ಜನವರಿ 9 ರಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ದರ್ಬಾರ್' ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗ್ತಿದೆ. ತಮಿಳು, ಹಿಂದಿ ಹಾಗೂ ತೆಲುಗಿಗೆ ಡಬ್ಬಿಂಗ್ ಆಗಿ ರಿಲೀಸ್ ಆಗ್ತಿರುವ ದರ್ಬಾರ್ ಚಿತ್ರವನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡದೆ ಕನ್ನಡವನ್ನು ನಿರ್ಲಕ್ಷ ಮಾಡಿದ್ದಾರೆ ಎಂದು ಕನ್ನಡಪರ ಸಂಘಟನೆಯಿಂದ ವಿರೋಧ ವ್ಯಕ್ತವಾಗಿದ್ದು ಕರ್ನಾಟಕದಲ್ಲಿ ರಿಲೀಸ್ಗೆ ತಡೆಹಿಡಿಯಲಾಗಿದೆ. ಹಾಗೂ ಚಿತ್ರ ಬಿಡುಗಡೆಯನ್ನು ವಿರೋಧಿಸಿ ಫಿಲ್ಮ್ಚೇಂಬರ್ಗೆ ಮನವಿ ಮಾಡಲಾಗಿದೆ.
ಬೆಂಗಳೂರಿನ ನರ್ತಕಿ ಚಿತ್ರ ಮಂದಿರದಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಆದ್ರೆ ನರ್ತಕಿ ಚಿತ್ರ ಮಂದಿರದಲ್ಲಿ ದರ್ಬಾರ್ ಚಿತ್ರ ಬಿಡುಗಡೆಯಾದರೆ ಕನ್ನಡ ಸಿನಿಮಾಗಳಿಗೆ ಮಾನ್ಯತೆ ಕಡಿಮೆಯಾಗುತ್ತೆ. ಒಂದು ವೇಳೆ ನರ್ತಕಿ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡಬೇಕು ಎನಿಸಿದರೆ ಕನ್ನಡದಲ್ಲಿಯೇ ಡಬ್ ಮಾಡಿ ರಿಲೀಸ್ ಮಾಡಬೇಕಿತ್ತು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಈಗಾಗಲೇ ನರ್ತಕಿಯಲ್ಲಿ ದರ್ಬಾರ್ ಸಿನಿಮಾ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು ಜನವರಿ 9 ರಂದು ರಿಲೀಸ್ ಆಗಲಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕನ್ನಡ ರಣಧೀರ ಪಡೆ ಅಧ್ಯಕ್ಷ ಹರೀಶ್, ದರ್ಬಾರ್ ಚಿತ್ರವನ್ನು ಈಗ ಡಬ್ ಮಾಡಿ ಬಿಡುಗಡೆ ಮಾಡಲು ಆಗದೇ ಇದ್ದರೇ ಪ್ರದರ್ಶನ ರದ್ದು ಮಾಡಲಿ. ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.