ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರು ಆಗಾಗ ಬೈಕ್ ರೈಡಿಂಗ್ ಹಾಗೂ ಸೈಕ್ಲಿಂಗ್ ಹೋಗುವುದು ಕಾಮನ್ ಆಗಿದೆ. ಕೆಲವು ದಿನಗಳ ಹಿಂದಷ್ಟೇ ಚಾಲೆಂಜಿಂಗ್ ಸ್ಟಾರ್ ತಮ್ಮ ಸ್ನೇಹಿತರೊಂದಿಗೆ ಮಡಿಕೇರಿ, ಕುಶಾಲನಗರ ಹಾಗೂ ಇನ್ನಿತರ ಸ್ಥಳಗಳಿಗೆ ಬೈಕ್ ರೈಡ್ ಹೋಗಿ ಎಂಜಾಯ್ ಮಾಡಿದ್ದರು. ಇದೀಗ ದರ್ಶನ್ ಮತ್ತೆ ಅದೇ ಟೀಮ್ ಜೊತೆ ಟ್ರಿಪ್ ಹೊರಟಿದ್ದಾರೆ.
ಇದನ್ನೂ ಓದಿ: ನೆಟ್ಫ್ಲಿಕ್ಸ್ನೊಂದಿಗೆ ಸಂಜಯ್ ಲೀಲಾ ಬನ್ಸಾಲಿ ಒಪ್ಪಂದ
ನಿನ್ನೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿಕ್ಕಣ್ಣ ಅವರ ಹೊಸ ಮೇಕೆ ಫಾರ್ಮ್ಗೆ ಭೇಟಿ ನೀಡಿ ಬಂದಿದ್ದರು. ಗೆಳೆಯನಿಗೆ ಮೇಕೆ ಸಾಗಣೆ ಹಾಗೂ ಇನ್ನಿತರ ವಿಚಾರದ ಬಗ್ಗೆ ದರ್ಶನ್ ಟಿಪ್ಸ್ ನೀಡಿ ಬಂದಿದ್ದರು. ಈಗ ಮತ್ತೊಮ್ಮೆ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್, ನಿರ್ಮಾಪಕ ಉಮಾಪತಿ, ಪನ್ನಗಾಭರಣ ಸೇರಿದಂತೆ ಇನ್ನಿತರ ಸ್ನೇಹಿತರ ಜೊತೆ ಸೇರಿ ಬೈಕ್ ರೈಡ್ ಹೊರಟಿದ್ದಾರೆ. ಆದರೆ ಈ ಬಾರಿ ಅವರು ಬಂಡಿಪುರದ ಕಡೆ ಸವಾರಿ ಹೊರಟಿದ್ದಾರೆ. ಬಂಡಿಪುರ ಹಾಗೂ ಸುಂದರ ತಾಣಗಳಿಗೆ ಸುಮಾರು 4 ದಿನಗಳ ಕಾಲ ದರ್ಶನ್ ಹಾಗೂ ಸ್ನೇಹಿತರು ಹೊರಟಿದ್ದಾರೆ. ಇತ್ತೀಚೆಗಷ್ಟೇ ವೀರಮದಕರಿ ಸಿನಿಮಾ ಚಿತ್ರೀಕರಣ ಮುಗಿಸಿರುವ ದರ್ಶನ್, ಈ ಟ್ರಿಪ್ ಮೂಲಕ ತಮಗೆ ಇಷ್ಟವಾದ ಬಂಡಿಪುರಕ್ಕೆ ಹೋಗಿದ್ದಾರೆ. ಬೆಂಗಳೂರಿನ ತಮ್ಮ ರಾಜರಾಜೇಶ್ವರಿ ನಗರದ ಮನೆ ಮುಂದೆ ನೀಲಿ ಜೀನ್ಸ್ ಹಾಗೂ ನೀಲಿ ಟಿ ಷರ್ಟ್ ಧರಿಸಿ ದರ್ಶನ್ ಟೀಂ ಪೋಸ್ ನೀಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.