ETV Bharat / sitara

ಬೈಕ್​​​ನಲ್ಲಿ ಫಾಲೋ ಮಾಡುತ್ತಾ ಬಂದ ಅಭಿಮಾನಿಗೆ ಬುದ್ಧಿ ಹೇಳಿದ ಸಾರಥಿ - Darshan went trip in Bike

ಕೊಡಗು ಪ್ರವಾಸದಲ್ಲಿರುವ ದರ್ಶನ್ ಬೈಕ್ ರೈಡ್ ಮಾಡುವ ವೇಳೆ ಅವರನ್ನು ಮತ್ತೊಂದು ಬೈಕ್​​​​ನಲ್ಲಿ ಹಿಂಬಾಲಿಸಿಕೊಂಡು ಬಂದ ಅಭಿಮಾನಿ, ವಿಡಿಯೋ ಮಾಡುತ್ತಿದ್ದರು. ಇದನ್ನು ಕಂಡು ದರ್ಶನ್ ವಿಡಿಯೋ ಮಾಡಬೇಡಿ ಎಂದು ಬುದ್ಧಿ ಹೇಳಿದ್ದಾರೆ.

Darshan Kodagu trip
ದರ್ಶನ್
author img

By

Published : Nov 21, 2020, 1:34 PM IST

ಸ್ಯಾಂಡಲ್​ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಳೆದ ಮೂರು ದಿನಗಳಿಂದ ತಮ್ಮ ಸ್ನೇಹಿತರೊಂದಿಗೆ ಮಡಿಕೇರಿ, ಹಾಸನ, ಸಕಲೇಶಪುರ ಹಾಗೂ ಇನ್ನಿತರ ಸ್ಥಳಗಳಿಗೆ ಜಾಲಿ ಬೈಕ್ ರೈಡ್ ಮಾಡುತ್ತಿದ್ದಾರೆ. ಲಾಕ್​​​​​​ಡೌನ್ ದಿನಗಳಲ್ಲಿ ಸುಮಾರು 7 ತಿಂಗಳ ಕಾಲ ತಮ್ಮ ಮನೆಯಲ್ಲೇ ಉಳಿದಿದ್ದ ಡಿ ಬಾಸ್, ಈ ಬೈಕ್ ರೈಡ್ ಎಂಜಾಯ್ ಮಾಡುತ್ತಿದ್ದಾರೆ.

ಅಭಿಮಾನಿಗೆ ಬುದ್ಧಿ ಹೇಳಿದ ದರ್ಶನ್

ನಿರ್ಮಾಪಕ ಉಮಾಪತಿ, ಪನ್ನಗಾಭರಣ, ಪ್ರಣಾಮ್ ದೇವರಾಜ್, ಚಿಕ್ಕಣ್ಣ, ಧರ್ಮ ಕೀರ್ತಿ ರಾಜ್ ಹಾಗೂ ಇನ್ನಿತರರು ದರ್ಶನ್​​​ಗೆ ಜೊತೆಯಾಗಿದ್ದಾರೆ. ದರ್ಶನ್ ಕೊಡಗು ಕಡೆ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿದ ಅಭಿಮಾನಿಗಳು ಅವರನ್ನು ನೋಡುವ ಆಸೆಯಿಂದ ಹಿಂಬಾಲಿಸಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಮಡಿಕೇರಿ ರಸ್ತೆಯಲ್ಲಿ ಅಭಿಮಾನಿಯೊಬ್ಬರು ದರ್ಶನ್ ಅವರನ್ನು ಬೈಕ್​​​ನಲ್ಲಿ ಹಿಂಬಾಲಿಸಿಕೊಂಡು ಅವರ ವಿಡಿಯೋ ಮಾಡುತ್ತಿದ್ದರು. ಇದನ್ನು ಗಮನಿಸಿದ ದರ್ಶನ್, "ಬೈಕ್ ರೈಡ್ ಮಾಡಿಕೊಂಡು ವಿಡಿಯೋ ಮಾಡಬೇಡಿ, ಸುಮ್ಮನೆ ಹೋಗಿ ಎಂದು ಬುದ್ಧಿ ಹೇಳಿದ್ದಾರೆ. ದರ್ಶನ್ ಮಾತನ್ನು ಕೇಳಿ ಅಭಿಮಾನಿ ಓಕೆ ಆಫ್ ಮಾಡ್ತೀನಿ ಅಣ್ಣಾ" ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ಮಡಿಕೇರಿಯಲ್ಲಿರುವ ದರ್ಶನ್ ಅಲ್ಲೇ ರೆಸಾರ್ಟ್​ನಲ್ಲಿ ತಂಗಿದ್ದು ಅಲ್ಲಿಂದ ಮೈಸೂರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

Darshan Kodagu trip
ದರ್ಶನ್ ಹಾಗೂ ಸ್ನೇಹಿತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.