ETV Bharat / sitara

'ನ್ಯೂರಾನ್' ಆಡಿಯೋ ಬಿಡುಗಡೆ ಮಾಡಿದ ಚಾಲೆಂಜಿಂಗ್ ಸ್ಟಾರ್​​

author img

By

Published : Sep 14, 2019, 3:37 PM IST

ಫ್ರೆಂಡ್ಸ್ ಪ್ರೊಡಕ್ಷನ್ ಬ್ಯಾನರ್ ಅಡಿ ವಿಕಾಸ್ ಪುಷ್ಪಗಿರಿ ನಿರ್ದೇಶಿಸಿರುವ 'ನ್ಯೂರಾನ್' ಚಿತ್ರದ ಆಡಿಯೋವನ್ನು ನಟ ದರ್ಶನ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಸಿನಿಮಾ ಕಥೆಯನ್ನು ಬರೆಯಲಾಗಿದೆ ಎಂದು ನಿರ್ದೇಶಕ ವಿಕಾಸ್ ತಿಳಿಸಿದ್ದಾರೆ.

'ನ್ಯೂರಾನ್' ಆಡಿಯೋ

ಸೈಂಟಿಫಿಕ್ ಟೈಟಲ್, ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ 'ನ್ಯೂರಾನ್' ಸಿನಿಮಾದ ಆಡಿಯೋವನ್ನು ಚಾಲೆಂಜಿಂಗ್​​​​​ ಸ್ಟಾರ್ ದರ್ಶನ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಕಲಾವಿದರ ಸಂಘದಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ದರ್ಶನ್ ಆಗಮಿಸಿದ್ದರು.

'ನ್ಯೂರಾನ್' ಆಡಿಯೋ ಬಿಡುಗಡೆಗೊಳಿಸಿದ ದರ್ಶನ್

'ನ್ಯೂರಾನ್' ಚಿತ್ರದ ಮೇಕಿಂಗ್ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ದರ್ಶನ್​​​ 'ಚಿತ್ರವನ್ನು ಬಹಳ ಶ್ರೀಮಂತಿಕೆಯಿಂದ ಮಾಡಲಾಗಿದೆ. ಇಂತಹ ನಿರ್ಮಾಪಕರನ್ನು ತಂತ್ರಜ್ಞರನ್ನು ದಯವಿಟ್ಟು ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಗುರುಕಿರಣ್ ಈ ಚಿತ್ರಕ್ಕೆ ಒಳ್ಳೆಯ ಟ್ಯೂನ್​​​ಗಳನ್ನು ಮಾಡಿದ್ದಾರೆ. ನಿಮ್ಮ ಟೀಂಗೆ ಒಳ್ಳೆಯದಾಗಲಿ' ಎಂದು ವಿಶ್ ಮಾಡಿದ್ದಾರೆ. ಇನ್ನು ಚಿತ್ರತಂಡ ದರ್ಶನ್​​​ಗೆ ಕುದುರೆ ಹಾಗೂ ಆಂಜನೇಯ ಮೂರ್ತಿಗಳನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು. ಫ್ರೆಂಡ್ಸ್​​​​​​ ಪ್ರೊಡಕ್ಷನ್ ಬ್ಯಾನರ್ ಅಡಿ ವಿನಯ್ ಕುಮಾರ್ ನಿರ್ಮಿಸಿರುವ ಸಿನಿಮಾವನ್ನು ವಿಕಾಸ್ ಪುಷ್ಪಗಿರಿ ನಿರ್ದೇಶಿಸಿದ್ದಾರೆ.

Neuron movie
ದರ್ಶನ್ ಜೊತೆ 'ನ್ಯೂರಾನ್' ಚಿತ್ರತಂಡ

ಚಿತ್ರದಲ್ಲಿ ಯುವ ಎಂಬ ಹೊಸ ನಟ ನಾಯಕನಾಗಿ ನಟಿಸಿದ್ದು ನೇಹಾ ಪಾಟೀಲ್, ವೈಷ್ಣವಿ, ಶಿಲ್ಪಾ ಶೆಟ್ಟಿ ಹಾಗೂ ವರ್ಷ ಎಂಬ ನಾಲ್ವರು ನಾಯಕಿಯರು ನಟಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಸಿನಿಮಾ ಕಥೆಯನ್ನು ಬರೆಯಲಾಗಿದೆ. ಚಿತ್ರದಲ್ಲಿ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಇರುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ. ಇನ್ನು ಸಿನಿಮಾದಲ್ಲಿ ಮೂರು ಹಾಡುಗಳಿದ್ದು, ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಜೈ ಜಗದೀಶ್, ಕಬೀರ್ ಸಿಂಗ್, ಅರವಿಂದ್ ರಾವ್​​​​​​​​, ರಾಕ್​​​​​​​​​​​​​​​​​​​​​​​​​​​​​​​​​ಲೈನ್ ಸುಧಾಕರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ನವೆಂಬರ್​​​​​​​​​​​​​​​​​​​​​​​​​​​​​​​​​​ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್​ ಮಾಡಿದೆ.

Intro:ಸೈಂಟಿಫಿಕ್ ಟೈಟಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ "ನ್ಯೂರಾನ್" ಚಿತ್ರ ಆಡಿಯೋ ವನ್ನು ಚಾಲೇಂಜಿಗ್ ಸ್ಟಾರ್ ದರ್ಶನ್ ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.ಕಲಾವಿದರ ಸಂಘದಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ನ್ಯೂರಾನ್ ಚಿತ್ರದ ಆಡಿಯೋ ಲಾಂಚ್ ಮಾಡಿದ್ರು .ಅಲ್ಲದೆ ನ್ಯೂರಾನ್ ಚಿತ್ರದ ಮೇಕಿಂಗ್ ವಿಡಿಯೋ ನೋಡಿ ನ್ಯೂರಾನ್ ಚಿತ್ರದ ಪ್ರೋಡಕ್ಷನ್ ಹೌಸ್ ಚೆನ್ನಾಗಿದೆ‌, ಸಿನಿಮಾವನ್ನು ರಿಚ್ ಆಗಿ ಮಾಡಿದ್ದರೆ, ಇಂತಹ ನಿರ್ಮಾಪಕರನ್ನು ತಂತ್ರಜ್ಞಾನರು ದಯವಿಟ್ಟು ಕಾಪಾಡಿಕೊಳ್ಳಿ ಎಂದು ಚಿತ್ರತಂಡಕ್ಕೆ ಕಿವಿಮಾತು ಹೇಳಿದ್ರು.ಅಲ್ಲದೆ ಗುರುಕಿರಣ್ ಅವರು ತುಂಭಾ ಚೆನ್ನಾಗಿ ಟ್ಯೂನ್ ಕಂಪೋಸ್ ಮಾಡಿದ್ದಾರೆ. ನಿಮ್ಮ ಟೀಂ ಗೆ ಒಳ್ಳೆದಾಗಲಿ ಎಂದು ಚಿತ್ರತಂಡಕ್ಕೆ ವಿಶ್ ಮಾಡಿದ್ರು.ಇನ್ನು ಚಿತ್ರತಂಡ ಡಿ ಬಾಸ್ ಗೆ ಹಾರ್ಸ್ ಹಾಗೂ ಆಂಜನೇಯನ ಮೂರ್ತಿಗಳ ಕಾಣಿಕೆಯಾಗಿ ನೀಡಿ ಗೌರವಿಸಿದ್ರು.

Body:ಇನ್ನೂ ನ್ಯೂರನ್ ಚಿತ್ರದಲ್ಲಿ ನೀಡಿದ್ದಾರೆ. ಹೊಸ ನಟ ಯುವ ನಾಯಕನಾಗಿ ಅಭಿನಯಿಸಿದ್ದು. ಚಿತ್ರದಲ್ಲಿ ನೇಹಾ ಪಾಟೀಲ್,ವೈಷ್ಣವಿ ಮೆನನ್, ಶಿಲ್ಪಾ ಶೆಟ್ಟಿ ಹಾಗೂ ವರ್ಷ ಎಂಬ
ನಾಲ್ಕು ನಾಯಕಿಯರು ನಟಿಸಿದ್ದಾರೆ. ಇನ್ನೂ ಈ ಚಿತ್ರವನ್ನು ವಿಕಾಶ್ ಪುಷ್ಪಗಿರಿ ನಿರ್ದೇಶನ ಮಾಡಿದ್ದು, ವೆಸ್ಟ್ ಬೆಂಗಾಲ್ ನಲ್ಲಿ ನಡೆದ ಒಂದು ಘಟನೆಯನ್ನು ಆಧರಿಸಿ ಈ ಚಿತ್ರವನ್ನು ಮಾಡಿದ್ದು, ಪಿಎಚ್ ಡಿ ಸಂಶೋಧನೆ ಮಾಡಲು ಹೋದ ವಿದ್ಯಾರ್ಥಿ ಕಾಣೆಯಾಗ್ತಾನೆ ನಂತರ ಚಿತ್ರದಲ್ಲಿ ಏನೆಲ್ಲ ತಿರುವುಗಳು ಬರುತ್ತೆ ಎಂಬುದೆ ಚಿತ್ರದ ರೋಚಕತೆ ಅಲ್ಲದೆ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು ಮಹತ್ವದ ಆಗಿದ್ದು ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಇರುತ್ತೆ ಎಂದು ನಿರ್ದೇಶಕರು ತಿಳಿಸಿದ್ರು.ಇನ್ನೂ ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು ಗುರುಕಿರಣ್ ಸಂಗೀತ ನೀಡಿದ್ದಾರೆ.ಚಿತ್ರದಲ್ಲಿ ಬಹು ದೊಡ್ಡ ತಾರಾಬಳಗವಿದ್ದು,
ಜೈಜಗದೀಶ್, ಕಬ್ಬೀರ್ ಸಿಂಗ್,ಅರವಿಂದ್ ರಾವ್ ,ರಾಕ್ ಲೈನ್ ಸುಧಾಕರ್ ಅಭಿನಯಿಸಿದ್ದು,ಪ್ರೆಂಡ್ಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ವಿನಯ್ ಕುಮಾರ್ ನಿರ್ಮಾಣ ಮಾಡಿದ್ದು,ಸದ್ಯ ಪೊಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿ ಇರುವ ಚಿತ್ರತಂಡ ನವೆಂಬರ್ ನಲ್ಲಿ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.