ETV Bharat / sitara

ನೈಜ, ವಾಸ್ತವಿಕ ಹಾಸ್ಯಕಥೆಯ 'ದಾಮಾಯಣ' ಟೀಸರ್ ಇಂದು ಬಿಡುಗಡೆ - ಕೀರ್ತನ್ ಬಾಳಿಗ ಸಂಗೀತ ನಿರ್ದೇಶನ

ಶ್ರೀಮುಖ ನಿರ್ದೇಶನದ ಸಿನಿಮಾ 'ದಾಮಾಯಣ' ಟೀಸರ್ ಇಂದು ಸಂಜೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್​​​​​​​​​​​​​​ ನೋಡಿದವರ ತಲೆಯಲ್ಲಿ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಸಂದೇಹಕ್ಕೆಲ್ಲಾ ಇಂದು ಸಂಜೆಯೇ ಉತ್ತರ ಸಿಗಲಿದೆ.

'ದಾಮಾಯಣ'
author img

By

Published : Sep 11, 2019, 2:31 PM IST

ನೈಜ ಹಾಗೂ ವಾಸ್ತವಿಕ ಹಾಸ್ಯಕಥೆ ಹೊಂದಿರುವ ‘ದಾಮಾಯಣ’ ಸಿನಿಮಾ ಶೀಘ್ರದಲ್ಲೇ ತೆರೆ ಕಾಣಲಿದೆ. ಅದಕ್ಕೂ ಮುನ್ನ ಇಂದು ಓಣಂ ಹಬ್ಬದ ಪ್ರಯುಕ್ತ ಚಿತ್ರತಂಡ ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದೆ. ಇಂದು ಸಂಜೆ ಒಂದೂವರೆ ನಿಮಿಷ ಅವಧಿಯ ಟೀಸರ್ ಬಿಡುಗಡೆಯಾಗಲಿದೆ.

damayana
'ದಾಮಾಯಣ'

ಇದು ಮಂಗಳೂರು ಸೊಗಡಿನ ಸಿನಿಮಾ. ಇಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಈ ವರ್ಷ ಏಪ್ರಿಲ್​​ನಲ್ಲಿ ಚಿತ್ರ ಸೆಟ್ಟೇರಿತ್ತು. ಅಂದಿನಿಂದ ಸಿನಿಮಾ ಬಗ್ಗೆ ಚಿತ್ರರಸಿಕರು ಕುತೂಹಲ ಇಟ್ಟುಕೊಂಡಿದ್ದರು. ಈಗಾಗಲೇ ಚಿತ್ರದ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ. ಸಿನಿಮಾ ಪ್ರಮೋಷನ್​​​ಗಾಗಿ ಚಿತ್ರತಂಡ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪೋಸ್ಟರ್​​​​ ನೋಡಿ ಉದ್ಭವವಾಗುವ ಕೆಲವೊಂದು ಪ್ರಶ್ನೆಗಳಿಗೆ ಈ ಟೀಸರ್ ಉತ್ತರ ನೀಡಲಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್​ ಚಾನೆಲ್​​​​ ಸಂಜೆ ಈ ಚಿತ್ರದ ಟೀಸರನ್ನು ಲೋಕಾರ್ಪಣೆ ಮಾಡಲಿದೆ. 'ಸೆವೆಂಟಿ ಸೆವೆನ್ ಸ್ಟುಡಿಯೋ ಬ್ಯಾನರ್' ಅಡಿ ಈ ಸಿನಿಮಾವನ್ನು ಶ್ರೀಮುಖ ನಿರ್ದೇಶಿಸಿದ್ದಾರೆ. ರಾಘವೇಂದ್ರ ಕುಡ್ಲ ಚಿತ್ರಕ್ಕೆ ಹಣ ಹೂಡಿದ್ದಾರೆ. ಮಂಗಳೂರು ಹಾಗೂ ಸುತ್ತಮುತ್ತ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಸಿದ್ದು ಜಿ.ಎಸ್.​​​ ಛಾಯಾಗ್ರಹಣವಿದ್ದರೆ ಕಾರ್ತಿಕ್​​ ಕೆ.ಎಂ. ಸಂಕಲನವಿದೆ. ಐದು ಹಾಡುಗಳಿಗೆ ಕೀರ್ತನ್ ಬಾಳಿಗ ಸಂಗೀತ ನಿರ್ದೇಶನ ಇದೆ.

ಓಣಂ ಹಬ್ಬಕ್ಕೆ ದಾಮಾಯಣ ಟೀಸರ್ ಬಿಡುಗಡೆ

ಕನ್ನಡ ಸಿನಿರಸಿಕರಿಗೆ ತಯಾರು ಮಾಡಿರುವ ಒಂದು ನೈಜ ಹಾಗೂ ವಾಸ್ತವಿಕ ಹಾಸ್ಯ ಸಿನಿಮಾ ದಾಮಾಯಣ ಸಧ್ಯದಲ್ಲಿ ತೆರೆಗೆ ಅಪ್ಪಳಿಸಲಿದೆ. ಅದಕ್ಕೂ ಮುಂಚೆ ಓಣಂ ಹಬ್ಬದ ಪ್ರಯುಕ್ತ ಚಿತ್ರದ ಟೀಸರ್ ಬಿಡುಗಡೆ ಇಂದು – ಸೆಪ್ಟೆಂಬರ್ 11 ರಂದು ಬಿಡುಗಡೆ ಮಾಡಿಕೊಳ್ಳುತ್ತಿದೆ. ಈ ಟೀಸರ್ ಅವದಿ ಒಂದೂವರೆ ನಿಮಿಷ.

ಮಂಗಳೂರು ಸೊಗಡಿನಲ್ಲಿ ಚಿತ್ರ ತಯಾರಾಗಿದೆ. ಇಲ್ಲಿ ಹಾಸ್ಯಕ್ಕೆ ಹೆಚ್ಚು ಒಟ್ಟು ಕೊಡಲಾಗಿದೆ. ಏಪ್ರಿಲ್ 2019 ರಿಂದ ಕುತೂಹಲ ಇಟ್ಟುಕೊಂಡ ಸಿನಿಮಾ ದಾಮಾಯಣ ಪೋಸ್ಟರ್ ಬಿಡುಗಡೆ ಸಹ ಸದ್ದು ಮಾಡಿತ್ತು. ಈ ಟೀಸರ್ ಬಿಡುಗಡೆ ಇಂದ ಚಿತ್ರದ ಬಗ್ಗೆ ಹೆಚ್ಚು ಅರಿವು ಮೂಡಿಸಲು ತಂಡ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ. ಪೋಸ್ಟರ್ ಅಲ್ಲಿ ಉದ್ಭವ ಆಗುವ ಕೆಲವು ಪ್ರಶ್ನೆಗಳಿಗೆ ಈ ಟೀಸರ್ ಉತ್ತರ ನೀಡಲಿದೆ. ಲಹರಿ ಮ್ಯೂಜಿಕ್ ಯು ಟ್ಯೂಬ್ ಚಾನಲ್ ಅಲ್ಲಿ ಆರು ಘಂಟೆಗೆ ಈ ಡಾಮಯಣ ಟೀಸರ್ ಲೋಕಾರ್ಪಣೆ ಆಗಲಿದೆ.

ಶ್ರೀ ಮುಖ ನಿರ್ದೇಶನದ ಈ ಚಿತ್ರ ಸೆವೆಂಟೀ ಸೆವೆನ್ ಸ್ಟುಡಿಯೋ ನಿರ್ಮಾಣದ ಚಿತ್ರ. ರಾಘವೇಂದ್ರ ಕುಡ್ಲ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಮೂರ್ಖನೊಬ್ಬ ಬಯಕೆ ಹಾಗೂ ವಾಸ್ತವದ ಸುತ್ತ ಕಂಡುಬರುವ ದೃಶ್ಯಗಳನ್ನು ಮಂಗಳೂರಿನ ಸುತ್ತ ಮುತ್ತಲೇ ಚಿತ್ರೀಕರಣ ಮಾಡಲಾಗಿದೆ. ಸಿದ್ದು ಜಿ ಎಸ್ ಹಾಗೂ ಕಾರ್ತಿಕ್ ಕೆ ಎಂ ಚಿತ್ರದ ಛಾಯಾಗ್ರಾಹಕರು ಹಾಗೂ ಸಂಕಲನಕಾರರು. ಐದು ಹಾಡುಗಳು ಕೀರ್ತನ್ ಬಾಳಿಗ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದೆ.  

ETV Bharat Logo

Copyright © 2025 Ushodaya Enterprises Pvt. Ltd., All Rights Reserved.