ದೇಶಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮೂರನೇ ಅಲೆಯ ಭಯದಲ್ಲಿ ಇಡೀ ದೇಶವೇ ಇದೆ. ಈಗಾಗಲೇ ಕೊರೊನಾ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಹೆಚ್ಚುತ್ತಿರುವುದರಿಂದ ಸಹಜವಾಗಿಯೇ ಆತಂಕ ಮೂಡಿದೆ. ಇದರ ಎಫೆಕ್ಟ್ ಎಲ್ಲಾ ಕ್ಷೇತ್ರದ ಮೇಲೆ ಆಗುತ್ತಿದೆ. ಸದ್ಯಕ್ಕೆ ಚಿತ್ರರಂಗದ ಮೇಲೆ ಕೊರೊನಾ ಎಂಬ ಕರಿ ನೆರಳು ಅವರಿಸಿದೆ ಎಂದು ಪತ್ರಕರ್ತ ಹಾಗು ನಿರ್ದೇಶಕ ಅಗ್ನಿ ಶ್ರೀಧರ್ ಹೇಳಿದರು.
ತಾವು ಕಥೆ ಬರೆಯುತ್ತಿರುವ 'ಕ್ರೀಂ' ಎಂಬ ಸಿನಿಮಾ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಚಿತ್ರಮಂದಿರಗಳಲ್ಲಿ 50 ಪರ್ಸೆಂಟ್ ಪ್ರೇಕ್ಷಕರಿಗೆ ಅನುಮತಿ ನೀಡಿದೆ. ಇದು ಸಿನಿಮಾ ನಿರ್ಮಾಪಕರಿಗೆ ನಷ್ಟ ಆಗ್ತಾ ಇದೆ. ಆದರೆ, ರಾಜಕಾರಣಿಗಳು ಕೊರೊನಾ ಹೆಸರಲ್ಲಿ ಸಾಮಾನ್ಯ ಜನರ ಬದುಕನ್ನು ಕಿತ್ತುಕೊಳ್ಳುತ್ತಿದ್ದಾರೆ. ಕೋವಿಡ್ ಅನ್ನೋದು ಒಂದು ಮೆಡಿಕಲ್ ಮಾಫಿಯಾ ಎಂದು ಆರೋಪಿಸಿದರು.
ಕೊರೊನಾ ಇದೆ ಮತ್ತು ಇಲ್ಲ ಎನ್ನುವ ಬಗ್ಗೆ ದೊಡ್ಡ ಚರ್ಚೆ ಆಗುತ್ತಿದೆ. ಇದು ಹಣ ಮಾಡಿಕೊಳ್ಳೋಕೆ ನಡೆಯುತ್ತಿರುವ ದಂಧೆ. ಈ ಬಗ್ಗೆ ಮೊದಲಿನಿಂದಲೂ ಹಲವರು ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ ಎಂದ ಅವರು, ನಾನು ಇದುವರೆಗೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ನಮ್ಮ ಕುಟುಂಬದಲ್ಲಿ ನನ್ನ ಮಗ, ನನ್ನ ಮಗಳು ಯಾರೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ಅವರ ಎದುರಿಗೂ ನಾನು ಇದನ್ನೇ ಹೇಳಿದ್ದೇನೆ. ರಾಜಕಾರಣಿಗಳು ತಳ ವರ್ಗದ ಜನರನ್ನು ಬದುಕಿರುವಾಗಲೇ ಸಾಯಿಸಿದ್ದಾರೆ ಅಂತಾ ಅಗ್ನಿ ಶ್ರೀಧರ್ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ನಟಿ ಅತ್ಯಾಚಾರ ಪ್ರಕರಣ: ಮಲಯಾಳಂ ಸ್ಟಾರ್ ನಟ ದಿಲೀಪ್ ಮನೆ, ಕಚೇರಿ ಮೇಲೆ ಕ್ರೈಂ ಬ್ರಾಂಚ್ ದಾಳಿ
ನನಗೆ ಗೊತ್ತಿದೆ ಶೇ. 60 ವೈದ್ಯರು ಈ ಲಸಿಕೆ ಪಡೆದಿಲ್ಲ. ಇದು ಫ್ಯಾಕ್ಟ್. ಯಾರೂ ಕೋವಿಡ್ನಿಂದ ಸತ್ತಿಲ್ಲ. ಸತ್ತ ವ್ಯಕ್ತಿಯಲ್ಲಿ ನೂರಾರು ವೈರಸ್ ಇದೆ. ಇದನ್ನು ಮಾತ್ರ ಹೈಲೈಟ್ ಮಾಡಲಾಗಿದೆ ಅಂತಾ ಆರೋಪಿಸಿದರು.