ಟೀಸರ್, ಪೋಸ್ಟರ್, ಟೈಟಲ್ನಿಂದಲೇ ಗಮನ ಸೆಳೆದಿದ್ದ ಸತೀಶ್ ನೀನಾಸಂ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಬ್ರಹ್ಮಚಾರಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಶೇಕಡಾ 100 ರಷ್ಟು ಮನರಂಜನೆ ಸಿನಿಮಾ ಇದು ಎಂಬುದು ಟ್ರೈಲರ್ ನೋಡಿದಾಗ ತಿಳಿಯುತ್ತದೆ.
ಟ್ರೈಲರ್ ಬಿಡುಗಡೆ ಆದ ಕೆಲವೆ ಗಂಟೆಗಳಲ್ಲಿ 35 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದಾರೆ. ಟ್ರೈಲರ್ನಲ್ಲಿ ಬ್ರಹ್ಮಚಾರಿ ಪಡುವ ಪಜೀತಿಗೆ ನಗದೆ ಇರಲು ಖಂಡಿತ ಸಾಧ್ಯವಿಲ್ಲ. ಕೌಟುಂಬಿಕ ಕಥೆ ಹೊಂದಿರುವ 'ಬ್ರಹ್ಮಚಾರಿ' ಚಿತ್ರವನ್ನು ಹಾಸ್ಯದ ಮೂಲಕ ಸಿನಿರಸಿಕರಿಗೆ ಊಣ ಬಡಿಸಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದು, ಚಿತ್ರದಲ್ಲಿ ಯಾವುದೇ ಮುಜುಗರವಾಗುವಂತ ದೃಶ್ಯಗಳಿಲ್ಲ, ಖಂಡಿತ ಕುಟುಂಬದೊಂದಿಗೆ ಬಂದು ಸಿನಿಮಾ ನೋಡಬಹುದು ಎಂದು ನಿರ್ದೇಶಕ ಚಂದ್ರಮೋಹನ್ ಹೇಳಿದ್ದಾರೆ. 'ಬ್ರಹ್ಮಚಾರಿ' ಚಿತ್ರದಲ್ಲಿ ನನ್ನ ಪಾತ್ರ ಈ ಹಿಂದೆ ನಾನು ಮಾಡಿದ್ದ ಪ್ರಯೋಗಾತ್ಮಕ ಪಾತ್ರಗಳ ರೀತಿಯಲ್ಲೇ ಇದೆ. ಯಾವುದೇ ನಟ 'ಬ್ರಹ್ಮಚಾರಿ' ಚಿತ್ರದ ಪಾತ್ರವನ್ನು ಮಾಡಲು ಮನಸ್ಸು ಮಾಡುವುದಿಲ್ಲ. ಆದರೆ ಈ ಚಿತ್ರವನ್ನು ನೋಡಿದ ಮೇಲೆ ನಾನು ಯಾವ ಕಾರಣಕ್ಕೆ ಈ ಪಾತ್ರ ಮಾಡಲು ಒಪ್ಪಿದೆ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಸತೀಶ್ ನೀನಾಸಂ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.
- " class="align-text-top noRightClick twitterSection" data="">
ಚಿತ್ರದಲ್ಲಿ ಅದಿತಿ ಪ್ರಭುದೇವ, ಸತೀಶ್ ಜೊತೆ ಸ್ವಲ್ಪ ಗ್ಲಾಮರಸ್ ಆಗಿ ಕಾಣಿಸಿದ್ದಾರೆ. 'ರಂಗನಾಯಕಿ' ಸಿನಿಮಾದ ಪಾತ್ರಕ್ಕೆ ತದ್ವಿರುದ್ಧ ಪಾತ್ರದಲ್ಲಿ ಕಾಣಿಸಿರುವುದಾಗಿ ಅದಿತಿ ಹೇಳಿದರು. ಇನ್ನು ಈಗಾಗಲೇ 'ಬ್ರಹ್ಮಚಾರಿ' ಚಿತ್ರದ 'ಹಿಡ್ಕ ಹಿಡ್ಕ' ಹಾಡು ಪಡ್ಡೆಗಳಿಗೆ ಬಹಳ ಇಷ್ಟವಾಗಿದ್ದು ಈ ಚಿತ್ರಕ್ಕೆ ಪ್ಲಸ್ ಆಗಿದೆ. ಸದ್ಯಕ್ಕೆ 'ಬ್ರಹ್ಮಚಾರಿ' ಸೆನ್ಸಾರ್ ಕದ ತಟ್ಟಲು ರೆಡಿಯಾಗಿದ್ದು ಎಲ್ಲಾ ಅಂದುಕೊಂಡಂತೆ ಅದರೆ ನವೆಂಬರ್ ಕೊನೆಯ ವಾರದಲ್ಲಿ ಚಿತ್ರವನ್ನು ರಿಲೀಸ್ ಮಾಡುವುದಾಗಿ ನಿರ್ಮಾಪಕ ಉದಯ್ ಮೆಹ್ತಾ ಹೇಳಿದ್ದಾರೆ.