ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ಗೆ ಇದೀಗ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಬಲಿಯಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸೋಂಕಿಗೊಳಗಾಗಿದ್ದ ಜನ್ಯ ಸಹೋದರ ಕಿರಣ್ ಇಂದು ಸಾವನ್ನಪ್ಪಿದ್ದಾರೆ.
49 ವರ್ಷದ ಕಿರಣ್ ಸಾವನ್ನಪ್ಪಿರುವ ಸುದ್ದಿಯನ್ನ ಅರ್ಜುನ್ ಜನ್ಯ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಕಳೆದ 15 ದಿನಗಳ ಹಿಂದೆ ಅರ್ಜುನ್ ಜನ್ಯಗೂ ಕೋವಿಡ್ ಸೋಂಕು ತಗುಲಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಅವರು ಗುಣಮುಖರಾಗಿದ್ದರು.
ಇದನ್ನೂ ಓದಿ: ಕೊರೊನಾಗೆ ಪ್ರಾಣ ಬಿಟ್ಟ ಯುವ ನಿರ್ದೇಶಕ ನವೀನ್!
ಇನ್ನು ಮಹಾಮಾರಿ ಕೊರೊನಾ ವೈರಸ್ಗೆ ಈಗಾಗಲೇ ಕೋಟಿ ನಿರ್ಮಾಪಕ ರಾಮು ಹಾಗೂ ಸ್ಯಾಂಡಲ್ವುಡ್ನ ಯುವ ನಿರ್ದೇಶಕ ನವೀನ್ ಬಲಿಯಾಗಿದ್ದಾರೆ.