ಚಿರಂಜೀವಿ ಸರ್ಜಾ ಅಭಿನಯದ 'ರಾಜಮಾರ್ತಾಂಡ' ಚಿತ್ರದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಶುಕ್ರವಾರ ಬೆಳಗ್ಗೆಯೇ ಜ್ಯೂನಿಯರ್ ಚಿರಂಜೀವಿ ಸರ್ಜಾ ಈ ಟ್ರೇಲರ್ ಬಿಡುಗಡೆ ಮಾಡಿದ್ದಾನೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‍ನಲ್ಲಿ 'ರಾಜಾಮಾರ್ತಾಂಡ' ಟ್ರೇಲರ್ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಪೊಗರು' ಪ್ರದರ್ಶನವಾಗುತ್ತಿರುವ ಎಲ್ಲಾ ಚಿತ್ರಮಂದಿರಗಳಲ್ಲೂ ಟ್ರೇಲರ್ ಪ್ರದರ್ಶನವಾಗುತ್ತಿದೆ.
- " class="align-text-top noRightClick twitterSection" data="">
ಇದು ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರ ಎಂಬುದು ಪ್ರಮುಖ ವಿಚಾರವಾದರೆ, ಸಿನಿಮಾದಲ್ಲಿ ಚಿರಂಜೀವಿ ಸರ್ಜಾಗೆ ಧ್ರುವ ಧ್ವನಿ ನೀಡಿದ್ದಾರೆ ಎಂಬುದು ಮತ್ತೊಂದು ವಿಚಾರ. "ಎದುರಾಳಿ ದುಷ್ಟನೇ ಆಗಿರ್ಲಿ, ದ್ರೋಹಿನೇ ಆಗಿರ್ಲಿ, ಶತ್ರು ಸಂಹಾರ ಮಾಡೋಕಿಂತ ಮುಂಚೆ ಒಂದು ಸುವರ್ಣಾವಕಾಶ ಕೊಟ್ಟು ಕರುಣಿಸುವುದೇ ನಮ್ಮ ಹುಟ್ಟುಗುಣ " ಎಂದು ಧ್ರುವ ಸರ್ಜಾ ಡೈಲಾಗ್ ಹೊಡೆದಿದ್ದು, ಈ ಡೈಲಾಗ್‍ಗೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೇಲರ್ನಲ್ಲಿ ಚಿರಂಜೀವಿ ಅವರ ಡೈಲಾಗ್ ಕೂಡಾ ಇದೆ. ಚಿರಂಜೀವಿ ನಿಧನರಾಗುವುದಕ್ಕಿಂತ ಮುನ್ನವೇ ಸ್ವಲ್ಪ ಭಾಗ ಡಬ್ ಮಾಡಿದ್ದರಂತೆ. ಹಾಗೆ ಡಬ್ ಮಾಡಲಾದ ಭಾಗದಿಂದ, ಒಂದು ಸಂಭಾಷಣೆಯನ್ನು ಬಳಸಿಕೊಳ್ಳಲಾಗಿದೆ. "ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಕೊನೆಯವರೆಗೂ ಚಿರಋಣಿ ಆಗಿರ್ತೀನಿ" ಎಂದು ಚಿರು ಹೇಳಿರುವ ಸಂಭಾಷಣೆ ಚಿತ್ರದಲ್ಲಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಜೋರಾದ 'ಪೊಗರು' ಹವಾ..ಒಂದೇ ದಿನ 600 ಪ್ರದರ್ಶನ
'ರಾಜಮಾರ್ತಾಂಡ' ಚಿತ್ರದ ಟ್ರೇಲರ್ಗೆ ಮಾತ್ರ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಇನ್ನು ಚಿತ್ರದಲ್ಲಿನ ಚಿರಂಜೀವಿ ಸರ್ಜಾ ಅವರ ಭಾಗಕ್ಕೆ ಡಬ್ಬಿಂಗ್ ಮಾಡಬೇಕಿದ್ದು, 'ಪೊಗರು' ಬಿಡುಗಡೆಯಾದ ನಂತರ ಡಬ್ಬಿಂಗ್ ಮಾಡುವುದಾಗಿ ಹೇಳಿದ್ದಾರೆ. ಚಿತ್ರದ ಕೆಲಸಗಳೆಲ್ಲಾ ಬಹುತೇಕ ಮುಗಿದಿದ್ದು, ಧ್ರುವ ಡಬ್ಬಿಂಗ್ ಮುಗಿದ ನಂತರ, ಚಿತ್ರವನ್ನು ಮುಂದಿನ ಮೂರು ತಿಂಗಳೊಳಗೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ದೀಪ್ತಿ ಸತಿ ನಟಿಸಿದ್ದು ಇವರೊಂದಿಗೆ ರಮೇಶ್ ಪಂಡಿತ್, ಭಜರಂಗಿ ಲೋಕಿ, ಸಿದ್ಲಿಂಗು ಶ್ರೀಧರ್, ಕಡ್ಡಿಪುಡಿ ಚಂದ್ರು ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರಕ್ಕೆ ರಾಮ್‍ನಾರಾಯಣ್ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ.