ಇಂದು ಚಂದನವನ ಫಿಲ್ಮ್ ಕ್ರಿಟಿಕ್ ಪ್ರಶಸ್ತಿ ಸಮಾರಂಭ - chandanavana film critics academy
‘ಚಂದನವನ ಫಿಲ್ಮ್ ಕ್ರಿಟಿಕ್ ಅಕಾಡೆಮಿ ಪ್ರಶಸ್ತಿ ಸಮಾರಂಭ ಇಂದು ಸಂಜೆ 5 ಘಂಟೆಗೆ ಕಲಾವಿದರ ಭವನದಲ್ಲಿ ನಡೆಯುತ್ತಿದೆ.

ಈ ವರ್ಷದ ಮೊದಲ ದೊಡ್ಡ ಸಿನಿಮಾ ಪ್ರಶಸ್ತಿ ಸಮಾರಂಭ ಅಂದರೆ ಸಿನಿಮಾ ಮಾಧ್ಯಮದವರೇ ಸೇರಿಕೊಂಡು ನೀಡುತ್ತಿರುವ ‘ಚಂದನವನ ಫಿಲ್ಮ್ ಕ್ರಿಟಿಕ್ ಅಕಾಡೆಮಿ ಪ್ರಶಸ್ತಿ'. ಈ ಸಮಾರಂಭ ಇಂದು ಸಂಜೆ 5 ಘಂಟೆಗೆ ನಗರದ ಕಲಾವಿದರ ಭವನದಲ್ಲಿ ನಡೆಯುತ್ತಿದೆ. 2019 ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳನ್ನು ವಿಮರ್ಶೆ ಮಾಡಿರುವ ಮಾಧ್ಯಮದವರು ನೀಡುತ್ತಿರುವ ಪ್ರಶಸ್ತಿ ಇದು.
100ಕ್ಕೂ ಹೆಚ್ಚು ಸಿನಿಮಾ ಪತ್ರಕರ್ತರು, ಟಿ ವಿ ಮಾಧ್ಯದವರು, ಛಾಯಾಗ್ರಾಹಕರು, ಅಂತರ್ಜಾಲ ಸಿನಿಮಾ ಮಾಧ್ಯಮದವರು ಸೇರಿಕೊಂಡು ನೀಡುತ್ತಿರುವ ಪ್ರಶಸ್ತಿಯ ಟ್ರೋಫಿಯನ್ನು ನಟ, ನಿರ್ದೇಶಕ ರಮೇಶ್ ಅರವಿಂದ್ ಹಾಗೂ ಮೋಹಕ ತಾರೆ ಹರಿಪ್ರಿಯಾ ಅನಾವರಣ ಮಾಡಿದ್ದರು.
19 ವಿಭಾಗದಲ್ಲಿ 95 ವ್ಯಕ್ತಿಗಳ ನಾಮ ನಿರ್ದೇಶನ (ಒಂದು ಪ್ರಶಸ್ತಿಗೆ ಐದು ನಾಮ ನಿರ್ದೇಶನ) ಮಾಡಲಾಗಿದೆ. ಇಂದಿನ ಸಮಾರಂಭದಲ್ಲೇ ಅಧಿಕೃತವಾಗಿ ಯಾರು ವಿಜೇತರು ಎಂಬುದನ್ನೂ ಪಾರದರ್ಶಕವಾಗಿ ಪ್ರಕಟಣೆ ಮಾಡಲಾಗುವುದು.

ಕನ್ನಡ ಚಿತ್ರರಂಗದ ಕಲಾವಿದರುಗಳು, ತಂತ್ರಜ್ಞರು, ನಿರ್ಮಾಪಕರುಗಳು, ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಾರ್ಮಿಕರ ಒಕ್ಕೂಟದ ಸದಸ್ಯರು ಇಂದು ಸಮಾರಂಭದಲ್ಲಿ ಹಾಜರಿರುತ್ತಾರೆ. ಯಾರು ವಿಜೇತರು ಎಂಬುದು ರಾತ್ರಿ 9 ಘಂಟೆ ಹೊತ್ತಿಗೆ ತಿಳಿಯಲಿದೆ.