ರೀಲ್ ಲೈಫ್ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಒಂದಷ್ಡು ಜೋಡಿಗಳು ರಿಯಲ್ ಲೈಫ್ನಲ್ಲೂ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಭವಾನಿ ಸಿಂಗ್- ಪಂಕಜಾ ಶಿವಣ್ಣ, ಅಮೃತಾ ರಾಮಮೂರ್ತಿ - ರಘು, ದೀಪಿಕಾ- ಆಕರ್ಷ್ ಹೀಗೆ ಕಿರುತೆರೆಯಲ್ಲಿ ರೀಲ್ ಲೈಫ್ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಇವರು ರಿಯಲ್ ಲೈಫ್ನಲ್ಲೂ ಒಂದಾಗಿ ಜೀವನ ಸಾಗಿಸುತ್ತಿದ್ದಾರೆ. ಈ ಸಾಲಿಗೆ ಹೊಸದೊಂದು ಜೋಡಿ ಸೇರ್ಪಡೆಯಾಗಲಿದೆಯೇನೋ ಎಂಬ ಕುತೂಹಲ ವೀಕ್ಷಕರಿಗಿದೆ.
ಅಂದ ಹಾಗೇ ಆ ಜೋಡಿ ಬೇರಾರೂ ಅಲ್ಲ. ಕವಿತಾ ಗೌಡ ಮತ್ತು ಚಂದನ್ ಕುಮಾರ್. ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಂದು ಮತ್ತು ಚಿನ್ನು ಆಗಿ ತೆರೆ ಮೇಲೆ ಕಾಣಿಸಿಕೊಂಡಿರುವ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಬಗ್ಗೆ ಇದೀಗ ಸಾಕಷ್ಟು ಗಾಸಿಪ್ಗಳು ಹರಿದಾಡುತ್ತಿದೆ. ಲಾಕ್ ಡೌನ್ ಸಮಯದಲ್ಲಿ ಇವರಿಬ್ಬರೂ ವಿಡಿಯೋ ಕಾಲ್ ಮಾಡಿದ್ದನ್ನು ಸ್ಕ್ರೀನ್ ಶಾಟ್ ತೆಗೆದು ಸ್ವತಃ ಚಂದನ್ ಕುಮಾರ್ ಅವರೇ ಹಂಚಿಕೊಂಡಿದ್ದರು. ಇದರ ಜೊತೆಗೆ ಕವಿತಾ ಬರ್ತ್ ಡೇಗೆ ಚಂದನ್ ಮಧ್ಯರಾತ್ರಿ ಹೋಗಿ ಸರ್ಪ್ರೈಸ್ ವಿಶ್ ಮಾಡಿದ್ದರು.
![chandan kavitha marriage gossip news](https://etvbharatimages.akamaized.net/etvbharat/prod-images/kn-bng-06-chandan-kavitha-video-ka10018_16102020153141_1610f_1602842501_819.jpg)
![chandan kavitha marriage gossip news](https://etvbharatimages.akamaized.net/etvbharat/prod-images/kn-bng-06-chandan-kavitha-video-ka10018_16102020153141_1610f_1602842501_1060.jpg)
ಇದರ ಜೊತೆಗೆ ಈ ಇಬ್ಬರು ತಮ್ಮ ಸ್ನೇಹಿತರ ಜೊತೆಗೂಡಿ ಇತ್ತೀಚೆಗೆ ಟ್ರಿಪ್ ಹೋಗಿದ್ದರು. ಇನ್ನು ಕವಿತಾ ಗೌಡ ಚಂದನ್ರನ್ನು ಬೆಳ್ಳಂಬೆಳಗ್ಗೆ ಏರ್ಪೋರ್ಟ್ಗೆ ಡ್ರಾಪ್ ಮಾಡಿದ ವಿಚಾರವನ್ನು ಕೂಡಾ ಚಂದನ್ ಶೇರ್ ಮಾಡಿದ್ದು 'ಕ್ಯೂಟ್ ಡ್ರೈವರ್ಗೆ ಥ್ಯಾಂಕ್ಸ್' ಎಂದು ಹೇಳಿದ್ದರು. ಮಾತ್ರವಲ್ಲ ಕವಿತಾ ಮತ್ತು ಚಂದನ್ ಅವರು ಜೊತೆಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಕವಿತಾ ಜೊತೆಗೆ ಮೊದಲ ಫೋಟೋಶೂಟ್ ಎಂದು ಹಂಚಿಕೊಂಡಿದ್ದರು.
ಇಷ್ಟೆಲ್ಲ ಆದರೂ ತಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಚಂದನ ಹೇಳಿದ್ದಾರೆ. ಆದರೆ, ಇವರಿಬ್ಬರೂ ನಿಜ ಜೀವನದಲ್ಲಿಯೂ ಜೋಡಿಯಾಗಲಿ ಎಂಬುದೇ ವೀಕ್ಷಕರ ಮಹದಾಸೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಆದಷ್ಟು ಬೇಗ ಬಹಿರಂಗಪಡಿಸಿ, ಜೋಡಿ ಸೂಪರ್ ಅಂತೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ. ಜನರ ಆಸೆ ನಿಜವಾಗುತ್ತದಾ ಎಂಬುದನ್ನ ಕಾದು ನೋಡಬೇಕಾಗಿದೆ.
![chandan kavitha marriage gossip news](https://etvbharatimages.akamaized.net/etvbharat/prod-images/kn-bng-06-chandan-kavitha-video-ka10018_16102020153141_1610f_1602842501_769.jpg)
![chandan kavitha marriage gossip news](https://etvbharatimages.akamaized.net/etvbharat/prod-images/kn-bng-06-chandan-kavitha-video-ka10018_16102020153141_1610f_1602842501_811.jpg)