ETV Bharat / sitara

ಸೋದರಳಿಯನ 'ಟಕ್ಕರ್'​​​​​​ ಸಿನಿಮಾ ಟ್ರೇಲರ್​​​​​​ ನೋಡಿ ಶಭಾಷ್​ ಎಂದ ದುರ್ಯೋಧನ - ಟಕ್ಕರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೋದರಸಂಬಂಧಿ ಮನೋಜ್ ಅಭಿನಯದ 'ಟಕ್ಕರ್​' ಸಿನಿಮಾ ಟ್ರೇಲರ್​ ಹಾಗೂ ಆಡಿಯೋ ಬಿಡುಗಡೆಯಾಗಿದೆ. ಸ್ವತ: ದರ್ಶನ್ ಆಡಿಯೋ, ಟ್ರೇಲರ್ ಬಿಡುಗಡೆಗೊಳಿಸಿದ್ದಾರೆ. ಅಲ್ಲದೆ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

'ಟಕ್ಕರ್'​​​​​​
author img

By

Published : Sep 8, 2019, 2:22 PM IST

ಸ್ಯಾಂಡಲ್​​ವುಡ್​ನಲ್ಲಿ ಸ್ಟಾರ್ ಫ್ಯಾಮಿಲಿಯ ಮಕ್ಕಳು, ಚಿತ್ರರಂಗಕ್ಕೆ ಬರುತ್ತಾರೆ. ಸದ್ಯ ದರ್ಶನ್​ ತೂಗುದೀಪ ಅವರ ಸೋದರಳಿಯ ಮನೋಜ್​ 'ಟಕ್ಕರ್' ಸಿನಿಮಾ ಮೂಲಕ ಈಗಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರವನ್ನು ರಘುಶಾಸ್ತ್ರಿ ನಿರ್ದೇಶಿಸಿದ್ದಾರೆ.

'ಟಕ್ಕರ್'​​​​​​ ಆಡಿಯೋ ಬಿಡುಗಡೆಗೊಳಿಸಿದ ದರ್ಶನ್

ಶನಿವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್​​ 'ಟಕ್ಕರ್' ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆಗೊಳಿಸಿದರು. ಸೋದರಳಿಯನನ್ನು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿರುವ ದಚ್ಚು ಟ್ರೇಲರ್ ನೋಡಿ ಶಭಾಷ್​ ಎಂದಿದ್ದಾರೆ. ಅಲ್ಲದೆ, ಸಿನಿಮಾಗಳ ಬಗ್ಗೆ ಪ್ಯಾಷನ್ ಹೊಂದಿರುವ ನಿರ್ಮಾಪಕರು ಉಳಿಯಬೇಕು ಎಂದರು. ರಘುಶಾಸ್ತ್ರಿ ಇದಕ್ಕೂ ಮುನ್ನ 'ರನ್ ಆ್ಯಂಟೋನಿ' ಚಿತ್ರವನ್ನು ನಿರ್ದೇಶಿಸಿದ್ದರು. ಇದೊಂದು ಕ್ರೈಮ್​, ಥ್ರಿಲ್ಲರ್ ಸಿನಿಮಾ. ಸೋದರಮಾವನ ಸಿನಿಮಾ ನೋಡಿಕೊಂಡು ಬೆಳೆದಿರುವ ಮನೋಜ್ ಪಕ್ಕಾ ಮಾಸ್ ಲುಕ್​​​​​​​​​​​​​​​​​ನಲ್ಲಿ ಕಾಣಿಸಿಕೊಂಡಿದ್ದಾರೆ.

takkar
ರಂಜನಿ, ಮನೋಜ್

ಈ ಚಿತ್ರದಲ್ಲಿ ದರ್ಶನ್ ನಟಿಸಿಲ್ಲವಾದರೂ ದಾಸನ ಛಾಯೆ ಈ ಸಿನಿಮಾದಲ್ಲಿ ಇರಲಿದೆ ಎನ್ನುವುದು ಚಿತ್ರದ ಹೈಲೆಟ್ಸ್. ಪುಟ್ಟ ಗೌರಿ ಖ್ಯಾತಿಯ ರಜನಿ, ಮನೋಜ್​​​​​​​​​​​​​​​​​​​​​​​​​​​​​​​ಗೆ ಜೋಡಿಯಾಗಿ‌ದ್ದು, ಈ ಚಿತ್ರದಲ್ಲಿ ಅವರು ಮೆಡಿಕಲ್ ಸ್ಟೂಡೆಂಟ್ ಪಾತ್ರದಲ್ಲಿ ನಟಿಸಿದ್ದಾರೆ. 'ಭಜರಂಗಿ' ಸಿನಿಮಾ ಖ್ಯಾತಿಯ ಲೋಕಿ ಹಾಲಿವುಡ್ ಶೈಲಿಯ ಖಳನಾಯಕನಾಗಿ ನಟಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡುತ್ತಿರುವ ಟಕ್ಕರ್ ಸಿನಿಮಾಗೆ ವಿಲಿಯಂ ಡೇವಿಡ್ ಕ್ಯಾಮರಾ ವರ್ಕ್ ಇದೆ. 'ಹುಲಿರಾಯ' ಸಿನಿಮಾಗೆ ಬಂಡವಾಳ ಹೂಡಿದ್ದ ನಾಗೇಶ್ ಕೋಗಿಲು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಟಕ್ಕರ್ ಸಿನಿಮಾ, ಸದ್ಯದಲ್ಲೇ ಸೆನ್ಸಾರ್ ಮುಗಿಸಿ ಪ್ರೇಕ್ಷಕರ ಮುಂದೆ ಬರಲಿದೆ.

takkar
'ಟಕ್ಕರ್' ಆಡಿಯೋ ಸಮಾರಂಭದಲ್ಲಿ ದರ್ಶನ್

Intro:ಸೋದರಳಿಯನ ಸಿನಿಮಾ ಟ್ರೈಲರ್ ನೋಡಿ ಶಬ್ಬಾಶ್ ಎಂದ ದುರ್ಯೋಧನ!!

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಫ್ಯಾಮಿಲಿಯ ಮಕ್ಕಳು, ಚಿತ್ರರಂಗಕ್ಕೆ ಬರೋದು ಕಾಮನ್ ಆಗಿದೆ..ಸದ್ಯ ದರ್ಶನ್​ ತೂಗುದೀಪ ಅವರ ಸೋದರಳಿಯ ಮನೋಜ್​ ಟಕ್ಕರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ, ಈಗಾಗಲೇ ಪದಾರ್ಪಣೆ ಮಾಡಿದ್ದಾರೆ..ಪೋಸ್ಟರ್ ಹಾಗು ಟೀಸರ್ ನಿಂದಲೇ ಟಾಕ್ ನಲ್ಲಿರೋ ಟಕ್ಕರ್ ಸಿನಿಮಾದ, ಟ್ರೈಲರ್ ಹಾಗು ಆಡಿಯೋವನ್ನ ಬಿಡುಗಡೆ ಮಾಡಲಾಯಿತು..ಸೋದರಳಿಯನಿಗೆ ಮೊದಲಿನಿಂದಲೂ ಸಪೋರ್ಟ್ ಮಾಡ್ತಾ ಬಂದಿರೋ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಟಕ್ಕರ್ , ಚಿತ್ರದ ಟ್ರೈಲರ್ ಹಾಗು ಆಡಿಯೋ ಬಿಡುಗಡೆ ಮಾಡಿ, ಶಬ್ಬಾಶ್ ಎಂದ್ರು.ಹಾಗೇ ಫ್ಯಾಷನ್ ಇರೋ ನಿರ್ಮಾಪಕರು ಉಳಿಯಬೇಕು ಅಂತಾ ದರ್ಶನ್ ಹೇಳಿದ್ರು.ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾ ಆಗಿದೆ..ರನ್ ಆ್ಯಂಟೋನಿ ಸಿನಿಮಾ‌ ಮಾಡಿದ್ದ, ರಘು ಶಾಸ್ತ್ರೀ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ..ಸೆಲೆಬ್ರಿಟಿಗಳ ಪರ್ಸನಲ್ ವಿಡಿಯೋ ಹಾಗು ಫೋಟೋಗಳ ಲಿಕ್ ಆಗುತ್ತೆ ಎಂಬ ಕಥೆಯನ್ನ ರಘು ಶಾಸ್ತ್ರಿ ಹೇಳೋದಿಕ್ಕೆ ಹೊರಟ್ಟಿದ್ದಾರೆ..ಚಿಕ್ಕವಯಸ್ಸಿನಿಂದಲೇ ಮಾಮನ ಸಿನಿಮಾ ನೋಡಿ ಬೆಳೆದಿರುವ ಮನೋಜ್ ಪಕ್ಕಾ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ಈ ಚಿತ್ರದಲ್ಲಿ ದರ್ಶನ್ ಆಕ್ಟ್ ಮಾಡಿಲ್ಲ ಆದ್ರೆ ದಾಸನ ಛಾಯೆ ಈ ಸಿನಿಮಾದಲ್ಲಿ ಇರುತ್ತೆ ಅನ್ನೋದು ಚಿತ್ರದ ಹೈಲೆಟ್ಸ್.. ಪುಟ್ಟ ಗೌರಿ ಖ್ಯಾತಿಯ ರಜನಿ ಮನೋಜ್ ಗೆ ಜೋಡಿಯಾಗಿ‌ದ್ದು, ಈ ಚಿತ್ರದಲ್ಲಿ ರಜನ‌ ಮೆಡಿಕಲ್ ಸ್ಟೂಡೆಂಟ್ ಪಾತ್ರವನ್ನ ಪ್ಲೇ ಮಾಡಿದ್ದಾರೆ..ಭಜರಂಗಿ ಸಿನಿಮಾ ಖ್ಯಾತಿಯ ಲೋಕಿ ಹಾಲಿವುಡ್ ಶೈಲಿಯ ಖಳನಾಯಕನಾಗಿ ಆಕ್ಟ್ ಮಾಡಿದ್ದಾರೆ..Body:ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡುತ್ತಿರುವ,ಟಕ್ಕರ್ ಸಿನಿಮಾಗೆ ವಿಲಯಂ ಡೇವಿಡ್ ಕ್ಯಾಮೆರಾ ವರ್ಕ್ ಇದೆ.. ಮಾಡುತ್ತಿದ್ದಾರೆ. ಹುಲಿರಾಯ ಸಿನಿಮಾಗೆ ಬಂಡವಾಳ ಹಾಕಿದ್ದ ನಾಗೇಶ್ ಕೋಗಿಲು ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿರೋ ಟಕ್ಕರ್ ಸಿನಿಮಾ, ಸದ್ಯದಲ್ಲೇ ಸೆನ್ಸಾರ್ ಮುಗಿಸಿ ಪ್ರೇಕ್ಷಕರ ಮುಂದೆ ಬರಲಿದೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.