ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯಲ್ಲಿ ನಾಯಕ ಹರ್ಷನ ಅಮ್ಮ ರತ್ನಮಾಲಾ ಅಲಿಯಾಸ್ ಅಮ್ಮಮ್ಮ ಅಗಿ ಅಭಿನಯಿಸುತ್ತಿರುವ ಚಿತ್ಕಲಾ ಬಿರಾದಾರ್ ಕೇವಲ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ನಟನಾ ಛಾಪು ಪಸರಿಸುತ್ತಿದ್ದಾರೆ. ಮನೋಜ್ಞ ನಟನೆಯ ಮೂಲಕ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿರುವ ಅಮ್ಮಮ್ಮ ಸಿನಿ ವೀಕ್ಷಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಹೌದು, ಇಂದು ಬಿಡುಗಡೆಯಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದಲ್ಲಿ ಚಿತ್ಕಲಾ ಬಿರಾದಾರ್ ಕೂಡಾ ಬಣ್ಣ ಹಚ್ಚಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ಚಿತ್ಕಲಾ ಬಿರಾದಾರ್ ಅವರೇ ಇತ್ತೀಚೆಗಷ್ಟೇ ಇನ್ ಸ್ಟಾಗ್ರಾಂ, ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರು.
ಓದಿ: ಕನ್ನಡತಿಯ ಅಮ್ಮಮ್ಮ ಆಗಿ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ ಚಿತ್ಕಲಾ ಬಿರಾದಾರ್
ಯುವರತ್ನ ತಂಡದ ಜೊತೆಗಿನ ಫೋಟೋ ಹಂಚಿಕೊಂಡಿರುವ ಚಿತ್ಕಲಾ ಬಿರಾದಾರ್ ಏಪ್ರಿಲ್ 1ಕ್ಕೆ ತೆರೆಕಾಣಲಿರುವ 'ಯುವರತ್ನ' ಚಿತ್ರದ ಚಿತ್ರೀಕರಣ ಸಮಯದಲ್ಲಿ ಸೆರೆ ಹಿಡಿದ ಕೆಲ ನೆನಪುಗಳು. ನನ್ನದದರಲ್ಲಿ ಒಂದು ಚಿಕ್ಕ ಮಜವಾದ ಪಾತ್ರ. ನೋಡಿ ಆನಂದಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಒಟ್ಟಿನಲ್ಲಿ ಇಷ್ಟು ದಿನ ಅಮ್ಮಮ್ಮನಾಗಿ ಕಿರುತೆರೆಯಲ್ಲಿ ಕಮಾಲ್ ಮಾಡಿದ ಚಿತ್ಕಲಾ ಅವರನ್ನು ಹೊಸ ಪಾತ್ರದ ಮೂಲಕ ಹಿರಿತೆರೆಯಲ್ಲಿ ನೋಡಲು ವೀಕ್ಷಕರು ಕಾತರರಾಗಿದ್ದಾರೆ.