ಕಡಿಮೆ ಅವಧಿಯಲ್ಲೇ ಒಂದಿಷ್ಟು ಸಾಧನೆ ಮಾಡಿ ನೂರಾರು ನೆನಪುಗಳನ್ನು ಬಿಟ್ಟು ಹೋದ ನಟ ಚಿರಂಜೀವಿ ಸರ್ಜಾ. ಚಿರು ನಮ್ಮಿಂದ ಮರೆಯಾದರೂ, ಅವರ ಹಳೆಯ ಫೋಟೋ, ವಿಡಿಯೋ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಕೆಲ ದಿನಗಳ ಹಿಂದೆ ಚಿರು ಪುತ್ರ ಜೂನಿಯರ್ ಚಿರು ಅಪ್ಪನ ಫೋಟೋ ನೋಡಿ ಗುರುತಿಸುವ ವಿಡಿಯೋ ಒಂದು ವೈರಲ್ ಆಗಿತ್ತು.

ಇದೀಗ, ಜೂನಿಯರ್ ಚಿರು ಲ್ಯಾಪ್ ಟಾಪ್ನಲ್ಲಿ ಅಪ್ಪನ ವಿಡಿಯೋ ನೋಡಿ ಖುಷಿಪಡುವ ವಿಡಿಯೋ ಒಂದು ಹರಿದಾಡುತ್ತಿದೆ. ಅಪ್ಪಂದಿರ ದಿನ (Fathers Day) ದಂದು ಚಿರುಪುತ್ರ ಸಿನಿಮಾ ಹಾಡೊಂದರಲ್ಲಿ ತನ್ನ ಅಪ್ಪನನ್ನೇ ದಿಟ್ಟಿಸಿ ನೋಡುವ ದೃಶ್ಯವನ್ನು ಮೇಘನಾರಾಜ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ‘ನನ್ನ ನುಡಿ-ನಗು-ನೆಮ್ಮದಿ ನೀವಾಗಿದ್ರಿ’: ಅಗಲಿದ ಪತಿ ನೆನೆದು ಮಾಲಾಶ್ರೀ ಭಾವುಕ ಪತ್ರ