ಬವನ್ನ ಸೆಲೆಬ್ರೆಟ್ ಮಾಡಿದ್ದಾರೆ.

ಕಟುಂಬ ಸದಸ್ಯರೊಂದಿಗೆ ನಟ ಅರ್ಜುನ್ ಸರ್ಜಾ

ನಟಿ ಶ್ವೇತಾ ಶ್ರೀವಾತ್ಸವ್ ಸ್ವಲ್ಪ ವಿಭಿನ್ನವಾಗಿ ಈ ಹಬ್ಬವನ್ನ ಆಚರಿಸಿದ್ದಾರೆ. ಮಗಳ ಜೊತೆ ಕಲರ್​​ ಫುಲ್ ಫೋಟೋ ಶೂಟ್ ಮಾಡಿಸಿ ಹಬ್ಬದ ಖುಷಿಯನ್ನ ಎಂಜಾಯ್ ಮಾಡಿದ್ದಾರೆ. ಇನ್ನು ರಮೇಶ್ ಅರವಿಂದ್, ರಕ್ಷಿತಾ ಪ್ರೇಮ್, ಹರಿಪ್ರಿಯಾ, ರಘು ಮುಖರ್ಜಿ, ಚಂದನ್ ಶೆಟ್ಟಿ, ಪತ್ನಿ ನಿವೇದಿತಾ ಗೌಡ ಹೊಸ ಬಟ್ಟೆ ಧರಿಸಿ ದೀಪಗಳನ್ನ ಹಿಡಿದು, ಹಬ್ಬದ ಸಂತೋಷದ ಕ್ಷಣವನ್ನ ಅನುಭವಿಸಿದ್ದಾರೆ.

ಚಂದನ್​ ಶೇಟ್ಟಿ ಮತ್ತು ನಿವೇದಿತಾ

Last Updated : Nov 16, 2020, 9:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.