ETV Bharat / sitara

ಮನದಾಳ; ಪುನೀತ್​ ರಾಜ್​ಕುಮಾರ್​ ಒಡನಾಟದ ಬಗ್ಗೆ ರಂಗಾಯಣ ರಘು ಹೇಳಿದ್ದು

ಪವರ್​ ಸ್ಟಾರ್​ ಪುನೀತ್ ರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವರತ್ನ ಸಿನಿಮಾದಲ್ಲಿ ಹಿರಿಯ ಹಾಸ್ಯ ನಟ ರಂಗಾಯಣ ರಘು ನಟಿಸಿದ್ದು, ಅವರೊಂದಿಗಿನ ಒಡನಾಟದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡರು. ಈ ವೇಳೆ ಪುನೀತ್​ ಬಳಿ ಮನವಿವೊಂದನ್ನು ಮಾಡಿಕೊಂಡರು.

ರಂಗಾಯಣ ರಘು
Comedy actor Rangayana Raghu
author img

By

Published : Mar 21, 2021, 2:20 PM IST

ಬೆಂಗಳೂರು: ಹಿರಿಯ ಹಾಸ್ಯ ನಟ ರಂಗಾಯಣ ರಘು ಅವರು ಪುನೀತ್ ರಾಜಕುಮಾರ್ ಜೊತೆ ಹಲವು ಚಿತ್ರಗಳಲ್ಲಿ ನಟಿಸಿದ್ದು, ಏ. 1ಕ್ಕೆ ಬಿಡುಗಡೆಯಾಗಲಿರುವ ಯುವರತ್ನ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ನಿನ್ನೆ ನಡೆದ ಯುವರತ್ನ ಟ್ರೈಲರ್ ಲಾಂಚ್​ ಕಾರ್ಯಕ್ರಮದಲ್ಲಿ ಪುನೀತ್​ ಅವರೊಂದಿಗಿನ ಒಟನಾಡವನ್ನು ಹಂಚಿಕೊಂಡರು. ​​

ಈ ಕುರಿತು ಮಾತನಾಡಿರುವ ಅವರು, ಪುನೀತ್ ಜೊತೆಗೆ ನಟಿಸುವ ಒಂದಿಷ್ಟು ಅವಕಾಶಗಳು ಮಿಸ್ ಆಗಿತ್ತು. ಮಿಲನಾ ಚಿತ್ರದಲ್ಲಿ ನಟಿಸಿದೆನಾದರೂ ಅವರೊಂದಿಗೆ ನಟಿಸುವ ಅವಕಾಶ ಸಿಗಲಿಲ್ಲ. ಒಂದೇ ಒಂದು ದೃಶ್ಯ ಇಲ್ಲವಾ ಎಂದು ನಿರ್ದೇಶಕ ಪ್ರಕಾಶ್ ಅವರನ್ನು ಕೇಳಿದ್ದೆ, ಅವರು ಇಲ್ಲ ಎಂದಿದ್ದರು. ಕೊನೆಗೆ ಹಾಡಿನ ಒಂದು ದೃಶ್ಯದಲ್ಲಿ ಅವರ ಕೆನ್ನೆ ಮುಟ್ಟಿ ಓಡಿಹೋಗಿದ್ದೆ. ಆ ನಂತರ ಹಲವು ಚಿತ್ರಗಳಲ್ಲಿ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿತು ಎಂದರು.

ಸಿನಿಮಾದಲ್ಲಿ ಅವರಿದ್ದರೆ ಒಂದು ಪ್ರಭಾವಳಿ ಸೃಷ್ಟಿಯಾಗುತ್ತದೆ. ಆದರೂ ನಂದಲ್ಲ ಎಂದು ಸರಳವಾಗಿ ಇದ್ದು ಬಿಡುತ್ತಾರೆ. ಅವರಿಗೆ ಇದು ಅಣ್ಣಾವ್ರಿಂದ ಬಂದ ಬಳುವಳಿಯಾಗಿದೆ. ಅದೇ ಕಾರಣಕ್ಕೆ ಅವರಿಗೆ ಎಲ್ಲರೂ ಪ್ರೀತಿ, ಗೌರವ ತೋರಿಸುತ್ತಾರೆ. ಸಾಮಾನ್ಯವಾಗಿ ಉತ್ತರ ಕರ್ನಾಟಕದ ಮಂದಿ ಎಲ್ಲರಿಗೂ ಪ್ರೀತಿಯಿಂದ ಆ ಮಗ, ಈ ಮಗ ಎಂದು ಹೇಳುತ್ತಾರೆ. ಆದರೆ ಪುನೀತ್‍ಗೆ ಮಾತ್ರ ಅಪ್ಪು ಬಂದಾರೆ ನೋಡ್ಲೆ ಎಂದು ಗೌರವದಿಂದ ಸಂಬೋಧಿಸುತ್ತಾರೆ. ಪುನೀತ್ ಸಹ ಅಷ್ಟೇ. ಎಷ್ಟು ಜನ ಇದ್ದರೂ ಬಹಳ ಚೆನ್ನಾಗಿ ಹ್ಯಾಂಡಲ್ ಮಾಡುತ್ತಾರೆ. ಪ್ರೀತಿ, ಗೌರವದಿಂದ ನಡೆಸಿಕೊಳ್ಳುತ್ತಾರೆ ಎಂದರು.

ಭಕ್ತ ಅಂಬರೀಶ ಮತ್ತು ನೃಪತುಂಗ ಚಿತ್ರಗಳನ್ನು ಮಾಡುವಂತೆ ರಘು ಪುನೀತ್‍ಗೆ ಮನವಿ ಮಾಡಿದರು. ಇವೆರಡು ಸಿನಿಮಾಗಳನ್ನು ಬಿಟ್ಟು ಅಣ್ಣಾವ್ರು ಎಲ್ಲಾ ತರಹದ ಸಿನಿಮಾಗಳನ್ನು ಮಾಡಿದ್ದಾರೆ. ಈ ಚಿತ್ರಗಳು ಪ್ರಾರಂಭವಾದರೂ ಯಾಕೋ ಮುಂದುವರೆಯಲಿಲ್ಲ. ಆ ಚಿತ್ರಗಳನ್ನು ಅವರ ಮಕ್ಕಳು ಮಾಡಲಿ ಎನ್ನುವುದು ನನ್ನಾಸೆ. ಭಕ್ತ ಅಂಬರೀಶ ಚಿತ್ರದಲ್ಲಿ ಶಿವಣ್ಣ ನಟಿಸಲಿ, ನೃಪತುಂಗ ಚಿತ್ರವನ್ನು ಪುನೀತ್ ಮಾಡಲಿ ಎಂಬುದು ನನ್ನ ಸಣ್ಣ ಮನವಿ. ಈ ಮೂಲಕ ಅಣ್ಣಾವ್ರ ಆಸೆಯನ್ನು ನೀವು ಪೂರೈಸಲು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.