ETV Bharat / sitara

ಛಾಯಾಗ್ರಾಹಕನಾಗಿ ಎರಡು ದಶಕ ಪೂರೈಸಿರುವ ಸತ್ಯ ಹೆಗ್ಡೆಯಿಂದ ಹೊಸ ನಿರ್ಧಾರ

ಒಂದು ಸಿನಿಮಾದಲ್ಲಿ ನಾಯಕ, ನಾಯಕಿ, ನಿರ್ದೇಶಕ, ನಿರ್ಮಾಪಕ ಹೀಗೆ ಪ್ರತಿ ಪಾತ್ರಕ್ಕೂ ತನ್ನದೇ ಆದ ಮಹತ್ವ ಇರುತ್ತದೆ. ಸಿನಿಮಾ ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಎಲ್ಲರ ಶ್ರಮ ಅಗತ್ಯ. ಅದರಲ್ಲಿ ಛಾಯಾಗ್ರಾಹಕ ಕೂಡಾ ಪ್ರಮುಖ ಪಾತ್ರ ವಹಿಸುತ್ತಾರೆ. ಛಾಯಾಗ್ರಾಹಕ ಸತ್ಯ ಹೆಗ್ಡೆ ಈಗ ಸ್ಯಾಂಡಲ್​ವುಡ್​ನಲ್ಲಿ 25ನೇ ವರ್ಷ ಪೂರೈಸುತ್ತಿದ್ದಾರೆ.

ಸತ್ಯ ಹೆಗ್ಡೆ
author img

By

Published : May 21, 2019, 8:24 PM IST

ಸತ್ಯ ಹೆಗ್ಡೆ, ನಮ್ಮ ಸಿನಿಮಾಗೆ ಇಂತಹ ಛಾಯಾಗ್ರಾಹಕ ಬೇಕು ಎಂದು ಸ್ಯಾಂಡಲ್​​ವುಡ್​​ನ ಸಾಕಷ್ಟು ನಿರ್ದೇಶಕರು ಹೇಳುವ ಹೆಸರು. ದುನಿಯಾ ಸಿನಿಮಾದಿಂದ ಸತ್ಯ ಹೆಗಡೆ ಅವರ ದುನಿಯಾವೇ ಬದಲಾಯಿತು. ಇನ್ನೊಂದು ವರ್ಷ ಕಳೆದರೆ ಸತ್ಯ ಸ್ಯಾಂಡಲ್​​​ವುಡ್​​​ಗೆ ಬಂದು 25 ವರ್ಷಗಳು ತುಂಬುತ್ತದೆ. ಅವರ ಛಾಯಾಗ್ರಹಣದ ಸೊಗಸು ಸಿನಿಮಾಗಳಿಗೆ ಕಲಶ ಇಟ್ಟಂತೆ. ಯಾರೊಂದಿಗೂ ಹೆಚ್ಚು ಮಾತನಾಡದ ಸತ್ಯ 25ನೇ ವರ್ಷದ ವೃತ್ತಿ ಜೀವನದಲ್ಲಿ ತಮ್ಮ ರೀತಿ ನೀತಿಗಳನ್ನು ಬದಲಾಯಿಸಿಕೊಳ್ಳಬೇಕು ಅಂತ ನಿರ್ಧರಿಸಿದ್ದಾರೆ.

satya hegde
ಪುನೀತ್ ರಾಜ್​​ಕುಮಾರ್ ಜೊತೆ ಸತ್ಯ ಹೆಗ್ಡೆ

ಇದುವರೆಗೂ ನಾನು ನನ್ನ ಸಂತೋಷಕ್ಕಾಗಿ ದುಡಿಯುತ್ತಿದ್ದೆ. ಇನ್ನುಮುಂದೆ ಜೀವನ ನಿರ್ವಹಣೆಗೆ, ಇಬ್ಬರು ಮಕ್ಕಳು ಹಾಗೂ ಪತ್ನಿಗಾಗಿ ಹಣ ಕೂಡಿಡುವ ಕೆಲಸ ಮಾಡಬೇಕು ಎಂದು ತೀರ್ಮಾನಿಸಿದ್ದಾರೆ ಸತ್ಯ. ಅಭಿಷೇಕ್ ಅಂಬರೀಶ್ ನಟಿಸಿರುವ ‘ಅಮರ್’ ಸಿನಿಮಾದ ಪತ್ರಿಕಾಗೋಷ್ಟಿಯಲ್ಲಿ ಸತ್ಯ ಹೆಗ್ಡೆ ಇದನ್ನು ಹೇಳಿಕೊಂಡಿದ್ದಾರೆ. ‘ಬಟರ್ ಫ್ಲೈ’ ಸಿನಿಮಾಗೆ ಎರಡು ಭಾಷೆಗಳಲ್ಲಿ ಇವರೇ ಛಾಯಾಗ್ರಹಣ ಮಾಡಿರುವುದು. ರಮೇಶ್ ಅರವಿಂದ್ ಅವರ ಮುಂದಿನ ಸಿನಿಮಾ ನಿರ್ದೇಶನದ ಬಗ್ಗೆ ಕೂಡಾ ತಯಾರಿ ನಡೆಯುತ್ತಿದೆ. ಆ ಸಿನಿಮಾಕ್ಕೂ ಕೂಡ ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಇರಲಿದೆ.

satya hegde
ದರ್ಶನ್ ಸಿನಿಮಾದಲ್ಲಿ ಸತ್ಯ ಹೆಗ್ಡೆ

1995 ರಲ್ಲಿ ಸತ್ಯ ಹೆಗ್ಡೆ ಛಾಯಾಗ್ರಹಣ ತರಬೇತಿ ಮುಗಿಸಿದ್ದರು. ಬಿ.ಸಿ. ಗೌರಿಶಂಕರ್ ಅವರಂತ ದಿಗ್ಗಜರ ಜೊತೆ ಕೂಡಾ ಕೆಲಸ ಮಾಡಿ 2000ರಲ್ಲಿ ಸಹಾಯಕ ಛಾಯಾಗ್ರಾಹಕನಾಗಿ 'ಸ್ಪರ್ಶ' ಸಿನಿಮಾದಿಂದ ಸ್ಯಾಂಡಲ್​​​ವುಡ್​​​ಗೆ ಕಾಲಿಟ್ಟರು. 'ತಾಳಿ ಕಟ್ಟುವ ಶುಭ ವೇಳೆ' ಸಿನಿಮಾದಿಂದ ಸ್ವತಂತ್ರ ಛಾಯಾಗ್ರಾಹಕ ಆದವರು. 2007 ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ‘ದುನಿಯ’ ಚಿತ್ರದಿಂದ ಉನ್ನತ ಮಟ್ಟಕ್ಕೇರಿದ ಸತ್ಯ ಹೆಗ್ಡೆ, ಈ ಪ್ರೀತಿ ಒಂಥರಾ, ಇಂತಿ ನಿನ್ನ ಪ್ರೀತಿಯ, ಅಂಬಾರಿ, ಜಂಗ್ಲಿ, ಮನಸಾರೆ, ಗೋಕುಲ, ಜಾಕಿ, ಸಂಜು ವೆಡ್ಸ್ ಗೀತಾ, ಹುಡುಗರು, ಶಿವ, ಅಣ್ಣಾ ಬಾಂಡ್, ಮೈನಾ, ಗಜಕೇಸರಿ, 6-5=2, ರಾಟೆ, ಆಟಗಾರ, ಕೆಂಡಸಂಪಿಗೆ, ದೊಡ್ಮನೆ ಹುಡುಗ, ಯುಟರ್ನ್, ಮಾಸ್ತಿಗುಡಿ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. 'ಪ್ಯಾರಿಸ್ ಪ್ಯಾರಿಸ್' ತಮಿಳು ಸಿನಿಮಾ ಮೂಲಕ ಇವರ ಖ್ಯಾತಿ ಅಲ್ಲಿಯೂ ಪಸರಿಸಿದೆ.

satya hegde
ಯಶ್​, ಸತ್ಯ ಹೆಗ್ಡೆ

ಸತ್ಯ ಹೆಗ್ಡೆ 25 ನೇ ವರ್ಷಕ್ಕೆ ಹಲವು ನಿರ್ಧಾರಗಳು

ಎಲ್ಲ ನಿರ್ದೇಶಕರುಗಳು ಬೇಕು ಎನ್ನುವ ಛಾಯಾಗ್ರಾಹಕ ಅಂದರೆ ಅವರೇ ಸತ್ಯ ಹೆಗ್ಡೆ. ಧುನಿಯ ಸಿನಿಮಾ ಇಂದ ಅವರ ಧುನಿಯ ದಾರಿ ಬದಲಾಯಿತು ಈ ಕನ್ನಡ ಚಿತ್ರರಂಗದಲ್ಲಿ. ತ್ಯ ಹೆಗ್ಡೆ ಚಿತ್ರ ರಂಗಕ್ಕೆ ಬಂದು 25 ವರ್ಷಗಳಗುತ್ತದೆ 2020ನೇ ವರ್ಷಕ್ಕೆ. ಅವರ ಛಾಯಾಗ್ರಹಣದ ಸೊಗಸು ಚಿತ್ರಗಳಿಗೆ ಕಲಶ ಇಟ್ಟಂತೆ.

ಸದಾ ಸೈಲೆಂಟ್ ಆಗಿ ಯಾರೊಂದಿಗೂ ಹೆಚ್ಚು ಮಾತನಾಡದ ಸತ್ಯ ಹೆಗ್ಡೆ ಒಂದು ಚಿಕ್ಕ ಸಂದರ್ಶನದಲ್ಲಿ ತಮ್ಮ ರೀತಿ ನೀತಿಗಳನ್ನು 25ನೇ ವರ್ಷದ ವೃತ್ತಿ ಜೀವನದಲ್ಲಿ ಬದಲಾಯಿಸಿಕೊಳ್ಳಬೇಕು ಅಂತ ನಿರ್ಧರಿಸಿದ್ದಾರೆ.

ಅದೇನದು ಅಂತೀರಾ? ಸತ್ಯ ಹೆಗ್ಡೆ ನಿರ್ಧಾರ ಅವರ ಜೀವನ ನಿರ್ವಹಣೆಗೆ ಇಬ್ಬರು ಮಕ್ಕಳು ಹಾಗೂ ಹೆಂಡತಿಗೆ ಹಣ ಕೂಡಿಡುವ ಕೆಲಸ ಮಾಡಬೇಕು ಎಂದು ತೀರ್ಮಾನಿಸಿದ್ದಾರೆ. ಇದುವರೆವಿಗೂ ನಾನು ನನ್ನ ಸಂತೋಷಕ್ಕಾಗಿ ದುಡಿಯುತ್ತಾ ಬಂದಿದ್ದೇನೆ. 25ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಸ್ವಲ್ಪ ಆದರೂ ಹಣ ಕೂಡಿಟ್ಟು ಜಾಗರೂಕರಾಗಬೇಕು ಎಂಬುದು ಅವರ ಮನದ ಬಯಕೆ.

ಸತ್ಯ ಹೆಗ್ಡೆ ಅಮರ್ ಪತ್ರಿಕಾ ಘೋಷ್ಟಿ ನಂತರ ಮಾತನಾಡುತ್ತಾ ಹೋದರು. ಅವರ ಬಟ್ಟರ್ ಫ್ಲೈ ಸಿನಿಮಾ ಎರಡು ಭಾಷೆಗಳಲ್ಲಿ ಇವರೇ ಛಾಯಾಗ್ರಹಣ ಮಾಡಿರುವುದು. ರಮೇಶ್ ಅರವಿಂದ್ ಅವರ ಮುಂದಿನ ಸಿನಿಮಾ ನಿರ್ದೇಶನದ ಬಗ್ಗೆ ಸಹ ತಯಾರಿ ನಡೆಯುತ್ತಿದೆ. ಆ ಸಿನಿಮಾಕ್ಕೆ ಸತ್ಯ ಹೆಗ್ಡೆ ಅವರೇ ಛಾಯಾಗ್ರಹಣ ಮಾಡಲಿದ್ದಾರೆ.

1995 ರಲ್ಲಿ ಸತ್ಯ ಹೆಗ್ಡೆ ಛಾಯಾಗ್ರಹಣದ ತರಬೇತಿ ಮುಗಿಸಿದ್ದು. ಬಿ ಸಿ ಗೌರಿಶಂಕರ್ ಅವರಂತ ದಿಗ್ಗಜರ ಜೊತೆ ಸಹಾಯಕರಾಗಿ ಕೆಲಸ ಮಾಡಿ 2000 ರಲ್ಲಿ ಸಹಾಯಕ ಛಾಯಾಗ್ರಾಹಕ ಆಗಿ ಸ್ಪರ್ಶ ಇಂದ ಕನ್ನಡ ಸಿನಿಮಾಕ್ಕೆ ಕಾಲಿಟ್ಟು, ತಾಳಿ ಕಟ್ಟುವ ಶುಭ ವೇಳೆ ಇಂದ ಸಿನಿಮಾ ಸ್ವತಂತ್ರ ಛಾಯಾಗ್ರಾಹಕ ಆದರು.

2007 ಫೆಬ್ರವರಿ ಬಿಡುಗಡೆ ಧುನಿಯ ಇಂದ ಉನ್ನತ ಮಟ್ಟ ಏರಿದ ಸತ್ಯ ಹೆಗ್ಡೆ  ಈ ಪ್ರೀತಿ ಒಂಥರಾ, ಇಂತಿ ನಿನ್ನ ಪ್ರೀತಿಯ, ಅಂಬಾರಿ, ಜಂಗ್ಲಿ, ಮನಸಾರೆ, ಗೋಕುಲ, ಜಾಕಿ, ಸಂಜು ವೆಡ್ಸ್ ಗೀತಾ, ಹುಡುಗರು, ಶಿವ, ಅಣ್ಣಾ ಬಾಂಡ್, ಮೈನಾ, ಗಜಕೇಸರಿ, 6-5=2, ರಾಟೆ, ಆಟಗಾರ, ಕೆಂಡಸಂಪಿಗೆ, ದೊಡ್ಮನೆ ಹುಡ್ಗ, ಯು ಟರ್ನ್, ಮಾಸ್ತಿ ಗುಡಿ ಇವರ ಪ್ರಮುಖ ಸಿನಿಮಗಳು, ಪ್ಯಾರಿಸ್ ಪ್ಯಾರಿಸ್ ತಮಿಳು ಸಿನಿಮಾ ಮೂಲಕ ಇವರ ಖ್ಯಾತಿ ಅಲ್ಲಿಯೂ ಪಸರಿಸಿದೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.