ETV Bharat / sitara

ಸಂಗೀತ ಮಾಂತ್ರಿಕ ಇಳಯರಾಜ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ದಿನಗಣನೆ - ತಾಜ್​ ವೆಸ್ಟ್​​ ಎಂಡ್​​​

ಇಳಯರಾಜ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಖ್ಯಾತ ತಾರೆಗಳು ಆಗಮಿಸುವ ಸಾಧ್ಯತೆ ಇದೆ. ಅಕ್ಟೋಬರ್​ 19 ರ ಸಂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಬ್ಯುಸ್ನೆಸ್ ಪಾರ್ಕಿನಲ್ಲಿ ಕಾರ್ಯಕ್ರಮ ಜರುಗಲಿದೆ.

ಸಂಗೀತ ಮಾಂತ್ರಿಕ
author img

By

Published : Oct 3, 2019, 1:49 PM IST

ಅಕ್ಟೋಬರ್​ 19 ಶನಿವಾರ ಸಂಜೆ ಖ್ಯಾತ ಸಂಗೀತ ನಿರ್ದೇಶಕ, ಸಂಗೀತ ಮಾಂತ್ರಿಕ ಇಳಯರಾಜ ಸಂಗೀತ ರಸಸಂಜೆ ಬೆಂಗಳೂರಿನಲ್ಲಿ ಜರುಗಲಿದೆ. ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದ ಬಹುತೇಕ ಸಿನಿಮಾ ಹಾಡುಗಳಿಗೆ ತಮ್ಮ ಸಂಗೀತದ ಮೂಲಕ ಜೀವ ತುಂಬಿರುವ ಇಳಯರಾಜ ಎವರ್​​​​ಗ್ರೀನ್ ಸಂಗೀತ ನಿರ್ದೇಶಕ ಎಂಬುತು ಸತ್ಯ.

ilayaraja
ಸಂಗೀತ ಮಾಂತ್ರಿಕ ಇಳಯರಾಜ

ಈ ಸಂಗೀತ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ತಾಜ್​ ವೆಸ್ಟ್​​ ಎಂಡ್​​​ ಹೋಟೆಲ್​​​ನಲ್ಲಿ ಇಳಯರಾಜ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸುಮಾರು 1000 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿರುವ ದಿಗ್ಗಜ ಇಳಯರಾಜ ಜೊತೆ ನಾದಬ್ರಹ್ಮ ಹಂಸಲೇಖ ಕೂಡಾ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಅಕ್ಟೋಬರ್​ 19 ರ ಸಂಜೆ ವಿಮಾನ ನಿಲ್ದಾಣದ ಬಳಿ ಇರುವ ಬ್ಯುಸ್ನೆಸ್ ಪಾರ್ಕಿನಲ್ಲಿ ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಇಳಯರಾಜ ನೇತೃತ್ವದ 150 ವಾದ್ಯಗಾರರು ವೇದಿಕೆ ಏರಲಿದ್ದಾರೆ. ಇವರ ಜೊತೆ ಡಾ. ಎಸ್​​​.ಪಿ. ಬಾಲಸುಬ್ರಹ್ಮಣ್ಯಂ, ಮನು, ಚಿತ್ರ ಅಂತಹ ಮಹಾನ್ ಗಾಯಕರು ಸುಮಾರು 3 ಗಂಟೆಗಳ ಕಾಲ ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಟಿಕೆಟ್​ ಬೆಲೆ ಕೂಡಾ ದುಬಾರಿಯಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಹಾಡುಗಳನ್ನು ಗಾಯಕರು ಹಾಡಲಿದ್ದಾರೆ. ಹಾಗೆ ದಕ್ಷಿಣ ಭಾರತದ ಬಹುತೇಕ ಸ್ಟಾರ್​​​ಗಳು ಆ ದಿನ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದೆ.

ಇಳಯರಾಜ ಸಂಗೀತ ಸಂಜೆ  ಅಕ್ಟೋಬರ್ 19 ರಂದು

ಇಂದು ಮಧ್ಯಾನ್ಹ ಮ್ಯೂಜಿಕ್ ಮೇಸ್ಟ್ರೊ ಇಳಯರಾಜ ಕೆಂಪೆ ಗೌಡ ಅಂತರ ರಾಷ್ಟ್ರ ವಿಮಾನ ನಿಲ್ಧಾನ ಬಳಿ ಇರುವ ತಾಜ್ ವೆಸ್ಟ್ ಎಂಡ್ ಅಲ್ಲಿ ಪತ್ರಿಕಾ ಘೋಷ್ಟಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 1000 ಸಿನಿಮಾಗಳಿಗೆ ಸಂಗೀತ ನೀಡಿರುವ ದಿಗ್ಗಜ ಇಳಯರಾಜ ಜೊತೆ ಇಂದು ನಾದ ಬ್ರಹ್ಮ ಹಂಸಲೇಖ ಸಹ ಮಾಧ್ಯಮ ಗೋಷ್ಠಿಯಲ್ಲಿ ಜೊತೆಯಾಗಲಿದ್ದಾರೆ.

ಈ ಪತ್ರಿಕಾ ಘೋಷ್ಟಿಯ ಮೂಲ ಉದ್ದೇಶ ಈಸೈ ಸೆಲೆಬ್ರೇಟ್ ಈಸೈ ಸಂಗೀತ ಸಂಜೆಯ ಕುರಿತಾಗಿ. ಬೆಂಗಳೂರಿನ ಕೆಂಪೆ ಗೌಡ ಅಂತರ ರಾಷ್ಟ್ರ ವಿಮಾನ ನಿಲ್ಧಾನ ಬಳಿ ಇರುವ ಬಿಸಿನೆಸ್ ಪಾರ್ಕ್ ಅಲ್ಲಿ ಆರು ಕೋಟಿ ವೆಚ್ಚದಲ್ಲಿ ಲೈವ್ ಸಂಗೀತ ಸಂಜೆಯಲ್ಲಿ ಇಳಯರಾಜ ಅವರ ನೇತೃತ್ವದಲ್ಲಿ 150 ವಾಧ್ಯಗಾರರು ವೇದಿಕೆ ಏರಲಿದ್ದಾರೆ. ಇವರ ಜೊತೆ ಡಾ ಎಸ್ ಪಿ ಬಾಲಸುಬ್ರಮಣ್ಯಂ, ಮನು, ಚಿತ್ರ ಅಂತಹ ಘಟಾನು ಘಟಿಗಳು ಅಕ್ಟೋಬರ್ 19 ಶನಿವಾರ ಸಂಜೆ 6 ಘಂಟೆ ಇಂದ ಮೂರು ತಾಸು ಸಂಗೀತ ರಸದೌತಣ ನೀಡಲಿದ್ದಾರೆ.

ಇಳಯರಾಜ ಸಂಗೀತ ಸಂಜೆ ಮೆರ್ಕ್ಯುರಿ ಸಂಸ್ಥೆ ಜೊತೆಗೆ ನೆರವೇರುತ್ತದೆ. ಆರು ಕೋಟಿ ವೆಚ್ಚದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ದುಬಾರಿ ಟಿಕೆಟ್ ಬೆಲೆ ಸಹ ನಿಗದಿ ಪಡಿಸಲಾಗಿದೆ.

ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ಸಿನಿಮಾ ಹಾಡುಗಳು ಅಂದು ರಂಜಿಸಲಿದೆ. ಕನ್ನಡ, ತಮಿಳು, ತೆಲುಗು ಭಾಷೆಗಳ ಸೂಪರ್ ಸ್ಟಾರ್ ಅಂದು ಆಗಮಿಸುವ ಸಾಧ್ಯತೆ ಇದೆ.  

ETV Bharat Logo

Copyright © 2025 Ushodaya Enterprises Pvt. Ltd., All Rights Reserved.