ಶಿಮ್ಲಾ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಮಾನವರ ಪ್ರೀತಿಯನ್ನು ಗೆಲ್ಲಲು ನೀವು ನಿಮ್ಮೆಲ್ಲರನ್ನೂ ನೀಡಬಹುದು, ಆದರೆ, ಒಂದು ಸಣ್ಣ ತಪ್ಪಿನಿಂದ ಅವರು ನಿಮ್ಮ ಬಗ್ಗೆ ತಮ್ಮ ಮನಸು ಬದಲಾಯಿಸುತ್ತಾರೆ. ಆದರೆ, ಒಮ್ಮೆ ಒಂದು ಪ್ರಾಣಿಯು ನಿಮಗೆ ಹೃದಯವನ್ನು ನೀಡಿದರೆ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ ಎಂದು ಬರೆದುಕೊಂಡಿದ್ದಾರೆ.
ಕಂಗನಾ ಆಗಾಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಇದರಿಂದಾಗಿ ಅನೇಕ ಬಾರಿ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ.
ನಿನ್ನೆ ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ದೇಶದ ಹೆಸರನ್ನು ಭಾರತದಿಂದ 'ಭಾರತ್' ಎಂದು ಬದಲಾಯಿಸುವ ಬೇಡಿಕೆ ಎತ್ತಿದರು. ಇದರ ವಿರುದ್ಧ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು.