ETV Bharat / sitara

'ಇಂಡಿಯಾ vs ಇಂಗ್ಲೆಂಡ್' ಟ್ರೇಲರ್ ಬಿಡುಗಡೆ ಮಾಡಿದ ಚಾಲೆಂಜಿಂಗ್ ಸ್ಟಾರ್​​...! - ಇಂಡಿಯಾ ವರ್ಸಸ್ ಇಂಗ್ಲೆಂಡ್ ಟ್ರೇಲರ್ ಬಿಡುಗಡೆ ಮಾಡಿದ ದರ್ಶನ್

'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದ ಟೈಟಲ್ ವಿಶೇಷತೆಯನ್ನು ವರ್ಣಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಚಿತ್ರದ ಟ್ರೇಲರ್​​​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇಂಡಿಯಾ vs ಇಂಗ್ಲೆಂಡ್ ನಾಗತಿಹಳ್ಳಿ ಚಂದ್ರಶೇಖರ್ ಅವರ 15 ನೇ ಸಿನಿಮಾವಾಗಿದ್ದು ಮೊದಲ ಬಾರಿಗೆ ನಿರ್ದೇಶನದ ಜೊತೆ ಚಿತ್ರದ ವಿತರಣೆ ಕೂಡಾ ಅವರೇ ಮಾಡುತ್ತಿದ್ದಾರೆ.

India vs England
'ಇಂಡಿಯಾ vs ಇಂಗ್ಲೆಂಡ್'
author img

By

Published : Jan 13, 2020, 5:30 PM IST

ಸ್ಯಾಂಡಲ್​​ವುಡ್​​​​​​​​​​​​ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ, ವಷಿಷ್ಠ ಸಿಂಹ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದ ಟ್ರೇಲರನ್ನು ಚಾಲೆಂಜಿಂಗ್​ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದಾರೆ.

ಜನವರಿ 24 ರಂದು ಬಿಡುಗಡೆಯಾಗುತ್ತಿರುವ 'ಇಂಡಿಯಾ vs ಇಂಗ್ಲೆಂಡ್'

'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದ ಟೈಟಲ್ ವಿಶೇಷತೆಯನ್ನು ವರ್ಣಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಚಿತ್ರದ ಟ್ರೇಲರ್​​​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅಲ್ಲದೆ ಚಿತ್ರದ ಟ್ರೇಲರನ್ನು ದರ್ಶನ್ ಲಾಂಚ್ ಮಾಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ನಟಿ ಸುಮಲತಾ ಅಂಬರೀಶ್, ನನ್ನ ಮಗ ದರ್ಶನ್ ಜೊತೆ ಇರುವವರಿಗೂ ನಾನು ಗೆಲ್ತಾನೆ ಇರ್ತೀನಿ', ಅದೇ ರೀತಿ ಈ‌ ಚಿತ್ರ ಕೂಡಾ ಗೆದ್ದೆ ಗೆಲ್ಲುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಅಲ್ಲದೆ ಚಿತ್ರದಲ್ಲಿ ನನ್ನದು ಬಹಳ ವಿಶೇಷವಾದ ಪಾತ್ರವಾಗಿದ್ದು. ಮೊದಲ ಬಾರಿಗೆ ನಾನು ಪ್ರಕಾಶ್ ಬೆಳವಾಡಿ ಮಾನ್ವಿತಾ ಹರೀಶ್ ಅವರ ಜೊತೆ ಕೆಲಸ ಮಾಡಿರುವುದು ಬಹಳ ಖುಷಿ ಕೊಟ್ಟಿದೆ ಎಂದು ಚಿತ್ರದ ಶೂಟಿಂಗ್ ನೆನಪುಗಳನ್ನು ಸುಮಲತಾ ಮೆಲುಕು ಹಾಕಿದರು.

India vs England
'ಇಂಡಿಯಾ vs ಇಂಗ್ಲೆಂಡ್' ಟ್ರೇಲರ್ ಬಿಡುಗಡೆ ಸಮಾರಂಭ

ಈ ಚಿತ್ರದಲ್ಲಿ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಹಳ ವಿಶೇಷವಾಗಿದ್ದು ಖಂಡಿತ ಎಲ್ಲರಿಗೂ ಇಷ್ಟವಾಗಲಿದೆ. ದರ್ಶನ್ ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿರುವುದು ನಮಗೆ ಬಹಳ ಖುಷಿ ನೀಡಿದೆಎಂದು ಟ್ರೇಲರ್ ಬಿಡುಗಡೆ ಮಾಡಿದ್ದಕ್ಕೆ ದರ್ಶನ್​​​ಗೆ ಧನ್ಯವಾದ ಅರ್ಪಿಸಿದರು. ಇನ್ನು ಮಾನ್ವಿತಾ ಕಾಮತ್ ಮಾತನಾಡಿ ಯಾವ ಸಿನಿಮಾಗಳನ್ನು ಫ್ಯಾಮಿಲಿ ಸಹಿತ ನೋಡಬೇಕು..ಯಾವ ಸಿನಿಮಾಗಳನ್ನು ಫ್ರೆಂಡ್ಸ್ ಹಾಗೂ ಲವರ್ ಜೊತೆ ನೋಡಬೇಕು ಎಂದು ಬಹಳಷ್ಟು ಬಾರಿ ಕನ್ಫ್ಯೂಸ್​ ಆಗುವುದು ಸಾಮಾನ್ಯ. ಆದರೆ ಈ ಸಿನಿಮಾವನ್ನು ಇಡೀ ಫ್ಯಾಮಿಲಿ ಜೊತೆ ಕುಳಿತು ನೋಡಬಹುದು ಎಂದು ಹೇಳಿದರು.

  • " class="align-text-top noRightClick twitterSection" data="">

ಇಂಡಿಯಾ vs ಇಂಗ್ಲೆಂಡ್ ನಾಗತಿಹಳ್ಳಿ ಚಂದ್ರಶೇಖರ್ ಅವರ 15 ನೇ ಸಿನಿಮಾವಾಗಿದ್ದು ಮೊದಲ ಬಾರಿಗೆ ನಿರ್ದೇಶನದ ಜೊತೆ ಚಿತ್ರದ ವಿತರಣೆ ಕೂಡಾ ಅವರೇ ಮಾಡುತ್ತಿದ್ದಾರೆ. ವಿಶ್ವಾದ್ಯಂತ ಎಲ್ಲೆಲ್ಲಿ ಕನ್ನಡಿಗರು ಇದ್ದಾರೆ ಅಲ್ಲೆಲ್ಲಾ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತೇವೆ ಎಂದು ಮೇಷ್ಟ್ರು ಹೇಳಿದ್ದಾರೆ. ನನ್ನ 'ಅಮೆರಿಕ ಅಮೆರಿಕ' ಸಿನಿಮಾ ನಂತರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ಇದು. ಜನವರಿ 24 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ನೋಡಿ ಹರಸಿ ಎಂದು ಮೇಷ್ಟ್ರು ಮನವಿ ಮಾಡಿದ್ದಾರೆ. ಚಿತ್ರಕ್ಕೆ ಶಂಕರೇಗೌಡ ಬಂಡವಾಳ ಹೂಡಿದ್ದು, ಸುಮಲತಾ ಅಂಬರೀಶ್, ಸಾಧುಕೋಕಿಲ, ಪ್ರಕಾಶ್ ಬೆಳವಾಡಿ ಹಾಗೂ ನಿರ್ದೇಶಕ ಶಿವಮಣಿ ನಟಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನೀಡಿದ್ದು 'ಅಮೆರಿಕ ಅಮೆರಿಕ' ಚಿತ್ರದಂತೆ ಈ ಸಿನಿಮಾ ಕೂಡಾ ಕಮಾಲ್ ಮಾಡುತ್ತಾ ಕಾದು ನೋಡಬೇಕು.

Intro:ಇಂಡಿಯಾ ವರ್ಸಸ್ ಇಂಗ್ಲೆಂಡ್ ಟೈಟಲ್ ಗೆ ಸರ್ಪ್ರೈಸ್ ಟ್ವಿಸ್ಟ್ ಕೊಟ್ಟು ಟ್ರೈಲರ್ ಲಾಂಚ್ ಮಾಡಿದ ದಚ್ಚು..

ಸ್ಯಾಂಡಲ್ವುಡ್ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ನಟ ವಶಿಷ್ಠ ಸಿಂಹ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ " ಇಂಡಿಯಾ ವರ್ಸಸ್ ಇಂಗ್ಲೆಂಡ್" ಚಿತ್ರದ ಟೈಟಲ್ಗೆ ಸರ್ಪ್ರೈಸ್ ಟ್ವಿಸ್ಟ್ ಕೊಟ್ಟು ಚಾಲೆಂಜ್ ಸ್ಟಾರ್ ದರ್ಶನ್ ಚಿತ್ರದ ಟ್ರೈಲರ್ ಲಾಂಚ್ ಮಾಡಿದ್ದಾರೆ. ಹೌದು ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರದ ಟೈಟಲ್ ವಿಶೇಷತೆಯನ್ನು ವರ್ಣಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಚಿತ್ರದ ಟ್ರೈಲರ್ ಅನ್ನು ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅಲ್ಲದೆ ಚಿತ್ರದ ಟ್ರೈಲರ್ ಅನ್ನು ದರ್ಶನ್ ಲಾಂಚ್ ಮಾಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ನಟಿ ಸುಮಲತಾ ಅಂಬರೀಶ್ ನನ್ನ ಮಗ ದರ್ಶನ್ ಜೊತೆ ಇರೋವರೆಗೂ ನಾನು ಗೆಲ್ತಾನೆ ಇರ್ತೀನಿ, ಅದೇ ರೀತಿ ಈ‌ ಚಿತ್ರವೂ ಗೆದ್ದೆ ಗೆಲ್ಲುತ್ತೆ ಎಂದು ಹೇಳಿದ್ರು.ಅಲ್ಲದೆ ಚಿತ್ರದಲ್ಲಿ ನನ್ನದು ತುಂಬ ವಿಶೇಷವಾದ ಪಾತ್ರವಾಗಿದ್ದು. ಮೊದಲ ಬಾರಿಗೆ ನಾನು ಪ್ರಕಾಶ್ ಬೆಳವಾಡಿ ಮಾನ್ವಿತಾ ಹರೀಶ್ ಅವರ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ ಎಂದು ಚಿತ್ರದ ಶೂಟಿಂಗ್ ನೆನಪುಗಳನ್ನು ಸುಮಲತಾ ಮೆಲುಕು ಹಾಕಿದ್ರು.

Body:ಇನ್ನು ಈ ಚಿತ್ರದಲ್ಲಿ ಕಂಚಿನ ಕಂಠದ ನಟ ವಸಿಷ್ಟ ಸಿಂಹ ಫಸ್ಟ್ ಟೈಮ್ ನಾಯಕನಾಗಿ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿದ್ದು, ಟಗರು ಪುಟ್ಟಿ ಮಾನ್ವಿತಾ ಹರೀಶ್ ಜೊತೆಯಾಟ ಆಡಿದ್ದಾರೆ.ಇನ್ನು ಈ ಚಿತ್ರ ತುಂಭಾ ವಿಶೇಷವಾಗಿದ್ದು ಖಂಡಿತಾ ಎಲ್ಲಾರಿಗೂ ಇಷ್ಠವಾಗಿತ್ತೆ. ನಮ್ಮ ಚಿತ್ರದ ಟ್ರೈಲರ್ ಅನ್ನು ದರ್ಶನ್ ಸರ್ ಲಾಂಚ್ ಮಾಡಿಕೊಟ್ಟಿದ್ದು ನಮಗೆ ತುಂಬಾ ಸ್ಪೆಷಲ್ ಆಗಿದೆ ಎಂದು ಟ್ರೈಲರ್ ಲಾಂಚ್ ಮಾಡಿಕೊಟ್ಟಿದ್ದಕ್ಕೆ ದಚ್ಚುಗೆ ಥ್ಯಾಂಕ್ಸ್ ಹೇಳಿದರು. ಕೆಲವು ಸಿನಿಮಾಗಳನ್ನು ಫ್ಯಾಮಿಲಿ ಜೊತೆ ಫ್ರೆಂಡ್ಸ್ ಜೊತೆ ಹಾಗೂ ಲವರ್ ಗಳು ಯಾರ ಜೊತೆ ನೋಡಬೇಕು ಎಂದು ಕನ್ಪ್ಯೂಸ್ ಆಗುತ್ತೆ.ಅದ್ರೆ ಈ ಚಿತ್ರವನ್ನು ಇಡೀ ಫ್ಯಾಮಿಲಿ ಜೊತೆ ಕುಳಿತು ನೋಡುವಂತಹ ಸಿನಿಮಾ ಟಗರು ಪುಟ್ಟಿ ಮಾನ್ವಿತಾ ಹರೀಶ್ ಹೇಳಿದ್ರು. ಇನ್ನು ಚಿತ್ರದ ಮತ್ತೊಂದು ವಿಶೇಷ ಅಂದರೆ ಇಂಡಿಯಾ ವರ್ಸಸ್ ಇಂಗ್ಲೆಂಡ್ ಮೇಸ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 15ನೇ ಚಿತ್ರವಾಗಿದ್ದು, ಫಸ್ಟ್ ಟೈಂ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಜೊತೆಗೆ ವಿತರಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅಲ್ಲದೆ ಈ ಚಿತ್ರವನ್ನು ವಿಶ್ವದಾದ್ಯಂತ ಎಲ್ಲಿ ಕನ್ನಡಿಗರು ಇದ್ದಾರೆ. ಅಂತಹ ಎಲ್ಲಾ ಕಡೆ ಈ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. ನನ್ನ ಅಮೆರಿಕ ಅಮೆರಿಕ ಚಿತ್ರದ ನಂತರ ತುಂಬಾ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರವೆಂದರೆ ಇಂಡಿಯಾ ವರ್ಸಸ್ ಇಂಗ್ಲೆಂಡ್. ಇನ್ನು ಚಿತ್ರವನ್ನು ಈ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರದ ಕಥೆಯೂ ಕಾರಣ. ಇನ್ನು ಜನವರಿ 24ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ ಕನ್ನಡ ಸಿನಿ ರಸಿಕರು ನಮ್ಮ ಚಿತ್ರವನ್ನು ನೋಡಿ ಹರಸಿ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರತಂಡ ಸಿನಿರಸಿಕರ ಅಲ್ಲಿ ಮನವಿ ಮಾಡಿಕೊಂಡರು.ಇನ್ನು ಈ ಚಿತ್ರವನ್ನು ಇಷ್ಟಕಾಮ್ಯ ಚಿತ್ರವನ್ನು ನಿರ್ಮಾಣ ಮಾಡಿದ್ದ ಶಂಕರೇಗೌಡ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದು, ಬಹು ದೊಡ್ಡ ತಾರಾಬಳಗ ಇರುವ
ಈ ಚಿತ್ರದಲ್ಲಿ ಸುಮಲತಾ ಅಂಬರೀಶ್, ಸಾಧು ಕೋಕಿಲ ಪ್ರಕಾಶ್ ಬೆಳವಾಡಿ ಹಾಗೂ ನಿರ್ದೇಶಕ ಶಿವಮಣಿ ನಟಿಸಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದ್ದು. ನಾಗತಿಹಳ್ಳಿ ಚಂದ್ರಶೇಖರ್ ಅವರ, ಅಮೇರಿಕಾ ಅಮೇರಿಕಾ ,ನನ್ನ ಪ್ರೀತಿಯ ಹುಡುಗಿ, ಚಿತ್ರಗಳ ತರ ಈ ಚಿತ್ರವೂ ಕಮಾಲ್ ಮಾಡುತ್ತ ನೋಡಬೇಕಿದೆ.

ಸತೀಶ ಎಂಬಿ

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.