ಚಾಲೆಂಜ್ ಸ್ಟಾರ್ ದರ್ಶನ್ ಪ್ರಾಣಿಪ್ರಿಯ ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ಸ್ವಲ್ಪ ಬಿಡುವು ದೊರೆತರೆ ಸಾಕು ಮೈಸೂರಿನಲ್ಲಿರುವ ತಮ್ಮ ಫಾರ್ಮ್ಹೌಸ್ ಸೇರಿ, ಕುದುರೆ ಸವಾರಿ ಮಾಡಿ, ತಮ್ಮ ಮುದ್ದಿನ ಪ್ರಾಣಿಗಳನ್ನು ನೋಡಿಕೊಂಡು ಎಂಜಾಯ್ ಮಾಡುತ್ತಾರೆ.
ಫೆಬ್ರವರಿ 16 ದರ್ಶನ್ ಹುಟ್ಟುಹಬ್ಬ. ದಚ್ಚು ಬರ್ತಡೇಗೆ ಇನ್ನೂ 22 ದಿನಗಳಿರುವಾಗಲೇ ಅಭಿಮಾನಿಯೊಬ್ಬ ತನ್ನ ಮೆಚ್ಚಿನ ನಟನಿಗೆ ವಿಶೇಷ ಗಿಫ್ಟ್ ಒಂದನ್ನು ನೀಡಿದ್ದಾರೆ. ಕುದುರೆ ಸವಾರಿ ಎಂದರೆ ಕೂಡಾ ದರ್ಶನ್ಗೆ ವಿಶೇಷ ಕ್ರೇಜ್. ಆದ್ದರಿಂದ ದರ್ಶನ್ ಅಭಿಮಾನಿ ಹಾರ್ಸ್ ರೈಡಿಂಗ್ ಹೆಲ್ಮೆಟ್, ಜಾಕೆಟ್ ಹಾಗೂ ಸ್ಟಿಕ್ ಹಾಗೂ ಹಾರ್ಸ್ ರೈಡಿಂಗ್ಗೆ ಬೇಕಾದ ಸಾಧನಗಳನ್ನು ದರ್ಶನ್ಗೆ ವಿಶೇಷ ಉಡುಗೊರೆಯನ್ನಾಗಿ ನೀಡಿದ್ದಾರೆ. ಅಭಿಮಾನಿಯ ವಿಶೇಷ ಉಡುಗೊರೆಗೆ ದರ್ಶನ್ ಕೂಡಾ ಖುಷಿಯಾಗಿದ್ದಾರೆ. ಇನ್ನು ದರ್ಶನ್ ಹುಟ್ಟುಹಬ್ಬ ಬಂತೆಂದರೆ ಸಾಕು ಅಭಿಮಾನಿಗಳು ವಿಶೇಷ ಕೇಕ್ , ಗಿಡಗಳು ಹಾಗೂ ಇನ್ನಿತರ ಉಡುಗೊರೆಗಳನ್ನು ತಂದು ನೀಡುವುದು ವಿಶೇಷ. ಆದರೆ ಕಳೆದ ವರ್ಷದಿಂದ ದರ್ಶನ್ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಬರ್ತಡೇಗೆ ಹಣ ಖರ್ಚು ಮಾಡುವ ಬದಲು ಆ ಹಣದಿಂದ ಅಕ್ಕಿ, ಬೇಳೆ, ಉಪಯುಕ್ತ ಸಾಮಗ್ರಿಗಳನ್ನು ತಂದು ನೀಡಿದರೆ ಅದನ್ನು ಅನಾಥಾಶ್ರಮಗಳಿಗೆ ನೀಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡೋಣ ಎಂದು ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.