ETV Bharat / sitara

ಮಾಸ್ ಲುಕ್​​​ನಲ್ಲಿ ಕಾಲೇಜ್​ ಕುಮಾರ್ ಹೀರೋ​​​​​​​​​​​​.. ವಿಕ್ಕಿ ವರುಣ್ ಹೊಸ ಚಿತ್ರದ ಫಸ್ಟ್​​​​ಲುಕ್ ರಿಲೀಸ್​​​​...! - Kalapathar first look released

ಸಂತೋಷ್ ರೆವಾ ಅಲಿಯಾಸ್ ವಿಕ್ಕಿ ವರುಣ್ ಕಾಲೇಜ್ ಕುಮಾರ್ ಚಿತ್ರದ ನಂತರ ಕೆಲವು ದಿನಗಳ ಕಾಲ ಬ್ರೇಕ್ ಪಡೆದಿದ್ದರು. ಬಹಳ ದಿನಗಳ ನಂತರ ಈಗ ಅವರು 'ಕಾಲಾಪತ್ಥರ್' ಎಂಬ ಚಿತ್ರದ ಮೂಲಕ ವಾಪಸಾಗುತ್ತಿದ್ದಾರೆ. ಸಿನಿಮಾ ಪೋಸ್ಟರ್​​​ ಬಿಡುಗಡೆಯಾಗಿದ್ದು ವಿಕ್ಕಿ ವರುಣ್ ಮಾಸ್ ಲುಕ್​​​ನಲ್ಲಿ ಕಾಣಿಸಿಕೊಂಡಿದ್ದಾರೆ.

kalapthar movie
ವಿಕ್ಕಿ ವರುಣ್​​​​​​​​​​​​
author img

By

Published : Jan 18, 2021, 3:17 PM IST

Updated : Jan 18, 2021, 3:27 PM IST

ಕೆಂಡ ಸಂಪಿಗೆ,ಕಾಲೇಜ್‌ ಕುಮಾರ್‌ ಚಿತ್ರಗಳ ಮೂಲಕ ಸ್ಯಾಂಡಲ್​​ವುಡ್​​​​​​​​​​ನಲ್ಲಿ ಭರವಸೆಯ ಹೀರೋ ಎಂದು ಕರೆಸಿಕೊಂಡಿರುವ ನಟ ವಿಕ್ಕಿ ವರುಣ್. ಕಾಲೇಜ್ ಕುಮಾರ್ ಸಕ್ಸಸ್ ಬಳಿಕ ವಿಕ್ಕಿ ವರುಣ್ ಏನು ಮಾಡುತ್ತಿದ್ದಾರೆ, ಅವರು ಏಕೆ ಹೊಸ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸಿನಿಪ್ರಿಯರು ಪ್ರಶ್ನಿಸುತ್ತಿದ್ದರು. ಇದೀಗ ಈ ಪ್ರಶ್ನೆಗೆ ಉತ್ತರ ದೊರೆತಿದೆ. ವಿಕ್ಕಿ ವರುಣ್ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

College kumar hero
'ಕಾಲಾಪತ್ಥರ್'ನಲ್ಲಿ ವಿಕ್ಕಿ ವರುಣ್ ಮಾಸ್ ಲುಕ್

ಹಿಂದಿನ ಸಿನಿಮಾಗಳಲ್ಲಿ ಲವ್ ಸ್ಟೋರಿಗಳಲ್ಲಿ ಕಾಣಿಸಿಕೊಂಡಿದ್ದ ವಿಕ್ಕಿ ವರುಣ್ ಈಗ ಮಾಸ್ ಲುಕ್​​​ನೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 'ಕಾಲಾಪತ್ಥರ್'​​​ ಎಂಬ ಈ ಚಿತ್ರದಲ್ಲಿ ವಿಕ್ಕಿ ವರುಣ್ ಮಾಸ್​​​​ಲುಕ್​​​​ನಲ್ಲಿ ದರ್ಶನ ನೀಡಿದ್ದಾರೆ. ಇಂದು ಪೋಸ್ಟರ್ ಅನಾವರಣ ಆಗಿದೆ. ನಿರ್ದೇಶಕ ದುನಿಯಾ ಸೂರಿ ಗರಡಿಯಲ್ಲಿ ವರ್ಷಗಟ್ಟಲೆ ಪಳಗಿರುವ ವಿಕ್ಕಿ ವರುಣ್‌, ಕೆಂಡ ಸಂಪಿಗೆ ಹಾಗೂ ಕಾಲೇಜ್ ಕುಮಾರ್ ಸಿನಿಮಾಗಳಲ್ಲಿ ಪ್ರೇಕ್ಷಕರ ಹೃದಯ ಕದಿಯುವಲ್ಲಿ ಯಶಸ್ವಿ ಆಗಿದ್ವು. ಇಷ್ಟು ದಿನ ತಾಳ್ಮೆಯಿಂದ ಒಳ್ಳೆ ಕಥೆಗಾಗಿ ಕಾಯುತ್ತಿದ್ದ ಅವರು ಈಗ 'ಕಾಲಾಪತ್ಥರ್' ಮೂಲಕ ವಾಪಸಾಗುತ್ತಿದ್ದಾರೆ. ಚೇತನ್ ಎಂಬುವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಾಯಕಿ ಹಾಗೂ ಇತರ ಕಲಾವಿದರ ಆಯ್ಕೆ ನಡೆಯುತ್ತಿದೆ.

College kumar hero
ದುನಿಯಾ ಸೂರಿ, ವಿಕ್ಕಿ ವರುಣ್

'ರಾಮಾ ರಾಮಾ ರೇ,ಒಂದಲ್ಲಾಎರಡಲ್ಲಾ ಸಿನಿಮಾ ಖ್ಯಾತಿಯ ಸತ್ಯಪ್ರಕಾಶ್‌ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸದ್ಯ ರಿವೀಲ್ ಆಗಿರುವ 'ಕಾಲಾ ಪತ್ಥರ್' ಪೋಸ್ಟರ್ ನೋಡುತ್ತಿದ್ದರೆ ಇದೊಂದು ಗ್ಯಾಂಗ್​​ಸ್ಟರ್​​​​​​​​​​​​​​ ಸಿನಿಮಾ‌ ಇರಬಹುದು ಎನ್ನಲಾಗುತ್ತಿದೆ.ಈಗಾಗಲೇ ಬಾಲಿವುಡ್​​​​​​​​​​​​​​​​​​​​​​​ನಲ್ಲಿ ಅಮಿತಾಬ್​​​​​ ಬಚ್ಚನ್‌, ಶಶಿ ಕಪೂರ್‌ 'ಕಾಲಾ ಪತ್ಥರ್‌' ಎಂಬ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಿದ್ರು. ಈಗ ಸ್ಯಾಂಡಲ್​​ವುಡ್​​​​​​​​ನಲ್ಲಿ ವಿಕ್ಕಿ ವರುಣ್ ಈ ಪವರ್ ಫುಲ್ ಟೈಟಲ್ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ. ಸದ್ಯ ಪೋಸ್ಟರ್ ಮೂಲಕ ಕುತೂಹಲ ಹುಟ್ಟಿಸಿರುವ 'ಕಾಲಾ ಪತ್ಥರ್' ಸಿನಿಮಾದ ಕಥೆ ಏನು ಎಂಬುದು ಶೀಘ್ರದಲ್ಲೇ ತಿಳಿಯಲಿದೆ.

Last Updated : Jan 18, 2021, 3:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.