ETV Bharat / sitara

DPL-2 ಉದ್ಘಾಟಿಸಿದ ಡಿ-ಬಾಸ್‌.. ತಾಯಿಗೆ ನಿತ್ಯ ವಿಷ್‌ ಮಾಡಿ.. ಪ್ರತಿದಿನವೂ ಮದರ್ಸ್ ಡೇ ಅಂದ್ರು ದರ್ಶನ್!

ಚಾಲೆಂಜಿಂಗ್ ಸ್ಟಾರ್ ದರ್ಶನ್​​​​ಗೆ ರಾಜ್ಯಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ. 'ಡಿ ಕಂಪನಿ' ಎಂಬ ಅಭಿಮಾನಿ ಸಂಘ ಕಟ್ಟಿಕೊಂಡಿರುವ ಅಭಿಮಾನಿಗಳು ಆ ಮೂಲಕ ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತಿದ್ದಾರೆ.

ದರ್ಶನ್
author img

By

Published : May 12, 2019, 5:08 PM IST

ರಾಜ್ಯಾದ್ಯಂತ ವಿವಿಧ ಜಿಲ್ಲೆಯಿಂದ ಡಿ ಕಂಪನಿ ಸದಸ್ಯರು ಸೇರಿ ಇಂದು ಬೆಂಗಳೂರಿನ UCPE ಮೈದಾನದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಿದ್ದರು. ಈ ಪಂದ್ಯಾವಳಿ ಉದ್ಘಾಟನೆಗೆ ನಟ ದರ್ಶನ್ ಅವರನ್ನೇ ಆಹ್ವಾನಿಸಲಾಗಿತ್ತು. ತಮ್ಮ ತಮ್ಮ ತಂಡಗಳಿಗೆ ಅಭಿಮಾನಿಗಳು ದರ್ಶನ್ ಸಿನಿಮಾ ಹೆಸರನ್ನೇ ಇರಿಸಿಕೊಂಡಿದ್ದು ವಿಶೇಷವಾಗಿತ್ತು. ಒಟ್ಟು ಹತ್ತು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದು DPL ( Darshan Premier League) ಕಪ್​​ಗಾಗಿ ಸೆಣಸಾಡುತ್ತಿವೆ.

ದರ್ಶನ್ ಪ್ರೀಮಿಯರ್ ಲೀಗ್​​​

ಟೂರ್ನಮೆಂಟ್ ನಡೆಯುತ್ತಿದ್ದ ಗ್ರೌಂಡ್​​​ಗೆ ಆಗಮಿಸಿದ ದರ್ಶನ್​​​​ ಎಲ್ಲಾ ತಂಡಗಳ ಜೊತೆ ಫೋಟೋಗೆ ಫೋಸ್ ಕೊಟ್ಟು ಬೆಸ್ಟ್ ಆಫ್ ಲಕ್ ಹೇಳಿದರು. ಅಲ್ಲದೆ ತಾವೇ ಸ್ವತ: ಬ್ಯಾಟ್ ಬೀಸಿ ಪಂದ್ಯಾವಳಿಗೆ ಚಾಲನೆ ನೀಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದರ್ಶನ್​​​, ಮನರಂಜನೆ ಬಿಟ್ಟು ನಾನು ಇವರಿಗೆ ಏನೂ ಕೊಡುತ್ತಿಲ್ಲ. ಆದರೆ ಇವರೆಲ್ಲಾ ತಾವೇ ಹಣ ಹಾಕಿ ಈ ಪಂದ್ಯಾವಳಿ ಆಯೋಜಿಸಿದ್ದಾರೆ. ನನಗೆ ಸ್ಟೇಡಿಯಂನಲ್ಲಿ ಕುಳಿತು ಕ್ರಿಕೆಟ್ ನೋಡುವಷ್ಟು ತಾಳ್ಮೆ ಇಲ್ಲ. ನಾನು ಬೇರೆ ಕ್ರೀಡೆಗಳಿಗಿಂತ ಹಾರ್ಸ್​ ರೈಡಿಂಗ್ ಹೆಚ್ಚು ಇಷ್ಟಪಡುತ್ತೇನೆ, ಆದರೂ ನನಗೆ ಸಚಿನ್ ತೆಂಡುಲ್ಕರ್ ಮೆಚ್ಚಿನ ಕ್ರಿಕೆಟಿಗ ಎಂದು ಹೇಳಿದರು.

'ಮದರ್ಸ್ ಡೇ' ಬಗ್ಗೆ ಮಾತನಾಡಿದ ದರ್ಶನ್​​​ ಇದೊಂದು ದಿನ ಅಮ್ಮಂದಿರಿಗೆ ವಿಶ್ ಮಾಡಿದರೆ ಸಾಲದು. ಪ್ರತಿ ದಿನವೂ ಅವರ ದಿನವೇ. ನಮ್ಮನ್ನು ಹೆತ್ತು, ಸಲಹಿ ಇಷ್ಟು ದೊಡ್ಡವರನ್ನಾಗಿ ಮಾಡಿದ್ದಾರೆ ಎಂದು ಹೇಳಿದರು. ಅಲ್ಲದೆ ಆಟಗಾರರಿಗೆ ದಯವಿಟ್ಟು ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳದೆ ಆಟವಾಡಿ ಎಂದು ಕಾಲೆಳೆದರು.

Intro:ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕರಾದ ರಾಜೇಂದ್ರ ಸಿಂಗ್ ಬಾಬು ಅವರು ಕಳೆದ ಏಳು ತಿಳಗಳಿಂದ ಮನೆ ಬಾಡಿಗೆ ಕೊಟ್ಟಿಲ್ಲ.ಅಲ್ಲದೆ ಬಾಡಿಗೆ ಕೇಳಿದಕ್ಕೆ ಅವಾಚ್ಯ ಶಬ್ದಗಳಿಂದ ನನ್ನು ನಿಂದಿಸಿದ್ದಾರೆ ಎಂದು ಅರೋಪಿಸಿ ಮನೆಯ ಮಾಲೀಕರಾದ ಪ್ರಸನ್ನ ಅವರು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.

Body:ಕಳೆದ ನಾಲ್ಕು ವರ್ಷಗಳಿಂದ ರಾಜೇಂದ್ರ ಸಿಂಗ್ ಬಾಬು ಅವರು ಪ್ರಸನ್ನ ಅವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ಇದ್ದು ಇತ್ತೀಚಿನ ಕೆಲವು ತಿಂಗಳುಗಳಿಂದ ಅನವಶ್ಯಕವಾಗಿ ನಮ್ಮ ಮೇಲೆ ರಾಜೇಂದ್ರ ಸಿಂಗ್ ಬಾಬು ಹಾಗೂ ಅವರ ಮಗಳು ಜಗಳ ಮಾಡಿದ್ದಾರೆ.ಸದ್ಯ ಇವರು ಮನೆ ಖಾಲಿ ಮಾಡಿಸುವಂತೆ ನಾನು ಈಗಾಗಲೇ ಕೋರ್ಟ್ ಮೇಟ್ಟಿಲೇರಿದ್ದೇನೆ ಎಂದು ಮನೆಯ ಮಾಲೀಕರಾದ ಪ್ರಸನ್ನ ಅವರು ಈಟಿವಿ ಭಾರತ್ ಗೆ ಪ್ರಕರಣ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಸತೀಶ ಎಂಬಿ.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.