ETV Bharat / sitara

ಕಮಲ್ ಹಾಸನ್ 'ಅಹಿಂಸಾ' ಬೋಧನೆಗೆ ಗಾಯಕಿ ಚಿನ್ಮಯಿ ಗರಂ ! - ಗಾಯಕಿ ಚಿನ್ಮಯಿ ಶ್ರೀಪಾದ

ಫುಡ್ ಬ್ಯಾಂಕ್ ಇಂಡಿಯಾ ಎನ್​ಜಿಓ ಇದರ ಸಂಸ್ಥಾಪಕಿ ಮತ್ತು ಮಾಧರ್ ಪಡೈ (ಎಂಎನ್‌ಎಂ ಮಹಿಳಾ ವಿಭಾಗ) ಸದಸ್ಯೆ ಸ್ನೇಹಾ ಮೋಹನ್​ದಾಸ್ ಅವರು ಟ್ವೀಟ್ ಒಂದನ್ನು ಮಾಡಿ, ಅದರಲ್ಲಿ ತಾವು ತಮ್ಮ ಆತ್ಮರಕ್ಷಣೆಯನ್ನು ಹೇಗೆ ಮಾಡಿಕೊಳ್ಳುತ್ತಿರುವೆ ಎಂಬುದರ ಕುರಿತಾಗಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದರು. ಕರಾಟೆಯ ಕೆಲ ಆತ್ಮರಕ್ಷಣಾ ವಿಧಾನಗಳನ್ನು ತಾವು ಕಲಿಯುತ್ತಿರುವ ಬಗೆಗಿನ ವಿಡಿಯೋ ಇದಾಗಿತ್ತು.

chinmayi
ಕಮಲ್ ಹಾಸನ್
author img

By

Published : Jan 4, 2021, 11:20 AM IST

ಚೆನ್ನೈ (ತಮಿಳುನಾಡು): ಕೌಟುಂಬಿಕ ಹಿಂಸೆ ಮತ್ತು ಕಿರುಕುಳದಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಬಗ್ಗೆ ಮಕ್ಕಳ್ ನೀಧಿ ಮಯ್ಯಂ ಅಧ್ಯಕ್ಷ ಕಮಲ್ ಹಾಸನ್ ಅವರ ಟ್ವೀಟ್​ ಅನ್ನು ಗಾಯಕಿ ಚಿನ್ಮಯಿ ಶ್ರೀಪಾದ ಟೀಕಿಸಿದ್ದಾರೆ.

  • Dignity and equipoise are important to your protection and empowerment. With the above qualities, your self-defence can become non-violent. When non-violence meets violence, there is no combat; clearly the criminal is exposed. Your confidence can do more damage than pepper spray https://t.co/0frfUtciWZ

    — Kamal Haasan (@ikamalhaasan) January 2, 2021 " class="align-text-top noRightClick twitterSection" data=" ">

ಫುಡ್ ಬ್ಯಾಂಕ್ ಇಂಡಿಯಾ ಎನ್​ಜಿಓ ಇದರ ಸಂಸ್ಥಾಪಕಿ ಮತ್ತು ಮಾಧರ್ ಪಡೈ (ಎಂಎನ್‌ಎಂ ಮಹಿಳಾ ವಿಭಾಗ) ಸದಸ್ಯೆ ಸ್ನೇಹಾ ಮೋಹನ್​ದಾಸ್ ಅವರು ಟ್ವೀಟ್ ಒಂದನ್ನು ಮಾಡಿ, ಅದರಲ್ಲಿ ತಾವು ತಮ್ಮ ಆತ್ಮರಕ್ಷಣೆಯನ್ನು ಹೇಗೆ ಮಾಡಿಕೊಳ್ಳುತ್ತಿರುವೆ ಎಂಬುದರ ಕುರಿತಾಗಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದರು. ಕರಾಟೆಯ ಕೆಲ ಆತ್ಮರಕ್ಷಣಾ ವಿಧಾನಗಳನ್ನು ತಾವು ಕಲಿಯುತ್ತಿರುವ ಬಗೆಗಿನ ವಿಡಿಯೋ ಇದಾಗಿತ್ತು.

ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಕಮಲ್ ಹಾಸನ್, "ಹಿಂಸೆಯು ಅಹಿಂಸೆಯನ್ನು ಎದುರಾದಾಗ ಅಲ್ಲಿ ಯಾವುದೇ ಸಂಘರ್ಷವಿರುವುದಿಲ್ಲ, ಅಪರಾಧಿಯು ಸಹಜವಾಗಿಯೇ ಬಹಿರಂಗವಾಗುತ್ತಾನೆ. ನಿಮ್ಮ ಆತ್ಮವಿಶ್ವಾಸವು ಪೆಪ್ಪರ್ ಸ್ಪ್ರೇ ಗಿಂತ ಹೆಚ್ಚು ಬಲವಾಗಿ ಕೆಲಸ ಮಾಡುತ್ತದೆ." ಎಂದು ಬರೆದಿದ್ದರು. ಅಂದರೆ ಮಹಿಳೆಯರು ಯಾವುದೇ ಆತ್ಮರಕ್ಷಣೆ ಕಲೆಯ ತರಬೇತಿ ಇಲ್ಲದೇ ಕೇವಲ ಆತ್ಮವಿಶ್ವಾಸದಿಂದಲೇ ತಮ್ಮ ಮೇಲೆ ನಡೆಯಬಹುದಾದ ದೌರ್ಜನ್ಯವನ್ನು ತಡೆಯಬಹುದು ಎಂಬರ್ಥದಲ್ಲಿ ಹೇಳಿದ್ದಾರೆ ಎಂದು ಅರ್ಥೈಸಲಾಗಿತ್ತು.

  • It's sad to see how people can't read in between the lines and misunderstand intelligence. I rather stand and face a criminal with confidence than pepper spray him and run away. The tweet clearly says that there is a DIFFERENCE between confidence and fear. 1/2 https://t.co/OfMR2gDnQ4

    — Sneha Mohandoss (@snehamohandoss) January 3, 2021 " class="align-text-top noRightClick twitterSection" data=" ">

ಈ ಟ್ವೀಟ್‌ ಸರಣಿಗೆ ಪ್ರತಿಕ್ರಿಯಿಸಿದ ಗಾಯಕಿ ಚಿನ್ಮಯಿ ಶ್ರೀಪಾದ, ಆತ್ಮರಕ್ಷಣೆಯ ಕಲೆಗಳನ್ನು ಮಹಿಳೆಯರು ಕಲಿಯುವುದನ್ನು ಕೀಳಾಗಿ ಪರಿಗಣಿಸಿರುವ ಕಮಲ ಹಾಸನ್, ಕೇವಲ ಆತ್ಮವಿಶ್ವಾಸದಿಂದ ದೌರ್ಜನ್ಯಗಳನ್ನು ಎದುರಿಸಬಹುದು ಎಂದು ಅವರು ತಿಳಿದಿದ್ದಾರೆ ಎಂದು ಹೇಳಿದ್ದಾರೆ.

  • Even Considering this is an interview from November 2014 - this ‘manasu sutthama irundha yaarum varamaatanga’ is textbook Victim Blaming 101. https://t.co/PWBlWHzvvB

    — Chinmayi Sripaada (@Chinmayi) January 1, 2021 " class="align-text-top noRightClick twitterSection" data=" ">

ಇನ್ನು ಕಮಲ್​ರ 2014 ರ ಸಂದರ್ಶನವೊಂದರ ವಿಡಿಯೋ ಇರುವ ಟ್ವೀಟ್ ಒಂದನ್ನು ಸಹ ಚಿನ್ಮಯಿ ಕೋಟ್ ಮಾಡಿದ್ದು, "ನಿಮ್ಮ ಮನಸ್ಸು ಸ್ವಚ್ಛವಾಗಿದ್ದರೆ ಯಾರೂ ನಿಮ್ಮ ಹತ್ತಿರ ಬರಲಾರರು" ಎಂದು ಕಮಲ್ ಅದರಲ್ಲಿ ಹೇಳಿದ್ದನ್ನು ಪ್ರಸ್ತಾಪಿಸಿ, ಅವರ ಮಾತು "ಕೇವಲ ಪಠ್ಯಪುಸ್ತಕದ ಬದನೇಕಾಯಿ ಮಾತಷ್ಟೇ" ಎಂದು ಚಿನ್ಮಯಿ ಅಣಕಿಸಿದ್ದಾರೆ.

ಇದನ್ನೂ ಓದಿ: ಮಲೆಯಾಳಿ ಬೆಡಗಿ ಜೊತೆ ಸೆಲ್ಫಿಗೆ ಪೋಸ್​​ ಕೊಟ್ಟ ಡಾಲಿ: ಕಾಶ್ಮೀರದಲ್ಲಿ 'ರತ್ನನ್‌ ಪ್ರಪಂಚ' ಶೂಟಿಂಗ್

ಇನ್ನು ಕಮಲ್​ ಅವರ ಟ್ವೀಟ್‌ಗೆ ಇನ್ನೂ ಸಾಕಷ್ಟು ಟ್ವೀಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಚಿನ್ಮಯಿ ಶ್ರೀಪಾದ ಅವರು 2019 ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಗೀತರಚನೆಕಾರ ವೈರಮುತ್ತು ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.