ETV Bharat / sitara

ಕಚೇರಿ ನೆಲಸಮ ಪ್ರಕರಣ..ಕಂಗನಾ ಪರ ತೀರ್ಪು ನೀಡಿದ ಮುಂಬೈ ಹೈಕೋರ್ಟ್

ಮುಂಬೈನ ಪಾಲಿಹಿಲ್ಸ್​​​​​​​ನ ಕಂಗನಾ ರಣಾವತ್ ಕಚೇರಿ ನೆಲಸಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಹೈಕೋರ್ಟ್ ವಿಚಾರಣೆ ನಡೆಸಿದ್ದು ಇಂದು ಕಂಗನಾ ಪರ ನ್ಯಾಯಾಲಯ ತೀರ್ಪು ನೀಡಿದೆ. ಕಚೇರಿ ಧ್ವಂಸದಿಂದ ಕಂಗನಾಗೆ ಆಗಿರುವ ನಷ್ಟದ ಬಗ್ಗೆ ಮೌಲ್ಯಮಾಪನ ಮಾಡಿ ವರದಿ ನೀಡುವಂತೆ ಬಿಎಂಸಿಗೆ ಹೈಕೋರ್ಟ್ ಆದೇಶಿಸಿದೆ.

Kangana Ranaut
ಕಂಗನಾ ಪರ ತೀರ್ಪು
author img

By

Published : Nov 27, 2020, 11:55 AM IST

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈ ಕಚೇರಿ ನೆಲಸಮ ಪ್ರಕರಣ ವಿಚಾರಣೆಯಲ್ಲಿ ಮುಂಬೈ ಹೈಕೋರ್ಟ್​ ಕಂಗನಾ ಪರ ತೀರ್ಪು ನೀಡಿದೆ. ಕಚೇರಿ ನೆಲಸಮ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಕೋಟಿ ರೂಪಾಯಿ ಪರಿಹಾರಕ್ಕಾಗಿ ಕಂಗನಾ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕಂಗನಾಗೆ ಬಿಎಂಸಿ ಪರಿಹಾರ ನೀಡುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.

ಕಚೇರಿ ನೆಲಸಮ ಆಗಿರುವುದರಿಂದ ಕಂಗನಾಗೆ ಎಷ್ಟು ನಷ್ಟವುಂಟಾಗಿದೆ ಎಂಬುದನ್ನು ಮೌಲ್ಯಮಾಪನ ಮಾಡಿ ತಿಳಿಸುವಂತೆ ಕೋರ್ಟ್ ಆದೇಶ ನೀಡಿದ್ದು ಇದು ಕಂಗನಾಗೆ ಸಂದ ಜಯವಾಗಿದೆ. ಮುಂಬೈ ನಗರದ ಪಾಲಿಹಿಲ್ಸ್​​​ನಲ್ಲಿ ಕಂಗನಾ ರಣಾವತ್ ಅಕ್ರಮವಾಗಿ ಕಚೇರಿ ಮಾಡಿದ್ದಾರೆ ಎಂದು ಆರೋಪಿಸಿ ಸೆಪ್ಟೆಂಬರ್ 9 ರಂದು ಮುಂಬೈ ಕಚೇರಿಯನ್ನು ಬಿಎಂಸಿ ಧ್ವಂಸ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಗನಾ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಕೊನೆಗೂ 2 ತಿಂಗಳ ಸತತ ಹೋರಾಟದ ನಂತರ ಕಂಗನಾಗೆ ಜಯ ದೊರೆತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.