ಸ್ಯಾಂಡಲ್ವುಡ್ನಲ್ಲಿ ಹೊಸಬರ ವಿಭಿನ್ನ ಕಥೆಗಳು ಹಾಗೂ ಪ್ರಯೋಗಾತ್ಮಕ ಸಿನಿಮಾಗಳು ಸ್ಟಾರ್ ನಟನಿಲ್ಲದೆ ಸಕ್ಸಸ್ ಆಗುತ್ತಿವೆ. ಉದಾಹರಣೆಗೆ ಇತ್ತೀಚೆಗೆ ಬಿಡುಗಡೆಯಾಗಿ 25 ದಿನಗಳನ್ನು ಪೂರೈಸಿದ 'ಕೆಮಿಸ್ಟ್ರಿ ಆಫ್ ಕರಿಯಪ್ಪ'.
![Chemistry of kariyappa 1](https://etvbharatimages.akamaized.net/etvbharat/images/chemistry-of-kariyappa-640_0503newsroom_00104_439.jpg)
ಸದ್ಯಕ್ಕೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಯಾವುದೇ ದೊಡ್ಡ ನಿರೀಕ್ಷೆ ಇಲ್ಲದೆ ಕನ್ನಡ ಸಿನಿಪ್ರಿಯರ ಎದುರು ಬಂದು ದೊಡ್ಡ ಯಶಸ್ಸು ಗಳಿಸಿರುವ ಚಿತ್ರ. ತಬಲಾ ನಾಣಿ, ಕಿರಿಕ್ ಪಾರ್ಟಿ ಖ್ಯಾತಿಯ ಚಂದನ್ ಆಚಾರ್ಯ, ಹೊಸ ಪ್ರತಿಭೆ ಸಂಜನಾ ಆನಂದ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಕನ್ನಡ ಸಿನಿಪ್ರಿಯರ ಮನ ಗೆದ್ದಿದೆ. ಕ್ಲಾಸ್, ಮಾಸ್ ಎರಡೂ ವರ್ಗವನ್ನೂ ಈ ಸಿನಿಮಾ ಸೆಳೆದಿದೆ. ರಿಲೀಸ್ ಆಗಿದ್ದು ಕಡಿಮೆ ಚಿತ್ರಮಂದಿರಗಳಲ್ಲೇ ಆದರೂ ರಿಲೀಸ್ ಆದ ಕಡೆಯಲ್ಲಾ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿದೆ.
ರಾಜ್ಯಾದ್ಯಂತ 25 ದಿನಗಳ ಯಶಸ್ವಿ ಪ್ರದರ್ಶನ ಮುಗಿಸಿ, 50ನೇ ದಿನದತ್ತ ಈ ಚಿತ್ರ ಮುನ್ನುಗುತ್ತಿದೆ. ಎಂ.ಸಿರಿ ಮಂಜುನಾಥ್ ನಿರ್ಮಾಣ, ಕುಮಾರ್ ನಿರ್ದೇಶನವಿರೋ ಈ ಚಿತ್ರ ಈ ವರ್ಷದ ಯಶಸ್ವಿ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಸರಳ ಕಥೆ, ಜಾಣ್ಮೆಯ ಸ್ಕ್ರೀನ್ ಪ್ಲೇ, ರಿಯಾಲಿಟಿಗೆ ತೀರ ಹತ್ತಿರವಿರುವ ಪಿಕ್ಚರೈಜೇಶನ್, ಡೈಲಾಗ್ ಹೀಗೆ ಈ ಸಿನಿಮಾ ಎಲ್ಲಾ ರೀತಿಯಲ್ಲೂ, ಎಲ್ಲಾ ವರ್ಗದವರನ್ನೂ ವಿಶೇಷವಾಗಿ ರಂಜಿಸುತ್ತಿದೆ. ಸದ್ಯದ ಓಟ ನೋಡಿದ್ರೆ ಖಂಡಿತ ಈ ಸಿನಿಮಾ 50 ದಿನಗಳನ್ನು ನಿರಾಯಾಸವಾಗಿ ಮುಟ್ಟುವ ಸೂಚನೆ ಕೊಡುತ್ತಿದೆ.